ETV Bharat / bharat

ದಾರಿತಪ್ಪಿಸುವ ಜಾಹೀರಾತು ಪ್ರಕಟ: ಶಂಕರ್‌ ಐಎಎಸ್‌ ಅಕಾಡೆಮಿಗೆ ₹5 ಲಕ್ಷ ದಂಡ - Shankar IAS Academy Fined - SHANKAR IAS ACADEMY FINED

ಯುಪಿಎಸ್‌ಸಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶದ ಬಗ್ಗೆ ದಾರಿತಪ್ಪಿಸುವ ಜಾಹೀರಾತು ನೀಡಿದ ಆರೋಪದ ಮೇರೆಗೆ ದೆಹಲಿಯ ಶಂಕರ್ ಐಎಎಸ್‌ ಅಕಾಡೆಮಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ 5 ಲಕ್ಷ ರೂ. ದಂಡ ವಿಧಿಸಿದೆ.

Shankar IAS Academy
ಶಂಕರ್‌ ಐಎಎಸ್‌ ಅಕಾಡೆಮಿ (ETV Bharat)
author img

By ETV Bharat Karnataka Team

Published : Sep 2, 2024, 3:33 PM IST

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶದ ಬಗ್ಗೆ ದಾರಿತಪ್ಪಿಸುವ ಜಾಹೀರಾತು ನೀಡಿದ ಆರೋಪದ ಮೇರೆಗೆ ದೆಹಲಿಯ ಕರೋಲ್ ಬಾಗ್​​ನಲ್ಲಿರುವ ಶಂಕರ್ ಐಎಎಸ್‌ ಅಕಾಡೆಮಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) 5 ಲಕ್ಷ ದಂಡ ವಿಧಿಸಿದೆ.

ಕೋಚಿಂಗ್ ಇನ್‌ಸ್ಟಿಟ್ಯೂಟ್ ತನ್ನ ಜಾಹೀರಾತುಗಳಲ್ಲಿ ಯುಪಿಎಸ್‌ಸಿ ತೇರ್ಗಡೆಯಾದ ಅಭ್ಯರ್ಥಿಗಳ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಕಟಿಸಿದೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಯುಪಿಎಸ್​ಸಿ ಆಕಾಂಕ್ಷಿಗಳನ್ನು ಆಕರ್ಷಿಸುವ ಉದ್ದೇಶದಿಂದ ಕೋಚಿಂಗ್ ಸಂಸ್ಥೆ ಜಾಹೀರಾತುಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಲಾಗಿದೆ.

ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದ ಯಾವುದೇ ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಲು ಸಾಧ್ಯವಾಗದಂತೆ 2019 ರಲ್ಲಿ ಜಾರಿಗೆ ಬಂದ ಗ್ರಾಹಕ ಸಂರಕ್ಷಣಾ ಕಾಯ್ದೆಯ ನಿಬಂಧನೆಗಳ ಅಡಿ ಗ್ರಾಹಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ಕೋಚಿಂಗ್ ಸಂಸ್ಥೆಗೆ ದಂಡ ವಿಧಿಸಿದೆ.

ಈ ಬಗ್ಗೆ ಸಿಸಿಪಿಎ ಮುಖ್ಯಸ್ಥೆ ನಿಧಿ ಖರೆ ಮಾತನಾಡಿ, ವಿವಿಧ ವರದಿಗಳ ಪ್ರಕಾರ ಪ್ರತಿ ವರ್ಷ ಸುಮಾರು 10 ಲಕ್ಷ ಅಭ್ಯರ್ಥಿಗಳು ಯುಪಿಎಸ್‌ಸಿಗೆ ಅರ್ಜಿ ಸಲ್ಲಿಸುತ್ತಾರೆ. ಈ ಅಭ್ಯರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಶಂಕರ್ ಐಎಎಸ್ ಅವರ ಜಾಹೀರಾತು ಸಿದ್ಧಪಡಿಸಿದೆ. 2022ರ ಯುಪಿಎಸ್​ಸಿ ಫಲಿತಾಂಶಗಳಲ್ಲಿ ತನ್ನನ್ನು ಅತ್ಯುತ್ತಮ ಕೋಚಿಂಗ್ ಸಂಸ್ಥೆ ಎಂದು ತೋರಿಸಿಕೊಳ್ಳಲು ಅಕಾಡೆಮಿ ದಾರಿ ತಪ್ಪಿಸುವ ಡೇಟಾವನ್ನು ನೀಡಿದೆ. ಅಕಾಡೆಮಿ ಹಲವು ಕೋರ್ಸ್‌ಗಳನ್ನು ನಡೆಸುತ್ತಿದೆ ಎಂದು ತನಿಖೆಯಲ್ಲಿ ಕಂಡು ಬಂದಿದೆ. ಆದರೆ, ಅರ್ಹತೆ ಪಡೆದ ಅಭ್ಯರ್ಥಿಗಳ ಬಗ್ಗೆ ಪ್ರಚಾರದ ವೇಳೆ ಸಂಸ್ಥೆ ಸತ್ಯಗಳನ್ನು ಮರೆಮಾಚಿದೆ. ಇದು ಅಭ್ಯರ್ಥಿಗಳಲ್ಲಿ ತಪ್ಪು ಅಭಿಪ್ರಾಯವನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ.

2022ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅರ್ಹತೆ ಸಾಧಿಸಿ, ಆಯ್ಕೆಯಾದ 933 ಅಭ್ಯರ್ಥಿಗಳ ಪೈಕಿ 336 ಅಭ್ಯರ್ಥಿಗಳು ಶಂಕರ್‌ ಐಎಎಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಮೊದಲ 100 ರ‍್ಯಾಂಕ್‌ ಪಡೆದ ಅಭ್ಯರ್ಥಿಗಳಲ್ಲಿ 40 ಅಭ್ಯರ್ಥಿಗಳು ನಮ್ಮ ಅಕಾಡೆಮಿಯಲ್ಲಿ ಅಧ್ಯಯನ ಮಾಡಿದ್ದಾರೆ. ಇದರ ಜೊತೆಗೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ತಮಿಳುನಾಡಿನ 40 ಅಭ್ಯರ್ಥಿಗಳಲ್ಲಿ 37 ಮಂದಿ ನಮ್ಮ ಸಂಸ್ಥೆಯಲ್ಲಿ ಕೋಚಿಂಗ್ ಪಡೆದಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿತ್ತು.

ಇದನ್ನೂ ಓದಿ: ವಕ್ಫ್ ನೇಮಕಾತಿಯಲ್ಲಿ ಅಕ್ರಮ ಆರೋಪ: ಇಡಿಯಿಂದ ಆಪ್​ ಶಾಸಕ ಅಮಾನತುಲ್ಲಾ ಖಾನ್​ ಬಂಧನ - ED Arrests Amanatullah Khan

ETV Bharat Logo

Copyright © 2025 Ushodaya Enterprises Pvt. Ltd., All Rights Reserved.