ETV Bharat / bharat

ನೀರಿಗಾಗಿ ಆಗ್ರಹಿಸಿ ದೆಹಲಿ ಸಚಿವೆ ಅತಿಶಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ: ಬಿಜೆಪಿ ಗರಂ - indefinite hunger strike - INDEFINITE HUNGER STRIKE

ಹರಿಯಾಣ ಸರ್ಕಾರ ದೆಹಲಿ ಪಾಲಿನ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿ ದೆಹಲಿ ಸಚಿವೆ ಹಾಗೂ ಆಪ್​ ಪಕ್ಷದ ನಾಯಕರು ಶುಕ್ರವಾರ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.

ಸಚಿವೆ ಅತಿಶಿ
ಸಚಿವೆ ಅತಿಶಿ (ETV Bharat)
author img

By ETV Bharat Karnataka Team

Published : Jun 22, 2024, 8:53 AM IST

ನವದೆಹಲಿ: ಹರಿಯಾಣ ಸರ್ಕಾರ ದೆಹಲಿ ಪಾಲಿನ ನೀರನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ದೆಹಲಿಯ ಜಲಸಂಪನ್ಮೂಲ ಸಚಿವೆ ಅತಿಶಿ ಶುಕ್ರವಾರ ಭೋಗಲ್, ಜಂಗ್ಪುರದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.

ಧರಣಿ ಆರಂಭಿಸುವ ಮುನ್ನ ಅತಿಶಿ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದರು. ಈ ವೇಳೆ, ಸುನಿತಾ ಕೇಜ್ರಿವಾಲ್, ಸಂಜಯ್ ಸಿಂಗ್, ಸೌರಭ್ ಭಾರದ್ವಾಜ್ ಸೇರಿದಂತೆ ಹಲವು ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಈ ಮಧ್ಯೆ, ಅರವಿಂದ್ ಕೇಜ್ರಿವಾಲ್ ತಮಗೆ ಬರೆದಿರುವ ಪತ್ರವನ್ನು ಓದಿದ ಪತ್ನಿ ಸುನಿತಾ ಕೇಜ್ರಿವಾಲ್, "ದೆಹಲಿ ಜನರು ನೀರಿನ ಸಮಸ್ಯೆ ಎದುರಿಸುತ್ತಿರುವುದು ನೋಡಿ ಅರವಿಂದ್ ಕೇಜ್ರಿವಾಲ್ ಬೇಸರ ವ್ಯಕ್ತಪಡಿಸಿದ್ದಾರೆ. ಅತಿಶಿ ಅವರ ಈ ಹೋರಾಟ ಯಶಸ್ವಿಯಾಗಲಿ ಹಾಗೂ ದೆಹಲಿ ನಿವಾಸಿಗಳಿಗೆ ಪರಿಹಾರ ಸಿಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಸಚಿವೆ ಅತಿಶಿ, ಮಹಾತ್ಮ ಗಾಂಧಿಯವರು ಅನ್ಯಾಯದ ವಿರುದ್ಧ ಹೋರಾಡಬೇಕಾದರೆ, ಸತ್ಯಾಗ್ರಹದ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಹಾಗಾಗಿ ದೆಹಲಿ ಪರ ಜಲ ಸತ್ಯಾಗ್ರಹ ಆರಂಭಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ನಡುವೆ ದೆಹಲಿ ಸರ್ಕಾರದ ನಿರ್ಧಾರವನ್ನು ಬಿಜೆಪಿ ಖಂಡಿಸಿದೆ. ಸಚಿವೆ ಅತಿಶಿ ಅವರು ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಈಗ ಕೇವಲ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ಗರಂ ಆಗಿದೆ.

ಬಿಜೆಪಿ ಸಂಸದ ವಾಗ್ದಾಳಿ: ಬಿಜೆಪಿ ಸಂಸದೆ ಬನ್ಸುರಿ ಸ್ವರಾಜ್ ದೆಹಲಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ನೀರಿನ ಸಮಸ್ಯೆ ಸ್ವಾಭಾವಿಕ ಬಿಕ್ಕಟ್ಟು ಅಲ್ಲ, ಕೇಜ್ರಿವಾಲ್ ಸರ್ಕಾರವು ಭ್ರಷ್ಟಾಚಾರವನ್ನು ಉತ್ತೇಜಿಸಲು ಮತ್ತು ಅಕ್ರಮ ಟ್ಯಾಂಕರ್ ಮಾಫಿಯಾವನ್ನು ಉತ್ತೇಜಿಸಲು ಯೋಜಿಸಿದಂತೆ ತೋರುತ್ತದೆ ಎಂದು ಆರೋಪಿಸಿದ್ದಾರೆ.

ಕೇಜ್ರಿವಾಲ್​ ಜಾಮೀನಿಗೆ ತಾತ್ಕಾಲಿಕ ತಡೆ ನೀಡಿದ ದೆಹಲಿ ಹೈಕೋರ್ಟ್: ಏತನ್ಮಧ್ಯೆ, ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್‌ಗೆ ಜಾಮೀನು ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ಹೀಗಾಗಿ ಅರವಿಂದ್ ಕೇಜ್ರಿವಾಲ್ ಇನ್ನೂ ಕೆಲವು ದಿನಗಳ ಕಾಲ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ . ಎರಡ್ಮೂರು ದಿನಗಳಲ್ಲಿ ಈ ಸಂಬಂಧ ತೀರ್ಪು ಪ್ರಕಟಿಸಲಾಗುವುದಾಗಿ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರ ಪೀಠ ತಿಳಿಸಿದೆ.

ಇದನ್ನೂ ಓದಿ: 'ಬಿಜೆಪಿ ದೇಶದ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳುತ್ತಿದೆ, ಭ್ರಷ್ಟಾಚಾರದ ಆಟ ನಿಲ್ಲಬೇಕು': ಪ್ರಿಯಾಂಕಾ, ರಾಹುಲ್​ ಗರಂ - Congress on NEET row

ETV Bharat Logo

Copyright © 2025 Ushodaya Enterprises Pvt. Ltd., All Rights Reserved.