ETV Bharat / bharat

ದೀಪಾವಳಿಯಲ್ಲಿ ದಿನದ 24 ಗಂಟೆ ಅಂಗಡಿ ತೆರೆಯಲು 111 ಶಾಪ್​ಗಳಿಗೆ ಸರ್ಕಾರದ ಅನುಮತಿ: ಎಲ್​ಜಿ ಮುದ್ರೆಯೊಂದೇ ಬಾಕಿ! - DELHI SHOP OPEN 24 HOURS

ದೆಹಲಿ ಶಾಪ್​ ಎಸ್ಟಾಬ್ಲಿಷ್​ಮೆಂಟ್​​ ಆ್ಯಕ್ಟ್​ 1954ರ ಸೆಕ್ಷನ್​ 14, 15 ಮತ್ತು 16ರ ಅನುಸಾರ 111 ಅಂಗಡಿಗಳಿಗೆ ದಿನದ 24 ಗಂಟೆ ತೆರೆಯಲು ಅವಕಾಶ ನೀಡಲಾಗಿದೆ.

delhi-government-tuesday-approved-opening-of-111-shops-for-24-hours
ದೆಹಲಿ ಅಂಗಡಿಗಳು (ಈಟಿವಿ ಭಾರತ್​)
author img

By ETV Bharat Karnataka Team

Published : Oct 30, 2024, 12:22 PM IST

ನವದೆಹಲಿ: ದೀಪಾವಳಿ ಹಿನ್ನೆಲೆ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರದ ಜೊತೆಗೆ ಆರ್ಥಿಕ ಅಭಿವೃದ್ಧಿ ಉದ್ದೇಶದಿಂದ ದೆಹಲಿಯಲ್ಲಿ 111ಕ್ಕಿಂತ ಹೆಚ್ಚು ಅಂಗಡಿಗಳಿಗೆ 24 ಗಂಟೆಗಳ ಕಾಲ ತೆರೆಯಲು ಮುಖ್ಯಮಂತ್ರಿ ಅತಿಶಿ ಅನುಮತಿ ನೀಡಿದ್ದಾರೆ. ದೆಹಲಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಈ ಉಪಕ್ರಮಕ್ಕೆ ಮುಂದಾಗಿದೆ.

ದಿನದ 24ಗಂಟೆ ವ್ಯವಹಾರಕ್ಕೆ ಅನುಮತಿ ನೀಡುವಂತೆ ಕೋರಿ ದೆಹಲಿಯ ಕಾರ್ಮಿಕ ಇಲಾಖೆ ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾವನೆ ಸಲ್ಲಿಸಿತ್ತು. ಎಲ್ಲ ವಾಣಿಜ್ಯ, ಚಿಲ್ಲರೆ ವ್ಯಾಪಾರ ಮತ್ತು ಉದ್ಯಮ ವರ್ಗಗಳಿಗೆ ಈ ಅವಕಾಶ ನೀಡಲಾಗಿದೆ. ಈ ಅಂಗಡಿಗಳ ವ್ಯವಹಾರ ಚಟುವಟಿಕೆ ಕುರಿತು ಒಂದು ಕಣ್ಣಿಟ್ಟಿರಲಿದೆ. ಒಂದು ವೇಳೆ ಅಂಗಡಿಗಳು ನಿಯಮ ಉಲ್ಲಂಘಿಸಿದರೆ, ದೆಹಲಿ ಶಾಪ್​ ​ ಎಸ್ಟಾಬ್ಲಿಷ್​​ಮೆಂಟ್​ ಆ್ಯಕ್ಟ್​ 1954 ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಸದ್ಯ ಈ ಪ್ರಸ್ತಾಪ ದೆಹಲಿ ಲೆಫ್ಟಿನೆಂಟ್​ ಗವರ್ನರ್​ ಮುಂದಿದ್ದು, ಅಧಿಕೃತ ಮುದ್ರೆಯೊಂದೇ ಬಾಕಿ ಇದೆ.

delhi-government-tuesday-approved-opening-of-111-shops-for-24-hours
ದೆಹಲಿಯ ರಸ್ತೆಗಳಲ್ಲಿ ದೀಪಾವಳಿ ಸಂಭ್ರಮ (ಈಟಿವಿ ಭಾರತ್​​)

24 ಗಂಟೆ ಬಾಗಿಲು ತೆರೆಯಲಿರುವ ಅಂಗಡಿಗಳು: ದೆಹಲಿ ಶಾಪ್​ ಎಸ್ಟಾಬ್ಲಿಷ್​ಮೆಂಟ್​ ಆ್ಯಕ್ಟ್​ 1954ರ ಸೆಕ್ಷನ್​ 14, 15 ಮತ್ತು 16ರ ಅನುಸಾರ 111 ಅಂಗಡಿಗಳಿಗೆ ದಿನದ 24 ಗಂಟೆ ತೆರೆಯಲು ಅವಕಾಶ ನೀಡಲಾಗಿದೆ. ಸದ್ಯ ಬೇಸಿಗೆಯಲ್ಲಿ ರಾತ್ರಿ 9 ರಿಂದ 7 ಮತ್ತು ಚಳಿಗಾಲದಲ್ಲಿ ರಾತ್ರಿ 8 ರಿಂದ ಬೆಳಗ್ಗೆ 8 ಗಂಟೆವರೆಗೆ ಅಂಗಡಿಗಳನ್ನು ತೆರೆಯಬಹುದಾಗಿದೆ. ಇದೀಗ 24 ಗಂಟೆ ಕಾರ್ಯ ನಿರ್ವಹಣೆಗೆ ಸರ್ಕಾರ ಮುಂದಾಗಿದ್ದು, ಇಂತಹ ಅಂಗಡಿಗಳಲ್ಲಿ ಮಹಿಳಾ ಕಾರ್ಮಿಕರು ಕಾರ್ಯ ನಿರ್ವಹಿಸುವಂತಿಲ್ಲ. ಗ್ರಾಹಕರು ಕಾಯುತ್ತಿದ್ದರೆ, ಅಂಗಡಿ ತೆರೆಯಲು ಹೆಚ್ಚುವರಿ 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.

175 ಅರ್ಜಿಗಳ ಸ್ವೀಕಾರ: ಸರ್ಕಾರ 24 ಗಂಟೆ ಅವಧಿಗೆ ಕಾರ್ಯ ನಿರ್ವಹಣೆಗೆ ಅವಕಾಶ ನೀಡುವ ಬೆನ್ನಲ್ಲೇ ಕಾರ್ಮಿಕ ಇಲಾಖೆಗೆ 175ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದರು. ಈ ಪೈಕಿ 111 ಅರ್ಜಿಗಳು ಎಲ್ಲ ಮಾನದಂಡಗಳನ್ನು ಪೂರೈಸಿರುವುದು ಕಂಡು ಬಂದಿದ್ದು, ಅನುಮೋದನೆ ನೀಡಲಾಗಿದೆ.

ಸಿಎಂ ಅತಿಶಿ (ಈಟಿವಿ ಭಾರತ್​)

ತೆರೆದ 700 ಶಾಪ್​ಗಳು: 24 ಗಂಟೆ ಕಾರ್ಯ ನಿರ್ವಹಿಸಲು ಅನುಮತಿ ಪಡೆಯುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿದೆ. ಕಾಲಕಾಲಕ್ಕೆ, ಮಾನದಂಡಗಳನ್ನು ಪೂರೈಸುವ ವಾಣಿಜ್ಯ ಸಂಸ್ಥೆಗಳಿಗೆ ಸರ್ಕಾರ ಅನುಮೋದನೆ ನೀಡುತ್ತದೆ. ಈ ಹಿಂದೆ, ಫೆಬ್ರವರಿಯಲ್ಲಿ 23 ಅಂಗಡಿಗಳು ಮತ್ತು ಸಂಸ್ಥೆಗಳು 24 ಗಂಟೆಗಳ ಕಾಲ ತೆರೆಯಲು ಅವಕಾಶ ನೀಡಲಾಗಿತ್ತು. ಜನವರಿಯಲ್ಲಿ 32 ಅಂಗಡಿಗಳು ಮತ್ತು 2023ರ ಆಗಸ್ಟ್​ನಲ್ಲಿ 29 ಮತ್ತು 2023 ನವೆಂಬರ್ ರಲ್ಲಿ 83 ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಅನುಮತಿಸಲಾಗಿದೆ. ಈ ಬಾರಿ 111 ಹೆಚ್ಚಿನ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಮಂಗಳವಾರ 24 ಗಂಟೆ ತೆರೆಯಲು ಅನುಮತಿಸಲಾಗಿದೆ.

ದೆಹಲಿಯಲ್ಲಿ ಉದ್ಯಮ ಚಟುವಟಿಕೆ ಪೂರಕ ವಾತಾವರಣ ಸೃಷ್ಟಿಸಲು ದೆಹಲಿ ಸರ್ಕಾರ ಗಂಭೀರವಾಗಿ ಕಾರ್ಯ ನಿರ್ವಹಿಸುತ್ತಿದೆ. ಆರ್ಥಿಕತೆ ಅಭಿವೃದ್ಧಿಯಲ್ಲಿ ಇದೊಂದು ದೊಡ್ಡ ಉತ್ತೇಜಕ ಕ್ರಮವಾಗಲಿದೆ.

ಇದನ್ನೂ ಓದಿ: ಶೇ 77ರಷ್ಟು ಮಹಿಳೆಯರಿಗೆ ಕತ್ತಲಾಗುತ್ತಿದ್ದಂತೆ ಬಸ್​ಗಳಲ್ಲಿ ಅಸುರಕ್ಷತೆ ಭಾವ: ವರದಿಯಲ್ಲಿ ಬಯಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.