ETV Bharat / bharat

ಡೆಹ್ರಾಡೂನ್​ ಅಪ್ರಾಪ್ತೆ ಮೇಲಿನ ಗ್ಯಾಂಗ್​ ರೇಪ್​ ಪ್ರಕರಣ; ತನಿಖೆಗೆ ಎಸ್​ಐಟಿ ರಚನೆ - Dehradun Teenager Gangrape - DEHRADUN TEENAGER GANGRAPE

ದೆಹಲಿಯಿಂದ ಡೆಹ್ರಾಡೂನ್​ಗೆ ಬಸ್​ನಲ್ಲಿ ಚಲಾಯಿಸಿದ ಅಪ್ರಾಪ್ತೆ ಮೇಲೆ ಸರ್ಕಾರಿ ಬಸ್​ ಚಾಲಕರು ಮತ್ತು ಕಂಡಕ್ಟರ್​ಗಳು ಹೀನ ಕೃತ್ಯ ಎಸಗಿದ್ದರು.

dehradun-teenager-gangrape-case-sit
ಬಂಧಿತ ಆರೋಪಿಗಳೊಂದಿಗೆ ಪೊಲೀಸರು (ಈಟಿವಿ ಭಾರತ್​​)
author img

By ETV Bharat Karnataka Team

Published : Aug 20, 2024, 1:05 PM IST

ಡೆಹ್ರಾಡೂನ್​: ಇಲ್ಲಿನ ಐಎಸ್​ಬಿಟಿಯಲ್ಲಿ ನಿಂತ ಬಸ್​ನಲ್ಲಿ ಅನಾಥ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಉತ್ತರಾಖಂಡ್​​ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದ ವಿಚಾರಣೆಗಾಗಿ ಎಸ್​ಪಿ ಪ್ರಮೋದ್​ ಕುಮಾರ್​ ನೇತೃತ್ವದ 8 ಮಂದಿಯನ್ನೊಳಗೊಂಡ ಎಸ್​ಐಟಿ ತಂಡ ರಚಿಸಲಾಗಿದೆ.

ಹಿರಿಯ ಪೊಲೀಸ್​ ಹೆಚ್ಚುವರಿ ಅಧಿಕಾರಿ (ಎಸ್​ಎಸ್​ಪಿ) ಅಜಯ್​ ಸಿಂಗ್​ ಈ ಕುರಿತು ಮಾತನಾಡಿದ್ದು, ಪ್ರಕರಣದ ಸೂಕ್ಷ್ಮತೆ ಮತ್ತು ಸಂಪೂರ್ಣ ತನಿಖೆ ಅಗತ್ಯತೆ ಹಿನ್ನೆಲೆ ಎಸ್​ಐಟಿ ತಂಡ ರಚಿಸಲಾಗಿದೆ.

ಈ ಘಟನೆ ವೇಳೆ 16 ವರ್ಷದ ಅಪ್ರಾಪ್ತೆ ದೆಹಲಿಯಿಂದ ಡೆಹ್ರಾಡೂನ್​ಗೆ ಸರ್ಕಾರಿ ಬಸ್​ನಲ್ಲಿ ಪ್ರಯಾಣ ಬೆಳೆಸಿದ್ದಳು. ಉತ್ತರಾಖಂಡ್​ ಸಾರಿಗೆ ಸಂಸ್ಥೆಯ ಬಸ್​​ನ ಈ ಪ್ರಯಾಣದ ಸಂಪೂರ್ಣ ಫುಟೇಜ್​ ಅನ್ನು ಸಂಗ್ರಹಿಸಲಾಗಿದ್ದು, ಇದಕ್ಕಾಗಿ ಮೇಲ್ವಿಚಾರಣಾ ತಂಡವನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಎಸ್​ಪಿ ಪ್ರಮೋದ್​ ಕುಮಾರ್​ ಎಸ್​ಐಟಿ ತಂಡದ ಮುಖ್ಯಸ್ಥರಾಗಿದ್ದು, ಸರ್ದಾರ್​ನ ಸರ್ಕಲ್​ ಆಫೀಸರ್​ ಅನಿಲ್​ ಜೋಶಿ, ಪ್ರೇಮ್​ನಗರ್​ನ ಸರ್ಕಲ್​ ಆಧಿಕಾರಿ ರೀನಾ ರಾಥೋರ್​, ಇನ್ಸ್​ಪೆಕ್ಟರ್​​ ಕಮಲ್​ ಕುಮಾರ್​, ಇನ್ಸ್​ಪೆಕ್ಟರ್​​ ಶಂಕರ್​ ಸಿಂಗ್​ ಬಿಶ್ಟ್​​, ಮಹಿಳಾ ಸಬ್​ ಇನ್ಸ್​ಪೆಕ್ಟರ್​ ಜ್ಯೋತಿ ಕನ್ಯಾಲ್​, ವಿನಿತಾ ಚೌಹಣ್​, ಸಬ್​ ಇನ್ಸ್​ಪೆಕ್ಟರ್​ ಅಶೀಶ್​ ಕುಮಾರ್​​ ತಂಡದಲ್ಲಿ ಇರಲಿದ್ದಾರೆ ಎಂದು ಮಾಹಿತಿ ನೀಡಿದರು.

ಏನಿದು ಘಟನೆ: ಪೊಲೀಸರ ಪ್ರಕಾರ, ಆಗಸ್ಟ್​ 12ರಂದು ಬಾಲಕಿ ದೆಹಲಿಯ ಕಾಶ್ಮೀರಿ ಗೇಟ್​ನಿಂದ ಬಸ್​ ಹತ್ತಿದ್ದು ಸಂಜೆ 4.30ಕ್ಕೆ ಬಸ್​ ಹೊರಟಿತ್ತು. ರಾತ್ರಿ 10.30ರ ಸುಮಾರಿಗೆ ಡೆಹ್ರಾಡೂನ್​ಗೆ ಬಸ್​ ಬಂದಿತ್ತು. ಉತ್ತರ ಪ್ರದೇಶದ ಮೊರದಬಾದ್​ನ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಬಸ್​ ಐಎಸ್​ಬಿಟಿ ನಿಲುಗಡೆಯಾಗಿದ್ದು, ಇಲ್ಲಿ ಬಾಲಕಿ ಮೇಲೆ ಹೀನ ಕೃತ್ಯ ನಡೆದಿತ್ತು.

ಘಟನೆ ಸಂಬಂಧ ಇಲ್ಲಿನ ಗಾರ್ಡ್​​ ರಾಜ್ಯ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ)ಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಬಂದು ಬಾಲಕಿಯನ್ನು ರಕ್ಷಿಸಿದ್ದರು. ನಾಲ್ಕು ದಿನಗಳ ಕಾಲ ಆಕೆಯೊಂದಿಗೆ ಸಮಾಲೋಚನೆ ನಡೆಸಿ, ಮಾಹಿತಿ ಪಡೆಯಲಾಗಿದೆ. ಆಗಸ್ಟ್​ 17ರಂದು ಐಪಿಸಿ ಸೆಕ್ಷನ್​ 70(2) ಮತ್ತು ಪೋಕ್ಸೊ ಕಾಯ್ದೆ ಸೆಕ್ಷನ್​ 5(ಜಿ)/6 ಅಡಿ ಪ್ರಕರಣ ದಾಖಲಿಸಲಾಗಿದೆ.

ಐವರ ಬಂಧನ: ಬಾಲಕಿ ಪ್ರಯಾಣಿಸಿದ ಬಸ್​ ಚಾಲಕ ಧರ್ಮೇಂದ್ರ ಕುಮಾರ್ (32), ಕಂಡಕ್ಟರ್​ ದೇವೆಂಧ್ರ (52), ಮತ್ತೊಂದು ಸರ್ಕಾರಿ ಬಸ್​ ಚಾಲಕ ರವಿ ಕುಮಾರ್​ (34), ಮೂರನೇ ಸರ್ಕಾರಿ ಬಸ್​ ಚಾಲಕ ರಾಜ್​ ಪಾಲ್​ (57) ಮತ್ತು ಕ್ಯಾಶ್​ ಕಲೆಕ್ಟರ್​ ಕುಮಾರ್​ ಸೊನೆಕರ್​ (38) ಈ ಐವರು ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದು, ಇವರ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ.

ಸಿಸಿಟಿವಿ ಫುಟೇಜ್​ ಆಧಾರದ ಮೇಲೆ ಕುಮಾರ್​ನನ್ನು ಬಂಧಿಸಲಾಗಿದ್ದು, ತನಿಖೆ ವೇಳೆ ಆತ ಇತರೆ ಹೆಸರುಗಳನ್ನು ಬಾಯ್ಬಿಟ್ಟಿದ್ದಾನೆ. ಇವರೆಲ್ಲರೂ ಅಪರಾಧ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಎಸ್​ಐಟಿ ಶೀಘ್ರದಲ್ಲೇ ಸಾಕ್ಷ್ಯಗಳ ಆಧಾರದ ಮೇಲೆ ಅವರನ್ನು ಕಸ್ಟಡಿಯಲ್ ರಿಮಾಂಡ್​ಗೆ ಪಡೆಯಲಿದ್ದಾರೆ.

ಇದನ್ನೂ ಓದಿ: ಬಂಗಾಳ ವೈದ್ಯೆ ಅತ್ಯಾಚಾರ, ಕೊಲೆ ವಿರುದ್ಧ ಒಗ್ಗೂಡಿದ ಫುಟ್ಬಾಲ್​​ನ 'ಶತ್ರು ಕ್ಲಬ್​​ಗಳು'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.