ETV Bharat / bharat

ದೇಶದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ ಮತಪೆಟ್ಟಿಗೆ ಲೂಟಿ ಮಾಡಿದ್ದ ಘಟನೆ ಯಾವುದು ಗೊತ್ತಾ?

author img

By ETV Bharat Karnataka Team

Published : Mar 15, 2024, 3:01 PM IST

ಬಿಹಾರದ ಬೇಗುಸರಾಯ್‌ ಜಿಲ್ಲೆಯಲ್ಲಿ 1957ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತಗಟ್ಟೆಯನ್ನೇ ವಶಕ್ಕೆ ಪಡೆದ ಘಟನೆ ಜರುಗಿತ್ತು. ಇದು ಭಾರತೀಯ ಪ್ರಜಾಪ್ರಭುತ್ವದಲ್ಲಿ ಕರಾಳ ಅಧ್ಯಾಯವಾಗಿಯೇ ಉಳಿದಿದೆ.

dark-chapter-of-democracy-first-booth-capturing-in-1957-at-rachiyahi-in-begusarai-bihar
ಮೊದಲ ಬಾರಿಗೆ ಮತಪೆಟ್ಟಿಗೆ ಲೂಟಿ ಮಾಡಿದ್ದ ಘಟನೆ ಯಾವುದು ಗೊತ್ತಾ

ಬೇಗುಸರಾಯ್ (ಬಿಹಾರ): ದೇಶಾದ್ಯಂತ 2024ರ ಲೋಕಸಭೆ ಚುನಾವಣೆಗೆ ಸಿದ್ಧತೆಗಳು ವೇಗ ಪಡೆದುಕೊಂಡಿವೆ. ಆದರೆ, ಲೋಕಸಭೆ ಅಥವಾ ವಿಧಾನಸಭೆ ಯಾವುದೇ ಚುನಾವಣೆಯಾದರೂ ಪ್ರತಿ ಬಾರಿಯೂ ಬಿಹಾರದ ಬೇಗುಸರಾಯ್‌ನಲ್ಲಿ ನಡೆದ ಘಟನೆಯೊಂದು ನೆನಪಿಗೆ ಬರುತ್ತದೆ.

ಹೌದು, ಮೊದಲ ಬಾರಿಗೆ ಮತಗಟ್ಟೆ ವಶಪಡಿಸಿಕೊಂಡ ಸಂದರ್ಭ ಅದು. ಇದು 66 ವರ್ಷಗಳ ಹಿಂದೆ, ಅಂದರೆ 1957ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಡೆದ ಘಟನೆ. ಇದೊಂದು ಭಾರತೀಯ ಪ್ರಜಾಪ್ರಭುತ್ವದಲ್ಲಿ ಕರಾಳ ಅಧ್ಯಾಯವಾಗಿಯೇ ಉಳಿದಿದೆ. ಆಗ ಬೇಗುಸರಾಯ್​ನಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಪ್ರಬಲವಾಗಿದ್ದವು. 1952ರ ಮೊದಲ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬೇಗುಸರಾಯ್ ವಿಧಾನಸಭಾ ಸ್ಥಾನವನ್ನು ಕಾಂಗ್ರೆಸ್ ಗೆದ್ದುಕೊಂಡಿತು. 1956ರಲ್ಲಿ ಕಾಂಗ್ರೆಸ್ ಶಾಸಕರ ನಿಧನದ ನಂತರ ಉಪಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಚಂದ್ರಶೇಖರ್ ಸಿಂಗ್ ಗೆದ್ದಿದ್ದರು.

1957ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿ ಮತ್ತು ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಸರಯುಗ್ ಸಿಂಗ್ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಕಣದಲ್ಲಿದ್ದರೆ, ಕಮ್ಯುನಿಸ್ಟ್ ಪಕ್ಷದ ಚಂದ್ರಶೇಖರ್ ಪ್ರಸಾದ್ ಸಿಂಗ್ ಮರು ಆಯ್ಕೆ ಬಯಸಿದ್ದರು. ಇಬ್ಬರೂ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದ್ದರು.

ಚುನಾವಣೆಗಾಗಿ ಬೇಗುಸರಾಯ್​ನಿಂದ ಕೇವಲ 6 ಕಿಲೋಮೀಟರ್ ದೂರದಲ್ಲಿರುವ ರಾಚಿಯಾಹಿ ಮತಗಟ್ಟೆಯನ್ನು ನಿರ್ಮಿಸಲಾಗಿತ್ತು. ಮೂರು ಗ್ರಾಮಗಳ ಜನರು ಈ ಮತಗಟ್ಟೆಗೆ ಮತ ಚಲಾಯಿಸಲು ಬಂದಿದ್ದರು. ಮತದಾನದ ದಿನದಂದು ರಚಿಯಾಹಿ, ಮಚ್ಚಾ, ರಾಜಾಪುರ ಮತ್ತು ಆಕಾಶಪುರ ಗ್ರಾಮಗಳ ಜನರು ಮತದಾನ ಮಾಡಲು ಬರುತ್ತಿದ್ದಾಗ ಏಕಾಏಕಿ 20 ಜನರು ಆಯುಧಗಳೊಂದಿಗೆ ರಾಜಾಪುರ ಮತ್ತು ಮಚ್ಚಾ ಗ್ರಾಮಗಳ ಮತದಾರರ ಮೇಲೆ ದಾಳಿ ಮಾಡಿದ್ದರು.

ಇದಾದ ನಂತರ ಬೂತ್‌ನಲ್ಲಿದ್ದ ಕೆಲವರು ಮತದಾರರನ್ನು ಓಡಿಸಲು ಆರಂಭಿಸಿದ್ದರು. ಈ ವೇಳೆ, ಪಕ್ಷವೊಂದು ಬೂತ್ ವಶಪಡಿಸಿಕೊಂಡು ನಕಲಿ ಮತದಾನ ಮಾಡಿತ್ತು. ಈ ಘಟನೆಯ ವಿರುದ್ಧ ಪ್ರತಿಸ್ಪರ್ಧಿಯ ಪಕ್ಷ ಪ್ರತಿಭಟನೆ ನಡೆಸಿ, ತೀವ್ರ ವಾಗ್ವಾದ ನಡೆಸಿತ್ತು. ಈ ಘಟನೆ ಮರುದಿನ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಸ್ಥಳೀಯರ ಪ್ರಕಾರ, ಈ ಬೂತ್​ಅನ್ನು ವಶಪಡಿಸಿಕೊಂಡಿದ್ದು ಕಾಂಗ್ರೆಸ್ ಅಭ್ಯರ್ಥಿ ಸರಯುಗ್ ಪ್ರಸಾದ್ ಸಿಂಗ್ ಬೆಂಬಲಿಗರು. ಈ ಚುನಾವಣೆಯಲ್ಲಿ ಸರಯುಗ್ ಪ್ರಸಾದ್ ಸಿಂಗ್ ಗೆದ್ದಿದ್ದಾರೆ. ಈ ಘಟನೆಯನ್ನು ರಾಚಿಯಾಹಿ ಗ್ರಾಮದ ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಕಾಂಗ್ರೆಸ್ ಅಭ್ಯರ್ಥಿ ಸರಯುಗ್ ಪ್ರಸಾದ್ ಮತ್ತು ದರೋಡೆಕೋರ ಕಾಮದೇವ್ ಸಿಂಗ್ ನಡುವೆ ನಂಟಿತ್ತು. ಸರಯುಗ್ ಸೂಚನೆಯ ಮೇರೆಗೆ ಕಾಮದೇವ್ ಸಿಂಗ್ ಮತಪೆಟ್ಟಿಗೆಗಳನ್ನು ಲೂಟಿ ಮಾಡಿ ಮತಗಟ್ಟೆ ವಶಪಡಿಸಿಕೊಂಡಿದ್ದ ಎಂದು ಗ್ರಾಮದ ಹಿರಿಯ ರಾಮ್‌ಜಿ ಹೇಳುತ್ತಾರೆ. ಅಲ್ಲದೇ, ಬೂತ್ ವಶಪಡಿಸಿಕೊಳ್ಳುವ ಘಟನೆಯನ್ನು ಜನತೆ ಮೊದಲ ಬಾರಿಗೆ ಕೇಳಿದ್ದರು.

ಈ ಘಟನೆ ಬೇಗುಸರಾಯ್‌ಗೆ ಒಂದು ಕಳಂಕದಂತಿದೆ. ಆದರೆ, ಅಂದಿನಿಂದ ರಾಚಿಯಾಹಿಯಲ್ಲಿ ಯಾವುದೇ ಮತಗಟ್ಟೆ ವಶಪಡಿಸಿಕೊಂಡಿಲ್ಲ. ಈ ಘಟನೆಯ ಬಗ್ಗೆ ಇಡೀ ದೇಶದಲ್ಲಿ ತಪ್ಪು ಗ್ರಹಿಕೆ ಉಂಟಾಗಿದ್ದು, ಚುನಾವಣೆ ಬಂದಾಗಲೆಲ್ಲ ಮಾಧ್ಯಮದವರು ಇದನ್ನು ಹುಡುಕಿಕೊಂಡು ಬರುತ್ತಾರೆ ಎಂದು ಮತದಾರ ಧ್ರುವಕುಮಾರ್ ಹೇಳಿದರು.

ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಮಾಹಿತಿ ಬಹಿರಂಗ ಪಡಿಸಿದ ಎಲೆಕ್ಷನ್​ ಕಮಿಷನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.