ಕೋಲ್ಕತ್ತಾ: ಮೇ 23 ರಂದು ಬೆಳಗ್ಗೆ ಕೋಲ್ಕತ್ತಾದ ಕೆಲವು ಭಾಗಗಳಲ್ಲಿ ಭಾರಿ ಮಳೆ ಸುರಿದ ನಂತರ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಒಡಿಶಾ, ಗುಜರಾತ್, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳಕ್ಕೆ ‘ರೆಮಲ್’ ಚಂಡಮಾರುತದ ಎಚ್ಚರಿಕೆ ನೀಡಿದೆ.
ಪಶ್ಚಿಮ ಮಧ್ಯ ಮತ್ತು ಪಕ್ಕದ ದಕ್ಷಿಣ ಬಂಗಾಳ ಕೊಲ್ಲಿಯ ಮೇಲೆ ಕಡಿಮೆ ಒತ್ತಡ ಉಂಟಾಗಿದೆ. ಇದರಿಂದಾಗಿ ಮೇ 25 ರ ಬೆಳಗ್ಗೆ ಚಂಡಮಾರುತ ತೀವ್ರಗೊಳ್ಳುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕಡಿಮೆ ಒತ್ತಡವು ಬಲಗೊಳ್ಳುತ್ತಾ ಸಾಗುತ್ತದೆ. ಬಹಳ ಆಳವಾದ ಖಿನ್ನತೆಗೆ ಬದಲಾಗುತ್ತದೆ. ಅಷ್ಟೇ ಅಲ್ಲ ಕಡಿಮೆ ಒತ್ತಡ ಉಂಟಾಗಿ ಆ ಒತ್ತಡವು ಈಶಾನ್ಯಕ್ಕೆ ಚಲಿಸುತ್ತದೆ ಮತ್ತು ಶನಿವಾರ ಬೆಳಗ್ಗೆ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತವಾಗಿ ರೂಪಗೊಂಡು ತೀವ್ರತೆ ಪಡೆದುಕೊಳ್ಳುತ್ತದೆ. ಹೀಗಾಗಿ ಗುರುವಾರದೊಳಗೆ ಮೀನುಗಾರರು ಸಮುದ್ರದಿಂದ ವಾಪಸ್ ಆಗುವಂತೆ ಹವಾಮಾನ ಇಲಾಖೆ ಎಚ್ಚರಿಕೆಯ ಸೂಚನೆ ನೀಡಿದೆ.
ಮೇ 26 ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ರವಾನಿಸಲಾಗಿದ್ದು, ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಆರನೇ ಹಂತದ ಲೋಕಸಭೆ ಚುನಾವಣೆ ನಿಗದಿಯಾಗಿರುವ ಶನಿವಾರದಂದೇ ಪೂರ್ವ ಮಿಡ್ನಾಪುರದ ಜೊತೆಗೆ ಉತ್ತರ ಮತ್ತು ದಕ್ಷಿಣ 24 - ಪರಗಣಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ. ತುರ್ತು ಸೇವೆಗಳನ್ನು ಒದಗಿಸುವ ಬಗ್ಗೆ ಭಾರತೀಯ ಚುನಾವಣಾ ಆಯೋಗವು ವಿದ್ಯುತ್ ಇಲಾಖೆಯೊಂದಿಗೆ ಸಭೆಗಳನ್ನು ನಡೆಸುತ್ತಿದೆ.
ಮೇ 23 ರಂದು ಮಧ್ಯ ಮತ್ತು ಸುತ್ತಮುತ್ತಲಿನ ದಕ್ಷಿಣ ಬಂಗಾಳ ಕೊಲ್ಲಿಯ ಮೇಲೆ 60 kmph ಮತ್ತು 40 ರಿಂದ 50 kmph ವೇಗದ ಗಾಳಿಯೊಂದಿಗೆ ಚಂಡಮಾರುತ ಬೀಸಬಹುದು ಎಂದು ನಿರೀಕ್ಷಿಸಲಾಗಿದೆ. ಮಧ್ಯ ಬಂಗಾಳಕೊಲ್ಲಿಯಲ್ಲಿ ಗಂಟೆಗೆ 70 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೇ 25 ರಂದು ಬೆಳಗ್ಗೆಯಿಂದ 60 ರಿಂದ 70 ಕಿಮೀ ವೇಗದಲ್ಲಿ ಗಾಳಿ ಬೀಸುತ್ತದೆ ಮತ್ತು ಇದು 80 ಕಿಮೀ ವರೆಗೂ ವೇಗವನ್ನು ಪಡೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಮೇ 26 ರ ಬೆಳಗ್ಗೆಯಿಂದ ಮರುದಿನದವರೆಗೆ, ಈ ವೇಗವು ಇನ್ನೂ ಹೆಚ್ಚಾಗಲಿದೆ, ಉತ್ತರ ಬಂಗಾಳ ಕೊಲ್ಲಿಯ ಮೇಲೆ ಗಂಟೆಗೆ 120 ಕಿಮೀ ವೇಗದ ಗಾಳಿಯೊಂದಿಗೆ ಗಂಟೆಗೆ 100-110 ಕಿಮೀ ಮತ್ತು ಮಧ್ಯಭಾಗದಲ್ಲಿ ಗಂಟೆಗೆ 90 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನು ಓದಿ: ಸೋಲಾಪುರ ದೋಣಿ ದುರಂತ: ನಾಪತ್ತೆಯಾಗಿದ್ದ ಆರು ಮಂದಿಯ ಮೃತದೇಹ ಪತ್ತೆ - Solapur boat tragedy