ETV Bharat / bharat

ದೆಹಲಿ ಕೋಚಿಂಗ್ ಸೆಂಟರ್ ದುರಂತ: ಮೂರು ದಿನದಲ್ಲಿ ವರದಿ ನೀಡಲು ಸೂಚಿಸಿದ ದೆಹಲಿ ಲೆಫ್ಟಿನೆಂಟ್​ ಗವರ್ನರ್ - COACHING CENTRE TRAGEDY

author img

By PTI

Published : Jul 28, 2024, 4:40 PM IST

ದೆಹಲಿಯಲ್ಲಿ ನಡೆದ ಮಳೆ ಹಾನಿ ದುರಂತದಲ್ಲಿ ಮೂವರು ಸಾವನ್ನಪ್ಪಿದ ಘಟನೆಯ ಕುರಿತು ವರದಿ ನೀಡುವಂತೆ ಲೆಫ್ಟಿನೆಂಟ್​ ಗವರ್ನರ್​ ಆಪ್​ ಸರ್ಕಾರಕ್ಕೆ ಸೂಚಿಸಿದ್ದಾರೆ.

ದೆಹಲಿ ಲೆಫ್ಟಿನೆಂಟ್​ ಗವರ್ನರ್
ದೆಹಲಿ ಲೆಫ್ಟಿನೆಂಟ್​ ಗವರ್ನರ್ (ETV Bharat)

ನವದೆಹಲಿ: ಇಲ್ಲಿನ ಹಳೆ ರಾಜಿಂದರ್‌ ನಗರದಲ್ಲಿರುವ ರಾವ್ಸ್‌ ಐಎಎಸ್ ಸ್ಟಡಿ ಸರ್ಕಲ್‌​ನ ನೆಲಮಹಡಿಗೆ ಮಳೆ ನೀರು ನುಗ್ಗಿ ಮೂವರು ಐಎಎಸ್​ ಆಕಾಂಕ್ಷಿಗಳು ದಾರುಣವಾಗಿ ಸಾವನ್ನಪ್ಪಿದ ಘಟನೆಯ ಕುರಿತು ವರದಿ ಸಲ್ಲಿಸುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ವಿಭಾಗೀಯ ಆಯುಕ್ತರಿಗೆ ಭಾನುವಾರ ಸೂಚಿಸಿದ್ದಾರೆ.

ಘಟನೆಯು ಕ್ರಿಮಿನಲ್​ ನಿರ್ಲಕ್ಷ್ಯವಾಗಿದೆ. ಮೂಲ ಸೌಕರ್ಯ ಒದಗಿಸುವಲ್ಲಿನ ವಿಫಲತೆ. ಮೂವರು ಅಮಾಯಕರು ಬಲಿಯಾಗಿದ್ದು ಖಂಡನೀಯ. ರಾಷ್ಟ್ರ ರಾಜಧಾನಿಯಲ್ಲಿ ಇಂತಹ ಘಟನೆ ನಡೆದಿದ್ದು ದುರದೃಷ್ಟಕರ ಸಂಗತಿ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಬಗ್ಗೆ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದು, ನಾಗರಿಕ ಸೇವಾ ಆಕಾಂಕ್ಷಿಗಳ ಸಾವಿನ ಘಟನೆಯಿಂದ ತೀವ್ರ ನೋವಾಗಿದೆ. ಮಳೆ ಹಾನಿ ಸಂಬಂಧಿತ ಪ್ರಕರಣಗಳಲ್ಲಿ ಇತ್ತೀಚೆಗೆ 7 ಮಂದಿ ಸಾವನ್ನಪ್ಪಿದ್ದಾರೆ. ಈಗ ಭವಿಷ್ಯದ ಅಧಿಕಾರಿಗಳ ಸಾವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.

"ನಗರದಲ್ಲಿನ ಒಳಚರಂಡಿ ಮತ್ತು ಅದಕ್ಕೆ ಸಂಬಂಧಿತ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಸ್ಪಷ್ಟವಾಗಿ ವಿಫಲವಾಗಿದೆ. ಈ ಘಟನೆಯು ಕಳೆದೊಂದು ದಶಕದಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ದೆಹಲಿಯ ಜನರು ಆಡಳಿತ ವೈಫಲ್ಯಕ್ಕೆ ಒಳಗಾಗಿದ್ದನ್ನು ಸೂಚಿಸುತ್ತದೆ" ಎಂದು ಆಪ್​ ಸರ್ಕಾರವನ್ನು ಟೀಕಿಸಿದ್ದಾರೆ.

ಯಾವುದೋ ರಾಜ್ಯ, ಊರಿನಿಂದ ಇಲ್ಲಿಗೆ ಬಂದು ನೆಲೆಸಿ, ಬಾಡಿಗೆ ಮನೆಗಳಲ್ಲಿ ವಾಸಿಸುವ ವಿದ್ಯಾರ್ಥಿಗಳ ಮೂಲಭೂತ ಸುರಕ್ಷತೆಯನ್ನು ಪರಿಶೀಲಿಸಬೇಕಿದೆ. ತರಬೇತಿ ಸಂಸ್ಥೆಗಳು ಮತ್ತು ಮನೆಗಳ ಮಾಲೀಕರು ಅವರಿಗೆ ಒದಗಿಸಿರುವ ಭದ್ರತೆ ಬಗ್ಗೆಯೂ ತನಿಖೆ ನಡೆಯಬೇಕಿದೆ ಎಂದು ಸಕ್ಸೇನಾ ಅವರು ಹೇಳಿದ್ದಾರೆ.

ನಡೆದಿರುವ ಘಟನೆಯ ಬಗ್ಗೆ ಯಾರಿಗೂ ಕ್ಷಮೆಯಿಲ್ಲ. ಇಂತಹ ದುರಂತಗಳು ಇನ್ನು ಮುಂದೆ ನಡೆಯದಂತೆ ತಡೆಯಬೇಕಿದೆ. ಜುಲೈ 30 ರೊಳಗೆ ದುರಂತದ ಪ್ರತಿಯೊಂದು ಅಂಶವನ್ನು ಒಳಗೊಂಡಂತೆ ವರದಿಯನ್ನು ಸಲ್ಲಿಸುವಂತೆ ವಿಭಾಗೀಯ ಆಯುಕ್ತರಿಗೆ ಸೂಚಿಸಿದ್ದೇನೆ. ಘಟನೆಯ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದು, ದೆಹಲಿ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಯ ರಕ್ಷಣಾ ಕಾರ್ಯಾಚರಣೆಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಕೋಚಿಂಗ್​ ಸೆಂಟರ್​​ ಮಾಲೀಕರ ಬಂಧನ: ಘಟನೆಗೆ ಸಂಬಂಧಿಸಿದಂತೆ ಕೋಚಿಂಗ್ ಸೆಂಟರ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105, 106 (1), 152, 290 ಮತ್ತು 35ರ ಅಡಿಯಲ್ಲಿ ರಾಜಿಂದರ್‌ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕೋಚಿಂಗ್ ಕೇಂದ್ರದ ಮಾಲೀಕರು, ಸಂಯೋಜಕರು​ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ನೀರು ತುಂಬಿದ ನೆಲಮಾಳಿಗೆಯಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿಗಳನ್ನು ಶ್ರೇಯಾ ಯಾದವ್ (ಅಂಬೇಡ್ಕರ್ ನಗರ, ಉತ್ತರ ಪ್ರದೇಶ), ತಾನ್ಯಾ ಸೋನಿ (ತೆಲಂಗಾಣ) ಮತ್ತು ನವೀನ್ ಡೆಲ್ವಿನ್ (ಎರ್ನಾಕುಲಂ, ಕೇರಳ) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: 'ಯುಪಿಎಸ್​ಸಿ ಆಕಾಂಕ್ಷಿಗಳ ಕೊಲೆ': ದೆಹಲಿ ಸರ್ಕಾರದ ವಿರುದ್ಧ ಆಪ್ ಸಂಸದೆ ಮಲಿವಾಲ್ ಆಕ್ರೋಶ - Swati Maliwal

ETV Bharat Logo

Copyright © 2024 Ushodaya Enterprises Pvt. Ltd., All Rights Reserved.