ETV Bharat / bharat

ಆಂಧ್ರದಲ್ಲಿ ಮಾಫಿಯಾ ರಾಜ್, ಭ್ರಷ್ಟ ವೈಎಸ್‌ಆರ್‌ಸಿಪಿ ಸರ್ಕಾರ ಜೂನ್ 4ರ ನಂತರ ಮಾಯ: ಮೋದಿ - PM Modi - PM MODI

ಆಂಧ್ರಪ್ರದೇಶದಲ್ಲಿ ವೈ.ಎಸ್​.ಜಗನ್​ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಸರ್ಕಾರವು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಮಾಫಿಯಾ ರಾಜ್​​ ಆಡಳಿತದಲ್ಲಿ ತೊಡಗಿದೆ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.

PM Modi, Chandrababu Naidu, Pawan Kalyan hold road show in Vijayawada
ವಿಜಯವಾಡದಲ್ಲಿ ಪ್ರಧಾನಿ ಮೋದಿ, ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ರೋಡ್ ಶೋ ನಡೆಸಿದರು (IANS)
author img

By PTI

Published : May 9, 2024, 1:06 PM IST

ವಿಜಯವಾಡ(ಆಂಧ್ರಪ್ರದೇಶ): ಆಂಧ್ರಪ್ರದೇಶದ ಜನತೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಮಾಫಿಯಾ ರಾಜ್​​ನಿಂದ ಬೇಸತ್ತಿದ್ದಾರೆ. ಇದರಿಂದ ಜೂನ್ 4ರ (ಚುನಾವಣಾ ಫಲಿತಾಂಶದ ದಿನ) ನಂತರ ವೈಎಸ್‌ಆರ್‌ಸಿಪಿ ಸರ್ಕಾರವು ರಾಜ್ಯದಲ್ಲಿ ಮಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳು ಮತ್ತು 175 ವಿಧಾನಸಭಾ ಕ್ಷೇತ್ರಗಳಿಗೆ ಮೇ 13ರಂದು ಏಕಕಾಲಕ್ಕೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬುಧವಾರ ವಿಜಯವಾಡದಲ್ಲಿ ಪ್ರಧಾನಿ ಮೋದಿ, ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು, ಜನಸೇನಾ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಅವರೊಂದಿಗೆ ರೋಡ್ ಶೋ ನಡೆಸಿದರು. ಇದರ ಬಳಿಕ ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಅವರು ಪೋಸ್ಟ್​ ಮಾಡಿ, ಸಿಎಂ ವೈ.ಎಸ್​.ಜಗನ್​ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ಆಡಳಿತದ ಬಗ್ಗೆ ಟೀಕಿಸಿದ್ದಾರೆ.

''ಕಾಂಗ್ರೆಸ್ ಸಂಸ್ಕೃತಿಯೊಂದಿಗೆ ಗಟ್ಟಿಯಾದ ನಂಟಿನಿಂದಾಗಿ ವೈಎಸ್‌ಆರ್‌ಸಿಪಿಯು ಭ್ರಷ್ಟಾಚಾರ, ಕುತಂತ್ರ ಮತ್ತು ಮಾಫಿಯಾ ರಾಜ್ ಹೆಚ್ಚಿಸಿದೆ. ಆಂಧ್ರ ಪ್ರದೇಶವು ವೈಎಸ್‌ಆರ್‌ಸಿಪಿಯಿಂದ ಸಂಪೂರ್ಣವಾಗಿ ಬೇಸತ್ತಿದೆ. ಜೂನ್ 4ರಂದು ಈ ಸರ್ಕಾರವು ಕಳೆದುಹೋಗಲಿದೆ. ಅಲ್ಲದೇ, ಇತ್ತೀಚಿಗೆ ರಾಜ್ಯದಾದ್ಯಂತ ಪ್ರವಾಸ ಮಾಡಿದ ನಂತರ ಜನರು ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಎನ್‌ಡಿಎ ಮೈತ್ರಿಕೂಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕುತ್ತಿದ್ದಾರೆ ಎಂದು ನನಗೆ ಮನವರಿಕೆಯಾಗಿದೆ'' ಎಂದು ಮೋದಿ ತಿಳಿಸಿದ್ದಾರೆ.

''ಬಿಜೆಪಿ ಮತ್ತು ಟಿಡಿಪಿ ಈ ಹಿಂದೆ ಒಟ್ಟಿಗೆ ಕೆಲಸ ಮಾಡಿದೆ. ನಮ್ಮ ಮೈತ್ರಿ ಭವಿಷ್ಯದ ಅಭಿವೃದ್ಧಿಗೆ ಬದ್ಧವಾಗಿದೆ. ಈಗ ಜನಸೇನೆಯ ಸಕ್ರಿಯ ಬೆಂಬಲವು ನಮ್ಮ ಒಕ್ಕೂಟವನ್ನು ಮತ್ತಷ್ಟು ಬಲಪಡಿಸಿದೆ. ಆಂಧ್ರಪ್ರದೇಶದ ಜನರ ಆಕಾಂಕ್ಷೆಗಳನ್ನು ಈಡೇರಿಸುವ ಸಾಮರ್ಥ್ಯವನ್ನು ಎನ್‌ಡಿಎ ಮೈತ್ರಿಕೂಟ ಹೊಂದಿದೆ. ನಾವು ಕೃಷಿ ಉತ್ಪಾದಕತೆಯನ್ನು ಸುಧಾರಿಸಲು, ಕೈಗಾರಿಕಾ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಆಂಧ್ರಪ್ರದೇಶದ ಸೇವಾ ವಲಯದಲ್ಲಿಯೂ ಛಾಪು ಮೂಡಿಸುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಈ ರಾಜ್ಯದ ಜನರು ಆಶೀರ್ವದಿಸಿರುವ ಉದ್ಯಮಶೀಲ ಶಕ್ತಿಗೆ ರೆಕ್ಕೆಗಳನ್ನು ಒದಗಿಸಲು ನಾವು ಸಿದ್ಧವಾಗಿದ್ದೇವೆ'' ಎಂದು ಪ್ರಧಾನಿ ಹೇಳಿದ್ದಾರೆ.

''ಪ್ರಗತಿಗಾಗಿ ಆಂಧ್ರಪ್ರದೇಶದ ಕರಾವಳಿಯನ್ನು ಎನ್‌ಡಿಎ ಮೈತ್ರಿಕೂಟ ಸದುಪಯೋಗಪಡಿಸಿಕೊಳ್ಳುತ್ತದೆ. ರಾಜ್ಯದ ಬಂದರು ಪ್ರದೇಶವು ಅಭಿವೃದ್ಧಿ ಕೆಲಸಕ್ಕೆ ನೇತೃತ್ವ ವಹಿಸುತ್ತದೆ ಮತ್ತು ಮೀನುಗಾರಿಕೆ ಕ್ಷೇತ್ರವನ್ನು ಉತ್ತೇಜಿಸುತ್ತದೆ. ಜೊತೆಗೆ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗುವುದು. ರಸ್ತೆ, ರೈಲು ಮತ್ತು ವಿಮಾನ ಸಂಪರ್ಕ, ಡಿಜಿಟಲ್ ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗಿದೆ'' ಎಂದು ಅವರು ವಿವರಿಸಿದರು.

ವಿಜಯವಾಡದ ಬಂದರ್ ರಸ್ತೆಯಲ್ಲಿರುವ ಇಂದಿರಾ ಗಾಂಧಿ ಸ್ಟೇಡಿಯಂನಿಂದ ಪ್ರಧಾನಿ ತಮ್ಮ ರೋಡ್‌ ಶೋ ಪ್ರಾರಂಭಿಸಿ, ಬೆಂಜ್ ಸರ್ಕಲ್ ಬಳಿ ಕೊನೆಗೊಳಿಸಿದರು. ಬಿಜೆಪಿ, ಟಿಡಿಪಿ ಮತ್ತು ಜನಸೇನಾ ಪಕ್ಷದ ನೂರಾರು ಕಾರ್ಯಕರ್ತರು, ಬೆಂಬಲಿಗರು ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ರೋಡ್‌ಶೋನಲ್ಲಿ ಮೋದಿ, ನಾಯ್ಡು ಮತ್ತು ಕಲ್ಯಾಣ್ ಜನಸಮೂಹದತ್ತ ಕೈಬೀಸಿ ಹರ್ಷಪಟ್ಟರು.

ಇದನ್ನೂ ಓದಿ: 'ಪೂರ್ವ ಭಾರತದವರು ಚೀನಿಯರಂತೆ, ದಕ್ಷಿಣದವರು ಆಫ್ರಿಕನ್ನರಂತೆ ಕಾಣ್ತಾರೆ'; ಪಿತ್ರೋಡಾ ಎಡವಟ್ಟು, ಮೋದಿ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.