ಬಾರಾಬಂಕಿ (ಉತ್ತರಪ್ರದೇಶ): ಆಹಾರ ಪದಾರ್ಥವನ್ನು ಕಲಬೆರಕೆ ಮಾಡದಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬಳಿಕವೂ ಇಂತಹ ಅನಿಷ್ಟ ಘಟನೆಗಳು ನಿಲ್ಲುತ್ತಿಲ್ಲ. ಇಲ್ಲಿನ ಢಾಬಾದಲ್ಲಿ ಸಿಬ್ಬಂದಿಯೊಬ್ಬ ರೋಟಿ ತಯಾರಿಸುವ ವೇಳೆ ಅದರ ಮೇಲೆ ಎಂಜಲು ಉಗುಳಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಬಾರಾಬಂಕಿ ಜಿಲ್ಲೆಯಲ್ಲಿ ಈ ಅನಿಷ್ಟ ಘಟನೆ ನಡೆದಿದೆ. ರಸ್ತೆ ಬದಿಯ ಢಾಬಾದಲ್ಲಿ ರೋಟಿಯ ಮೇಲೆ ಸಿಬ್ಬಂದಿ ಎಂಜಲು ಉಗುಳುತ್ತಿರುವುದನ್ನು ಯಾರೋ ವಿಡಿಯೋ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ: ಟಿನ್ ಶೆಡ್ನಡಿ ನಡೆಯುತ್ತಿರುವ ಢಾಬಾದಲ್ಲಿ ಸಿಬ್ಬಂದಿಯೊಬ್ಬ ರೋಟಿಯ ಮೇಲೆ ಪ್ರತಿ ಬಾರಿ ಎಂಜಲು ಉಗುಳಿ ತಯಾರಿಸುತ್ತಿದ್ದ. ಇದನ್ನು ದೂರದಿಂದ ಯಾರೋ ವಿಡಿಯೋ ಮಾಡಿದ್ದಾರೆ. ಬಳಿಕ ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ಗಮನಿಸಿದ ಆಹಾರ ಮತ್ತು ಸುರಕ್ಷತಾ ತಂಡವು ತಕ್ಷಣವೇ ಢಾಬಾವನ್ನು ಸೀಲ್ ಮಾಡಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ರೋಟಿ ಮಾಡುತ್ತಿದ್ದ ಯುವಕನನ್ನು ಬಂಧಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಯುವಕನೊಬ್ಬ ಟಿನ್ ಶೆಡ್ ಅಡಿಯಲ್ಲಿ ನಿರ್ಮಿಸಿದ ಢಾಬಾದಲ್ಲಿ ತಂದೂರಿ ರೋಟಿ ಮಾಡುತ್ತಿದ್ದಾನೆ. ಪಕ್ಕದಲ್ಲಿದ್ದ ಇನ್ನೊಬ್ಬ ಯುವಕ ರೋಟಿಯ ಮೇಲೆ ಎಂಜಲು ಉಗುಳಿ ಅದನ್ನು ಯತಾರಿಸುತ್ತಿದ್ದಾನೆ. ಪ್ರತಿ ಬಾರಿಯೂ ರೋಟಿ ಮೇಲೆ ಉಗುಳುವುದು ಮತ್ತು ಅದನ್ನು ಬೇಯಿಸುವುದನ್ನು ಕಾಣಬಹುದಾಗಿದೆ.
ಆರೋಪಿ ಬಂಧನ: ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಎಸ್ಪಿ ಚಿರಂಜೀವ್ ನಾಥ್ ಸಿನ್ಹಾ ಅವರು, ಇಲ್ಲಿನ ಢಾಬಾದಲ್ಲಿ ಉಗಿದು ರೋಟಿ ತಯಾರಿಸುತ್ತಿರುವ ವಿಡಿಯೋ ಲಭ್ಯವಾಗಿದೆ. ಆಹಾರ ಮತ್ತು ಸುರಕ್ಷತೆ ತಂಡ ದಾಳಿ ನಡೆಸಿ ಸೀಲ್ ಮಾಡಿದೆ. ಆಹಾರ ಕಲಬೆರಕೆ ಮಾಡಿದ ವ್ಯಕ್ತಿಯನ್ನು ಇರ್ಷಾದ್ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಲಾಗಿದ್ದು, ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿರುವುದು ಗಮನಾರ್ಹ. ಗಾಜಿಯಾಬಾದ್‌ನಲ್ಲಿ ಜ್ಯೂಸ್ನಲ್ಲಿ ಮೂತ್ರ ಬಳಕೆ ಮಾಡಿದ ಪ್ರಕರಣ ನಡೆದಿತ್ತು. ಬಳಿಕ ಅಲಿಗಢದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಇಂತಹ ಕೃತ್ಯಗಳನ್ನು ತಡೆಯಲು ಕಠಿಣ ಕಾನೂನು ರೂಪಿಸುವಂತೆ ಅಧಿಕಾರಿಗಳಿಗೆ ಸಿಎಂ ಯೋಗಿ ಆಗಿತ್ಯನಾಥ್ ಸೂಚನೆ ನೀಡಿದ್ದಾರೆ. ಆಹಾರ ಪದಾರ್ಥಗಳಲ್ಲಿ ಕಲ್ಮಶ ಸೇರಿಸುವವರಿಗೆ ಜೈಲು ಮತ್ತು ದಂಡ ವಿಧಿಸುವ ಕಾನೂನು ರೂಪಿಸಲಾಗುತ್ತಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ತಂದೂರಿ ರೋಟಿ ಮೇಲೆ ಎಂಜಲು ಉಗಿದಿದ್ದ ಕೀಚಕ, ಮಾಲೀಕನ ಬಂಧನ