ETV Bharat / bharat

ಯುಪಿಯಲ್ಲಿ ಇಂಡಿಯಾ ಒಕ್ಕೂಟದ ಸೀಟುಗಳ ಹಂಚಿಕೆ ಒಪ್ಪಂದ ಪೂರ್ಣ: ಕಾಂಗ್ರೆಸ್​​​​ಗೆ 11 ಸ್ಥಾನ ಬಿಟ್ಟುಕೊಟ್ಟ ಎಸ್​ಪಿ - ಅಖಿಲೇಶ್​ ಯಾದವ್​

ಇಂಡಿಯಾ ಮೈತ್ರಿಕೂಟ, ದೇಶದ ಬಹುಮುಖ್ಯ ರಾಜ್ಯ ಉತ್ತರಪ್ರದೇಶದಲ್ಲಿ ತನ್ನ ಸೀಟುಗಳ ಹೊಂದಾಣಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ. ಈ ಬಗ್ಗೆ ಎಸ್​​ಪಿ ನೇತಾರ ಅಖಿಲೇಶ್​ ಯಾದವ್​ ಟ್ವೀಟ್​ ಮಾಡುವ ಮೂಲಕ ದೃಢಪಡಿಸಿದ್ದಾರೆ

Consensus reached regarding seats between SP and Congress in UP, Congress will contest elections on 11 seats
ಯುಪಿಯಲ್ಲಿ ಇಂಡಿಯಾ ಒಕ್ಕೂಟದ ಸೀಟುಗಳ ಹಂಚಿಕೆ ಒಪ್ಪಂದ ಪೂರ್ಣ: ಕಾಂಗ್ರೆಸ್​​​​ಗೆ 11 ಸ್ಥಾನ ಬಿಟ್ಟುಕೊಟ್ಟ ಎಸ್​ಪಿ
author img

By ETV Bharat Karnataka Team

Published : Jan 27, 2024, 9:31 PM IST

ಲಖನೌ: I.N.D.I.A ಮೈತ್ರಿಕೂಟದ ಅಡಿ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಡುವೆ ಉತ್ತರಪ್ರದೇಶದಲ್ಲಿ ಸೀಟಗಳ ಹಂಚಿಕೆ ಒಪ್ಪಂದಕ್ಕೆ ಬರಲಾಗಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶನಿವಾರ ಟ್ವೀಟ್ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಒಪ್ಪಂದದ ಪ್ರಕಾರ, ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶದಲ್ಲಿ 11 ಸ್ಥಾನಗಳಲ್ಲಿ ಚುನಾವಣೆ ಎದುರಿಸಲಿದೆ. ಈ ಹಿಂದೆಯೇ ಅಖಿಲೇಶ್ ಯಾದವ್ ಅವರು ಹೇಳಿದಂತೆ ಮಿತ್ರ ಪಕ್ಷ ರಾಷ್ಟ್ರೀಯ ಲೋಕದಳಕ್ಕೆ 7 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದ್ದರು. ಇನ್ನುಳಿದ 62 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಇದರಲ್ಲಿ ಒಂದು ಅಥವಾ ಎರಡು ಸ್ಥಾನಗಳನ್ನು ಇತರ ಮಿತ್ರ ಪಕ್ಷಗಳಿಗೆ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

  • कांग्रेस के साथ 11 मज़बूत सीटों से हमारे सौहार्दपूर्ण गठबंधन की अच्छी शुरुआत हो रही है… ये सिलसिला जीत के समीकरण के साथ और भी आगे बढ़ेगा।

    ‘इंडिया’ की टीम और ‘पीडीए’ की रणनीति इतिहास बदल देगी।

    — Akhilesh Yadav (@yadavakhilesh) January 27, 2024 " class="align-text-top noRightClick twitterSection" data=" ">

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಕಾಂಗ್ರೆಸ್, ರಾಷ್ಟ್ರೀಯ ಲೋಕದಳ, ಅಪ್ನಾ ದಳ, ಆಜಾದ್ ಸಮಾಜ ಪಕ್ಷಗಳು ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸಲಿವೆ. ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಹಿರಿಯ ನಾಯಕರ ನಡುವೆ ದೆಹಲಿಯಲ್ಲಿ ಸೀಟು ಹಂಚಿಕೆ ಸೂತ್ರದ ಕುರಿತು ಚರ್ಚೆ ಸರಣಿ ಸಭೆಗಳು ನಡೆದಿದ್ದವು.

ಈ ಎಲ್ಲ ಚರ್ಚೆಗಳು ಸಂವಾದಗಳ ಬಳಿಕ ಇಂದು ಸೀಟು ಹಂಚಿಕೆ ಕುರಿತು ಅಂತಿಮ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸ್ವತಃ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. 11 ಪ್ರಬಲ ಸ್ಥಾನಗಳನ್ನು ಕಾಂಗ್ರೆಸ್​​​ಗೆ ಬಿಟ್ಟುಕೊಡುವ ಮೂಲಕ ನಮ್ಮ ಮೈತ್ರಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್​​ ಯಾದವ್ ಹೇಳಿದ್ದಾರೆ.

ಈ ಹಿಂದೆ ಸಮಾಜವಾದಿ ಪಕ್ಷವು ತನ್ನ ಕೋಟಾಕ್ಕೆ ಬಂದಿದ್ದ ಕ್ಷೇತ್ರಗಳಲ್ಲಿ 7 ಸ್ಥಾನಗಳನ್ನು ರಾಷ್ಟ್ರೀಯ ಲೋಕದಳದ ಅಧ್ಯಕ್ಷ ಜಯಂತ್ ಚೌಧರಿ ಅವರಿಗೆ ನೀಡಿತ್ತು. ಆದರೆ, ಮೈತ್ರಿ ಪಕ್ಷದಿಂದ ಯಾವ ಸ್ಥಾನ ಯಾವ ಪಕ್ಷಕ್ಕೆ ಎಂಬ ಬಗ್ಗೆ ಇನ್ನೂ ಅಂತಿಮವಾದ ಮಾಹಿತಿ ಹೊರ ಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಯಾವ ಪಕ್ಷ ಯಾವ ಸ್ಥಾನದಲ್ಲಿ ಸ್ಪರ್ಧಿಸಲಿದೆ ಎಂಬ ಮಾಹಿತಿಯನ್ನು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲಾಗುವುದು ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಇದನ್ನು ಓದಿ: ನಾಳೆ ಸಿಎಂ ಸ್ಥಾನಕ್ಕೆ ನಿತೀಶ್​ಕುಮಾರ್​ ರಾಜೀನಾಮೆ: ಬಿಜೆಪಿ ಜೊತೆ ಅಂದೇ ಸರ್ಕಾರ ರಚನೆ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.