ETV Bharat / bharat

ಮಹಾರಾಷ್ಟ್ರ, ಜಾರ್ಖಂಡ್​ನಲ್ಲಿ ಕಾಂಗ್ರೆಸ್​ ಸೀಟು ಖೋತಾ: ಇದಕ್ಕೆ ಆ ಸೋಲೇ ಕಾರಣ? - CONGRESS SEATS LOSS

ಜಾರ್ಖಂಡ್​ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಸ್ಪರ್ಧಿಸುವ ಸೀಟುಗಳ ಸಂಖ್ಯೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ, ಹರಿಯಾಣ ಮತ್ತು ಜಮ್ಮು- ಕಾಶ್ಮೀರದ ಸೋಲು.

ಮಹಾರಾಷ್ಟ್ರ, ಜಾರ್ಖಂಡ್​ನಲ್ಲಿ ಕಾಂಗ್ರೆಸ್​ ಸೀಟು ಖೋತಾ
ಮಹಾರಾಷ್ಟ್ರ, ಜಾರ್ಖಂಡ್​ನಲ್ಲಿ ಕಾಂಗ್ರೆಸ್​ ಸೀಟು ಖೋತಾ (ETV Bharat)
author img

By ETV Bharat Karnataka Team

Published : Oct 20, 2024, 6:46 PM IST

ನವದೆಹಲಿ: ಇತ್ತೀಚೆಗೆ ನಡೆದ ಹರಿಯಾಣ ಮತ್ತು ಜಮ್ಮು -ಕಾಶ್ಮೀರ ಚುನಾವಣೆಗಳ ಸೋಲು ಕಾಂಗ್ರೆಸ್​ಗೆ ಭಾರೀ ನಷ್ಟವನ್ನುಂಟು ಮಾಡಿದೆ. ಬಿಜೆಪಿ ವಿರುದ್ಧ ಏಕಬಲವಾಗಿ ಬೆಳೆಯುವ ಅದರ ಪ್ರಯತ್ನಕ್ಕೆ ಕೊಡಲಿ ಏಟು ಬಿದ್ದಿದೆ. ಇದರ ಪರಿಣಾಮ, ಇಂಡಿಯಾ ಕೂಟದ ಮಿತ್ರಪಕ್ಷಗಳು ತಮ್ಮ ಧ್ವನಿಯನ್ನು ಎತ್ತರಿಸಿಕೊಂಡಿವೆ.

ಮಹಾರಾಷ್ಟ್ರ ಮತ್ತು ಜಾರ್ಖಂಡ್​ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಬಿಜೆಪಿ, ಕಾಂಗ್ರೆಸ್​ ಸೇರಿದಂತೆ ಎಲ್ಲ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ಹರಿಯಾಣ ಸೋಲು ಕಾಂಗ್ರೆಸ್​​ಗೆ ಭಾರೀ ಹಿನ್ನಡೆ ಉಂಟು ಮಾಡಿದ್ದು, ಇಂಡಿಯಾ ಕೂಟದ ಮಿತ್ರ ಪಕ್ಷಗಳ ಜೊತೆಗೆ ಸೀಟು ಹಂಚಿಕೆಯಲ್ಲಿ ಚೌಕಾಸಿ ನಡೆಸುವಲ್ಲಿ ಬಲಹೀನವಾಗಿದೆ. ಹೀಗಾಗಿ ಹೊಂದಾಣಿಕೆಗೆ ಮುಂದಾಗಿದೆ.

ಕಡಿಮೆ ಸ್ಥಾನಗಳಲ್ಲಿ ಸ್ಪರ್ಧೆ: ಈ ಹಿಂದೆ ಕೈ ಪಕ್ಷವು ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳ ಪೈಕಿ 125 ರಲ್ಲಿ ಸ್ಪರ್ಧಿಸುವ ನಿರೀಕ್ಷೆ ಹೊಂದಿತ್ತು. ಆದರೆ, ಈ ಹಿಂದಿನ ಚುನಾವಣೆಯ ಸೋಲಿನ ಕಹಿ ಸೀಟುಗಳ ಸಂಖ್ಯೆಯನ್ನು 105-110ಕ್ಕಿ ಇಳಿಯುವಂತೆ ಮಾಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮಿತ್ರಪಕ್ಷಗಳಾದ ಶಿವಸೇನೆ (ಯುಬಿಟಿ), ಎನ್‌ಸಿಪಿ (ಶರದ್​ ಪವಾರ್​) ಮತ್ತು ಸಮಾಜವಾದಿ ಪಕ್ಷದೊಂದಿಗೆ ಸೀಟು ಹೊಂದಾಣಿಕೆ ಕುರಿತು ಮಾತುಕತೆ ನಡೆಯುತ್ತಿವೆ. ತಮ್ಮ ಸ್ಥಾನಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ಮುಂಬೈನಲ್ಲಿ ಕಾಂಗ್ರೆಸ್ ನಾಯಕ ಮತ್ತು ಮಹಾರಾಷ್ಟ್ರ ಚುನಾವಣಾ ಉಸ್ತುವಾರಿ ರಮೇಶ್ ಚೆನ್ನಿತ್ತಲಾ ಅವರೊಂದಿಗೆ ಸೀಟು ಹೊಂದಾಣಿಕೆ ಕುರಿತು ಮಾತುಕತೆ ನಡೆಸಿದರು. ವಿದರ್ಭ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದು, ಆ ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡಲು ಚರ್ಚಿಸಲಾಗಿದೆ. ಮಿತ್ರಪಕ್ಷಗಳ ನಡುವಿನ ಸೀಟು ಹೊಂದಾಣಿಕೆ ಕುರಿತು ಅಂತಿಮ ಮಾತುಕತೆಗಳು ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಮೈತ್ರಿ ಪಕ್ಷಗಳು ಸ್ಪರ್ಧಿಸುವ ಸ್ಥಾನಗಳನ್ನು ಪ್ರಕಟವಾಗಲಿವೆ.

ಜಾರ್ಖಂಡ್​ನಲ್ಲೂ ಸೀಟು ಇಳಿಕೆ: 2019 ರಲ್ಲಿ ನಡೆದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಎಂಎಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆಗ ಕಾಂಗ್ರೆಸ್ 31 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಈ ಬಾರಿ 33 ಸ್ಥಾನ ನೀಡುವಂತೆ ಮನವಿ ಮಾಡಿತ್ತು. ಆದರೆ, ಇತ್ತೀಚೆಗಷ್ಟೇ ಕೇವಲ 29 ಸೀಟುಗಳಿಗೆ ಓಕೆ ಅಂದಿದೆ ಎಂದು ಪಕ್ಷದ ಮೂಲಗಳ ಮಾಹಿತಿಯಾಗಿದೆ. ಕಳೆದ ಚುನಾವಣೆಯಲ್ಲಿ ಜೆಎಂಎಂ 43 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಈ ಬಾರಿ ಹೆಚ್ಚುವರಿ ಎರಡು ಸ್ಥಾನಗಳ ನಿರೀಕ್ಷೆಯಲ್ಲಿದೆ.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಿದ್ಧತೆ: ಅಕ್ಟೋಬರ್ 20 ರಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ (ಸಿಇಸಿ) ನಡೆಯಲಿದೆ. ನಂತರ 60 ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ವಿದರ್ಭ ಮತ್ತು ಮರಾಠವಾಡದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: 99 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.