ETV Bharat / bharat

ಲೋಕಸಭೆಯ ಉಪ ನಾಯಕರಾಗಿ ಗೌರವ್ ಗೊಗೊಯ್, ಮುಖ್ಯ ಸಚೇತಕರಾಗಿ ಕೆ ಸುರೇಶ್​ ನೇಮಿಸಿದ ಕಾಂಗ್ರೆಸ್ - MP Gaurav Gogoi - MP GAURAV GOGOI

ಲೋಕಸಭೆಯ ಉಪ ನಾಯಕರಾಗಿ ಸಂಸದ ಗೌರವ್ ಗೊಗೊಯ್ ಹಾಗೂ ಮುಖ್ಯ ಸಚೇತಕರಾಗಿ ಕೆ ಸುರೇಶ್​ ನೇಮಕವಾಗಿದ್ದಾರೆ.

gaurav-gogoi
ಗೌರವ್ ಗೊಗೊಯ್, ಕೆ ಸುರೇಶ್,ಮಾಣಿಕ್ ಚಂದ್ ಟಾಗೋರ್ ಮತ್ತು ಎಂ ಡಿ ಜವೈದ್ (IANS)
author img

By ANI

Published : Jul 14, 2024, 4:29 PM IST

ನವದೆಹಲಿ: ಲೋಕಸಭೆಯ ಉಪ ನಾಯಕರಾಗಿ ಸಂಸದ ಗೌರವ್ ಗೊಗೊಯ್ ಮತ್ತು ಮುಖ್ಯ ಸಚೇತಕರಾಗಿ ಕೆ. ಸುರೇಶ್ ಅವರನ್ನು ಕಾಂಗ್ರೆಸ್ ನೇಮಿಸಿದೆ. ಈ ಸಂಬಂಧ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಔಪಚಾರಿಕ ನೇಮಕಾತಿ ಪತ್ರವನ್ನು ಕಳುಹಿಸಿದ್ದಾರೆ.

ಇನ್ನು ಕಾಂಗ್ರೆಸ್ ಸಂಸದರಾದ ಮಾಣಿಕ್ ಚಂದ್ ಟಾಗೋರ್ ಮತ್ತು ಎಂ ಡಿ ಜವೈದ್ ಅವರು ಪಕ್ಷದ ವಿಪ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಬಗ್ಗೆ ಪಕ್ಷದ ಸಂಸದ ಕೆ.ಸಿ ವೇಣುಗೋಪಾಲ್ ಅವರು 'ಎಕ್ಸ್'ನಲ್ಲಿ ನೇಮಕಾತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಸಂಸದರು I.N.D.I.A ಒಕ್ಕೂಟದಲ್ಲಿರುವ ತನ್ನ ಮಿತ್ರಪಕ್ಷಗಳೊಂದಿಗೆ ಸೇರಿ ಲೋಕಸಭೆಯಲ್ಲಿ ಜನರ ಸಮಸ್ಯೆಗಳ ಕುರಿತು ಹೋರಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ರಾಹುಲ್‌ ಗಾಂಧಿ ಅವರ ಮಾರ್ಗದರ್ಶನದಲ್ಲಿ, I.N.D.I.A ಒಕ್ಕೂಟವು ಒಗ್ಗಟ್ಟಾಗಿ ಲೋಕಸಭೆಯಲ್ಲಿ ಜನರ ಸಮಸ್ಯೆಗಳಿಗೆ ಶಕ್ತಿಯುತವಾಗಿ ಹೋರಾಡಲಿದೆ" ಎಂದು ವೇಣುಗೋಪಾಲ್ ಬರೆದುಕೊಂಡಿದ್ದಾರೆ.

ಲೋಕಸಭೆಯ ಉಪನಾಯಕನಾಗಿ ನೇಮಕ ಆಗಿರುವ ಗೌರವ್ ಗೊಗೊಯ್ ಅವರು 18ನೇ ಲೋಕಸಭೆಯಲ್ಲಿ ಅಸ್ಸೋಂನ ಜೋರ್ಹತ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿದ್ದಾರೆ. ಇನ್ನು 29 ವರ್ಷಗಳ ಕಾಲ ಸಂಸದರಾಗಿರುವ ಕೆ. ಸುರೇಶ್ ಅವರು ಪ್ರಸ್ತುತ ಅತ್ಯಂತ ದೀರ್ಘಾವಧಿಯ ಲೋಕಸಭಾ ಸಂಸದರಾಗಿದ್ದಾರೆ. ಸುರೇಶ್ ಅವರು 1989 ರಲ್ಲಿ ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ನಂತರ ಅವರು 1991, 1996 ಮತ್ತು 1999 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಸತತವಾಗಿ ಗೆದ್ದರು. ಅಡೂರು ಕ್ಷೇತ್ರದಿಂದ ಸತತ ನಾಲ್ಕು ಅವಧಿಗೆ ಗೆದ್ದು ಲೋಕಸಭೆ ಆಯ್ಕೆಯಾಗಿದ್ದಾರೆ.

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮಾವೆಲಿಕ್ಕಾರ (ಕೇರಳ)ದಿಂದ 18ನೇ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಸುರೇಶ್, ಈ ಹಿಂದೆ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಕಾರ್ಯಾಧ್ಯಕ್ಷರಾಗಿರುವ ಇವರು 17ನೇ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯ ಸಚೇತಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ : ಉಪಚುನಾವಣೆ ಫಲಿತಾಂಶ: ಇಂಡಿಯಾ ಕೂಟಕ್ಕೆ ಭರ್ಜರಿ ಗೆಲುವು, ಬಿಜೆಪಿಗೆ ಮುಖಭಂಗ - Assembly By Election Results

ETV Bharat Logo

Copyright © 2024 Ushodaya Enterprises Pvt. Ltd., All Rights Reserved.