ETV Bharat / bharat

ದೇಶದ ಸಂವಿಧಾನ ಬದಲಿಸಲು ಆರ್​ಎಸ್​ಎಸ್​, ಬಿಜೆಪಿ ಸಂಚು: ರಾಹುಲ್​ ಗಾಂಧಿ ಆರೋಪ - Rahul Gandhi roadshow

ಕೇರಳದಲ್ಲಿ ವಯನಾಡಿನಲ್ಲಿ ರಾಹುಲ್​ ಗಾಂಧಿ ಅವರು ಚುನಾವಣಾ ಪ್ರಚಾರ ನಡೆಸಿದರು.

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ
author img

By ETV Bharat Karnataka Team

Published : Apr 16, 2024, 1:59 PM IST

ವಯನಾಡು(ಕೇರಳ): ಕೇರಳದ ವಯನಾಡಿನಿಂದ ಲೋಕಸಭೆ ಚುನಾವಣೆಗೆ ಎರಡನೇ ಬಾರಿಗೆ ಸ್ಪರ್ಧೆ ಮಾಡುತ್ತಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಮಂಗಳವಾರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಕ್ಷೇತ್ರದ ಹಲವೆಡೆ ರೋಡ್​ ಶೋ ನಡೆಸಿದ ಕೈ ನಾಯಕ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಭಾರತದ ಸಂವಿಧಾನವನ್ನು ನಾಶಪಡಿಸಲು ಮತ್ತು ಬದಲಾಯಿಸಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಪ್ರಯತ್ನಿಸುತ್ತಿವೆ. ಕಾಂಗ್ರೆಸ್ ಪಕ್ಷ ಮತ್ತು I.N.D.I.A ಒಕ್ಕೂಟ ಸಂವಿಧಾನ ಉಳಿಸಲು ಪ್ರಯತ್ನಿಸುತ್ತಿದೆ. ಅಂಬಾನಿ, ಅದಾನಿ ಸೇರಿದಂತೆ ದೇಶದ ಐದಾರು ಶ್ರೀಮಂತ ಉದ್ಯಮಿಗಳ ಬೆಂಬಲಕ್ಕೆ ಮಾತ್ರ ಅವರು ನಿಂತಿದ್ದಾರೆ ಎಂದು ಆರೋಪಿಸಿದರು.

ನಿಜವಾದ ಸಮಸ್ಯೆ ಮರೆಮಾಚಿದ ಪಿಎಂ: ದೇಶದಲ್ಲಿ ಹಲವಾರು ಸಮಸ್ಯೆಗಳು ತಲೆದೋರಿವೆ. ಯುವಕರಿಗೆ ಉದ್ಯೋಗ, ಆರ್ಥಿಕ ಕುಸಿತ, ಸಾಮಾಜಿಕ ಸಾಮರಸ್ಯದಲ್ಲಿ ಬಿರುಕು ಉಂಟಾಗಿದೆ. ಇದ್ಯಾವುದರ ಬಗ್ಗೆಯೂ ಪ್ರಧಾನಿ ಮೋದಿ ಅವರು ಎಂದೂ ಮಾತನಾಡುವುದಿಲ್ಲ. ಇದರ ಬದಲಿಗೆ ಅವರು ವಿಷಯಾಂತರ ಮಾಡಲು ನೀರಿನಲ್ಲಿ ಪೂಜೆ ಸಲ್ಲಿಸುವುದು, ಒಲಿಂಪಿಕ್ಸ್​ನಲ್ಲಿ ಭಾರತದ ಸ್ಪರ್ಧೆ, ಚಂದ್ರನಲ್ಲಿ ಮಾನವ ಇಳಿಸುವಂತಹ ಕಲ್ಪಿತ ವಿಷಯಗಳನ್ನೇ ಹೇಳುತ್ತಾರೆ. ಜನರ ನಿಜವಾದ ಸಮಸ್ಯೆಗಳ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಅವರು ಆಪಾದಿಸಿದರು.

ಪಧಾನಿ ಮೋದಿ ಅವರು ಎಂದಿಗೂ ನಿರುದ್ಯೋಗ ಅಥವಾ ಬೆಲೆ ಏರಿಕೆಯ ಬಗ್ಗೆ ಮಾತನಾಡುವುದಿಲ್ಲ. ಮಾಧ್ಯಮವೊಂದಕ್ಕೆ ಈಚೆಗೆ ನೀಡಿದ ಸಂದರ್ಶನದಲ್ಲಿ ಅವರ ಮುಖ, ಕಣ್ಣುಗಳನ್ನು ನೀವು ಗಮನಿಸಿದ್ದೀರಾ?. ದೇಶದ ಉದ್ಯಮಿಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಚುನಾವಣಾ ಬಾಂಡ್​ ನೆಪದಲ್ಲಿ ಸುಲಿಗೆ ಮಾಡಿದ್ದಾರೆ. ಇದು ಈ ಭೂಮಿಯ ಮೇಲೆಯೇ ನಡೆದ ಅತಿದೊಡ್ಡ ಭ್ರಷ್ಟಾಚಾರವಾಗಿದೆ. ಅದರಿಂದ ತಪ್ಪಿಸಿಕೊಳ್ಳಲು ಅವರು ದಿನವೂ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಹೇಳಿದರು.

ಪ್ರಧಾನಿ ಮೋದಿ ಹೇಳೋದೇನು?: ದೇಶದ ಸಂವಿಧಾನವು ಸರ್ಕಾರದ ಮಾರ್ಗದರ್ಶಿಯಾಗಿದೆ. ಅದನ್ನು ಸ್ವತಃ ಡಾ.ಬಿ.ಆರ್. ಅಂಬೇಡ್ಕರ್​ ಅವರೇ ಬಂದರೂ ಬದಲಾಯಿಸಲು ಸಾಧ್ಯವಿಲ್ಲ. ಈ ಬಗ್ಗೆ ಕಾಂಗ್ರೆಸ್​ ಸೇರಿದಂತೆ ವಿಪಕ್ಷಗಳು ಬರೀ ಸುಳ್ಳು ಹೇಳುತ್ತಿವೆ. ಸಂವಿಧಾನ ನಮ್ಮೆಲ್ಲರ ಆತ್ಮ ಇದ್ದಂತೆ. ಅದನ್ನು ಬದಲಿಸಲು ಅಥವಾ ನಾಶ ಮಾಡಲು ಸಾಧ್ಯವೇ ಇಲ್ಲ ಎಂದು ಅವರು ಈಚೆಗೆ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದರು. ಈ ಮೂಲಕ ಬಿಜೆಪಿಯು ಸಂವಿಧಾನವನ್ನು ಬದಲಾಯಿಸಲ್ಲ ಎಂಬುದನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ: 'ರಾಹುಲ್​ ಗಾಂಧಿ ವಯನಾಡು ಪ್ರಚಾರದಲ್ಲಿ ಕಾಂಗ್ರೆಸ್​ ಸೇರಿ ಮಿತ್ರಪಕ್ಷಗಳ ಬಾವುಟ ಬಳಸಲ್ಲ' - Rahul Gandhis campaign

ETV Bharat Logo

Copyright © 2024 Ushodaya Enterprises Pvt. Ltd., All Rights Reserved.