ETV Bharat / bharat

ಚುನಾವಣಾ ಆಯೋಗದ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ: ವಿವಾದ ಸೃಷ್ಟಿಸಿದ ಕಾಂಗ್ರೆಸ್​ ಮುಖಂಡ ಭಾಯ್ ಜಗತಾಪ್ ಹೇಳಿಕೆ

ಚುನಾವಣಾ ಆಯೋಗದ ವಿರುದ್ಧ ಆಕ್ಷೇಪಾರ್ಹ ಪದ ಬಳಸಿರುವ ಕಾಂಗ್ರೆಸ್ ನಾಯಕರೊಬ್ಬರು ವಿವಾದ ಸೃಷ್ಟಿಸಿದ್ದಾರೆ.

ಕಾಂಗ್ರೆಸ್​ ಮುಖಂಡ ಭಾಯ್ ಜಗತಾಪ್
ಕಾಂಗ್ರೆಸ್​ ಮುಖಂಡ ಭಾಯ್ ಜಗತಾಪ್ (IANS)
author img

By ETV Bharat Karnataka Team

Published : 2 hours ago

ಮುಂಬೈ: ಚುನಾವಣಾ ಆಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಅವರ ನಾಯಿ ಎಂದಿರುವ ಮಹಾರಾಷ್ಟ್ರ ಕಾಂಗ್ರೆಸ್​ ಮುಖಂಡರೊಬ್ಬರ ಹೇಳಿಕೆ ವಿವಾದ ಸೃಷ್ಟಿಸಿದೆ. ಇತ್ತೀಚೆಗೆ ಮುಗಿದ ವಿಧಾನಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಸಿಇಒಗೆ ಮಹಾರಾಷ್ಟ್ರ ಕಾಂಗ್ರೆಸ್​ ಘಟಕವು ಮನವಿ ಸಲ್ಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಕಾಂಗ್ರೆಸ್ ಎಂಎಲ್​ಸಿ ಮತ್ತು ವಿಧಾನ ಪರಿಷತ್ತಿನ ಪ್ರತಿಪಕ್ಷದ ಉಪನಾಯಕ ಅಶೋಕ್ ಎ. ಜಗತಾಪ್ ಅಲಿಯಾಸ್ ಭಾಯ್ ಜಗತಾಪ್ ಅವರು ಚುನಾವಣಾ ಆಯೋಗವನ್ನು ಪ್ರಧಾನಿ ನಿವಾಸದ ಹೊರಗೆ ಕುಳಿತಿರುವ ನಾಯಿಗೆ ಹೋಲಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಇದು ಅನಿರೀಕ್ಷಿತ ತೀರ್ಪು ನಾವು ಅದನ್ನು ಒಪ್ಪುವುದಿಲ್ಲ: "ಇದು ಅನಿರೀಕ್ಷಿತ (ಮತದಾನದ) ತೀರ್ಪು. ನಾವು ಅದನ್ನು ಒಪ್ಪಲು ಸಾಧ್ಯವಿಲ್ಲ... ರಾಜ್ಯದ ಜನರು (ಆಡಳಿತಾರೂಢ) ಮಹಾಯುತಿ ಆಡಳಿತವನ್ನು ಸಂಪೂರ್ಣವಾಗಿ ವಿರೋಧಿಸಿದ್ದರು. ಆದರೆ ಅದರ ಜಯದ ಸಂಪೂರ್ಣ ಕ್ರೆಡಿಟ್ ಇವಿಎಂಗಳಿಗೆ ಸಲ್ಲುತ್ತದೆ. ಹೌದು... ಇವಿಎಂಗಳನ್ನು ತಿರುಚಲಾಗಿದೆ... ಕೆಲವು ಸ್ಥಳಗಳಲ್ಲಿ ಹ್ಯಾಕ್ ಮಾಡಲಾಗಿದೆ ಎಂದು ನಾನು ಹೇಳುತ್ತೇನೆ" ಎಂದು ಜಗತಾಪ್ ಹೇಳಿದರು.

ಪತ್ರ ಬರೆದು ಹಲವು ಆಕ್ಷೇಪ ಎತ್ತಿದ ನಾನಾ ಪಟೋಲೆ: ಏತನ್ಮಧ್ಯೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಎಫ್ ಪಟೋಲೆ ಅವರು ಎಸ್ಇಸಿ ಸಿಇಒ ಎಸ್ ಚೋಕಲಿಂಗಂ ಅವರಿಗೆ ಪತ್ರ ಬರೆದಿದ್ದು, ನವೆಂಬರ್ 20 ರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಮಹಾಯುತಿಯ ಸ್ಥಾನಗಳು ಹಠಾತ್ತಾಗಿ ಏರಿಕೆಯಾದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ.

"ಮತದಾನದ ಸಮಯ ಮುಗಿದ ನಂತರ ಶೇಕಡಾ 7.83 ರಷ್ಟು ಮತಗಳು ಹೆಚ್ಚಾಗಿರುವ ಬಗ್ಗೆ ವಿವಿಧ ಹಂತಗಳಲ್ಲಿ ಅನುಮಾನಗಳು ಎದ್ದಿವೆ. ಚುನಾವಣಾ ಆಯೋಗದ ಅಂಕಿ - ಅಂಶಗಳನ್ನು ಗಮನಿಸಿದರೆ, ಆ ದಿನ (ನವೆಂಬರ್ 20) ಸಂಜೆ 5 ಗಂಟೆಯ ನಂತರ ಮತದಾನ ಕೇಂದ್ರಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ಇರಬೇಕಾಗಿತ್ತು. ಆದರೆ, ಇದರಲ್ಲಿ ದೊಡ್ಡ ಹಗರಣ ನಡೆದಿದೆ ಎಂಬ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆಗಳು ನಡೆದಿವೆ" ಎಂದು ಪಟೋಲೆ ಪತ್ರದಲ್ಲಿ ತಿಳಿಸಿದ್ದಾರೆ.

ಒಟ್ಟು 288 ಕ್ಷೇತ್ರಗಳ ಪೈಕಿ ಎಷ್ಟು ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ನಂತರ ಉದ್ದನೆಯ ಮತದಾರರ ಸರತಿ ಸಾಲುಗಳಿದ್ದವು ಎಂದು ಪ್ರಶ್ನಿಸಿರುವ ಅವರು, ಈ ಬಗೆಗಿನ ವಿಡಿಯೋ ತುಣುಕು ಸೇರಿದಂತೆ ಪುರಾವೆಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಚುನಾವಣಾ ಆಯೋಗದ ಅಧಿಕೃತ ಮಾಹಿತಿಯ ಪ್ರಕಾರ, ನವೆಂಬರ್ 20 ರಂದು ರಾತ್ರಿ 11.30 ರವರೆಗೆ ಶೇಕಡಾ 65.2 ರಷ್ಟು ಮತದಾನ ಆಗಿತ್ತು. ಆದರೆ ಮರುದಿನ (ನವೆಂಬರ್ 21) ಮಧ್ಯಾಹ್ನ 3 ಗಂಟೆಗೆ ಈ ಸಂಖ್ಯೆ ಶೇಕಡಾ 66.05 ಕ್ಕೆ ಏರಿದೆ ಎಂದು ಪಟೋಲೆ ಪುನರುಚ್ಚರಿಸಿದರು. (IANS)

ಇದನ್ನೂ ಓದಿ : EVM ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ: ಅಭ್ಯರ್ಥಿಗಳಿಂದ 14 ಹಂತದ ಪರಿಶೀಲನೆ - ಇನ್ಫೋ ಇನ್ ಡೇಟಾ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.