ETV Bharat / bharat

ರಾಜಸ್ಥಾನ, ಛತ್ತೀಸಗಢದಲ್ಲಿ ಕಾಂಗ್ರೆಸ್ ಗ್ಯಾರಂಟಿ ಫೇಲ್, ಮಹಾರಾಷ್ಟ್ರದಲ್ಲೂ ಕೆಲಸ ಮಾಡಲ್ಲ: ಫಡ್ನವೀಸ್ - MAHARASHTRA ELECTIONS

ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೆಲಸ ಮಾಡಲ್ಲ ಎಂದು ಉಪಮುಖ್ಯಮಂತ್ರಿ ಫಡ್ನವೀಸ್ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಫಡ್ನವೀಸ್
ಉಪಮುಖ್ಯಮಂತ್ರಿ ಫಡ್ನವೀಸ್ (IANS)
author img

By PTI

Published : Oct 31, 2024, 3:54 PM IST

ಮುಂಬೈ: ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ 'ಗ್ಯಾರಂಟಿ ಕಾರ್ಡ್' ಹೊರತರುವ ಕಾಂಗ್ರೆಸ್ ಯೋಜನೆಯನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುವಾರ ವ್ಯಂಗ್ಯವಾಡಿದ್ದು, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಕಾಂಗ್ರೆಸ್​ನ ಈ ತಂತ್ರ ವಿಫಲವಾಗಿತ್ತು ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಚುನಾವಣಾ ಭರವಸೆಗಳನ್ನು ಒಳಗೊಂಡ 'ಗ್ಯಾರಂಟಿ ಕಾರ್ಡ್' ಅನ್ನು ಬಿಡುಗಡೆ ಮಾಡಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ತಿಳಿಸಿದ ಬೆನ್ನಲ್ಲೇ ಫಡ್ನವೀಸ್ ಈ ಹೇಳಿಕೆ ನೀಡಿದ್ದಾರೆ.

"ರಾಹುಲ್ ಗಾಂಧಿ ಅವರ ಗ್ಯಾರಂಟಿ ಕಾರ್ಡ್ ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್​ಗೆ ಸಹಾಯ ಮಾಡಲಿಲ್ಲ" ಎಂದು ಫಡ್ನವೀಸ್ ಸುದ್ದಿಗಾರರಿಗೆ ತಿಳಿಸಿದರು. "ಕಾಂಗ್ರೆಸ್ ತಾನು ಭರವಸೆ ನೀಡಿದಂತೆ ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಕೂಡ ಗ್ಯಾರಂಟಿ ಕಾರ್ಡ್ ಏಕೆ ಜಾರಿಗೆ ತರುತ್ತಿಲ್ಲ ಎಂಬುದನ್ನು ಅದು ವಿವರಿಸಬೇಕು. ಅದು ಮಹಾರಾಷ್ಟ್ರದಲ್ಲಿಯೂ ವಿಫಲವಾಗಲಿದೆ" ಎಂದು ಅವರು ನುಡಿದರು.

ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದ ಬಂಡಾಯ ಅಭ್ಯರ್ಥಿಗಳ ಸಮಸ್ಯೆಯನ್ನು ಎದುರಿಸಲು ಆಡಳಿತಾರೂಢ ಬಿಜೆಪಿ-ಶಿವಸೇನೆ-ಎನ್​ಸಿಪಿ 'ಮಹಾಯುತಿ' ಮೈತ್ರಿಕೂಟದ ಕಾರ್ಯತಂತ್ರದ ಬಗ್ಗೆ ಮಾತನಾಡಿದ ಫಡ್ನವೀಸ್, ಎನ್ ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಸೇರಿದಂತೆ ಮೈತ್ರಿ ನಾಯಕರು ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಿವಾಸದಲ್ಲಿ ಸಭೆ ನಡೆಸಿದರು ಎಂದು ಹೇಳಿದರು.

"ನಾವು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದ್ದೇವೆ ಮತ್ತು ನವೆಂಬರ್ 4 ರೊಳಗೆ ಅನೇಕ ಬಂಡಾಯ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲಿದ್ದಾರೆ. ಮೈತ್ರಿ ನಾಯಕರು ಬಂಡಾಯಗಾರರೊಂದಿಗೆ ಚರ್ಚೆ ನಡೆಸಿ ಅವರ ಬೇಡಿಕೆಗಳನ್ನು ಪರಿಶೀಲಿಸಲಿದ್ದಾರೆ" ಎಂದು ಅವರು ಹೇಳಿದರು.

'ಮಹಾಯುತಿ' ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳ ಪರಿಶೀಲನೆಯ ಹಂತ ಮುಗಿದಿದ್ದು, ನಾವು ನವೆಂಬರ್ 5 ರಿಂದ ನಮ್ಮ ಪ್ರಚಾರ ಅಭಿಯಾನವನ್ನು ಪೂರ್ಣ ಹುರುಪಿನಿಂದ ಪ್ರಾರಂಭಿಸುತ್ತೇವೆ ಎಂದು ಫಡ್ನವೀಸ್ ಹೇಳಿದರು.

ಬೋರಿವಲಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಗರ ಬಿಜೆಪಿ ಮುಖಂಡ ಮತ್ತು ಮಾಜಿ ಸಂಸದ ಗೋಪಾಲ್ ಶೆಟ್ಟಿ ಬಗ್ಗೆ ಮಾತನಾಡಿದ ಫಡ್ನವೀಸ್, ಶೆಟ್ಟಿ ನಿಷ್ಠಾವಂತ ಮತ್ತು ಪ್ರಾಮಾಣಿಕ ಪಕ್ಷದ ಕಾರ್ಯಕರ್ತ. ಅವರು ಕೆಲವೊಮ್ಮೆ ಹಟವಾದಿಯಾಗುತ್ತಾರೆ. ನಾವು ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು. ನವೆಂಬರ್ 4 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ನವೆಂಬರ್ 20 ರಂದು ಚುನಾವಣೆ ನಡೆಯಲಿದೆ.

ಇದನ್ನೂ ಓದಿ : LACಯಲ್ಲಿ ಸೇನೆ ಹಿಂತೆಗೆತ ಬಹುತೇಕ ಪೂರ್ಣ: ಸಿಹಿ ಹಂಚಿಕೊಂಡ ಭಾರತ, ಚೀನಾ ಯೋಧರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.