ವಾರಣಾಸಿ (ಉತ್ತರ ಪ್ರದೇಶ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದು ವಾರಣಾಸಿ ತಲುಪಿದೆ. ನಿನ್ನೆ (ಶುಕ್ರವಾರ) ಈ ಯಾತ್ರೆ ಚಂದೌಲಿ ಮೂಲಕ ಉತ್ತರ ಪ್ರದೇಶ ತಲುಪಿತ್ತು. ಈ ವೇಳೆ, ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಸ್ವಾಗತಿಸಿದ್ದರು. ರಾಹುಲ್ ಗಾಂಧಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಬಳಿಕ ಚಂದೌಲಿಯಲ್ಲಿ ರಾತ್ರಿಯೂ ವಿಶ್ರಾಂತಿ ಪಡೆದರು.
ಮೊದಲ ಬಾರಿಗೆ ಗೊಡೌಲಿಯಾ ಮಾರ್ಗದಲ್ಲಿ ಪ್ರಯಾಣ: ಗೊಡೌಲಿಯಾ ಮಾರ್ಗದಲ್ಲಿ ಪ್ರಯಾಣಿಸುವ ಮೊದಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಮಹಾ ನಾಯಕರ್ಯಾರೂ ಈ ಮಾರ್ಗದಲ್ಲಿ ಪ್ರಯಾಣ ಕೈಗೊಂಡಿರಲಿಲ್ಲ. ಆದರೆ, ಪಂಡಿತ್ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ವಾರಾಣಸಿಗೆ ಬಹಳಷ್ಟು ಸಲ ಭೇಟಿ ನೀಡಿದ್ದಾರೆ. ಆದರೆ, ಗೊಡೌಲಿಯಾ ಮಾರ್ಗದಲ್ಲಿ ಯಾವುದೇ ರಾಜಕೀಯ ಪ್ರವಾಸವನ್ನು ಮಾಡಿರಲಿಲ್ಲ. ಈಗ ರಾಹುಲ್ ಯಾತ್ರೆ ಇಂದು ಗೊಡೌಲಿಯಾ ತಲುಪಲಿದೆ. ಅಜ್ಜ, ಅಜ್ಜಿ ಹಾಗೂ ಅಪ್ಪ ಹೆಚ್ಚು ಭೇಟಿ ನೀಡದ ಪ್ರದೇಶಕ್ಕೆ ರಾಹುಲ್ ಗಾಂಧಿ ಭೇಟಿ ನೀಡುತ್ತಿದ್ದು, ಈ ಭಾಗಕ್ಕೆ ಭೇಟಿ ನೀಡಿದ ಮೊದಲ ಕಾಂಗ್ರೆಸ್ ನಾಯಕರಾಗಲಿದ್ದಾರೆ.
ರಾಹುಲ್ ಬನಾರಸ್ ಭೇಟಿಯ ಸಂಪೂರ್ಣ ವೇಳಾಪಟ್ಟಿ: ಬೆಳಗ್ಗೆ 9ಕ್ಕೆ ಗೋಲಗಡದಿಂದ ಪ್ರಯಾಣ ಆರಂಭವಾಗುತ್ತದೆ. ಈ ಪ್ರಯಾಣವು ದೇವಸ್ಥಾನದ ಮಾರ್ಗದಲ್ಲಿ ಕಾರಿನ ಮೂಲಕ 4.1 ಕಿಲೋಮೀಟರ್ ಸಾಗುತ್ತದೆ. ವಿಶ್ವೇಶ್ವರಗಂಜ್ ತಿರಹಾ ಮಾರ್ಗವಾಗಿ ಮೈದಾನದತ್ತ ಪ್ರಯಾಣ ಸಾಗಲಿದೆ. ಈ ವೇಳೆ, ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜಾ ಕಾರ್ಯಕ್ರಮವಿದೆ. ಇಲ್ಲಿಂದ ಗೊಡೌಲಿಯಾ ಪ್ರದೇಶಕ್ಕೆ ರಾಹುಲ್ ಗಾಂಧಿ ತೆರಳಲಿದ್ದಾರೆ. ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಾದ ಬಳಿಕ ಮಂಡುವಾಡಿ ಪ್ರದೇಶದಲ್ಲಿ ಕಾರ್ಯಕರ್ತರೊಂದಿಗೆ ಸಮಾವೇಶ ನಡೆಯಲಿದೆ. ನಂತರ 12 ಗಂಟೆಗೆ ಇಲ್ಲಿ ಕುರೋನಾ ಪ್ರದೇಶದಲ್ಲಿ ವಿರಾಮ ತೆಗೆದುಕೊಳ್ಳಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಭಾದೋಹಿ ರಸ್ತೆಯ ಜನ್ಸಾ ಪ್ರದೇಶದಿಂದ ಈ ಪ್ರಯಾಣ ಮತ್ತೆ ಆರಂಭವಾಗಲಿದೆ. ಇದಾದ ಬಳಿಕ ಭದೋಹಿಯ ಇಂದಿರಾ ಮಿಲ್ ಸ್ಕ್ವೇರ್ನಲ್ಲಿ ಕಾರ್ಮಿಕರನ್ನು ಭೇಟಿ ಮಾಡುವ ಕಾರ್ಯಕ್ರಮವಿದೆ. ಸಂಜೆ 5 ಗಂಟೆಗೆ ರಾಜಪುರ ಪ್ರದೇಶದಲ್ಲಿ ರಾಹುಲ್ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.
ರಾಜಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಭಾಷಣ: ಕಾಂಗ್ರೆಸ್ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, ಸಂಜೆ 5 ಗಂಟೆಗೆ ರಾಜಪುರದಲ್ಲಿ ರಾಹುಲ್ ಗಾಂಧಿ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿದ ನಂತರ ಜ್ಞಾನಪುರ ಇಂಟರ್ ಕಾಲೇಜಿನಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯು ಬಿಹಾರದಿಂದ ಚಂದೌಲಿ ಮೂಲಕ ಉತ್ತರ ಪ್ರದೇಶವನ್ನು ತಲುಪಿತು. ಅಲ್ಲಿ ಯಾತ್ರೆಯ ನಿಗದಿತ ತ್ರಿವರ್ಣ ಸಮಾರಂಭ ನಡೆಯಿತು. ಬಿಹಾರ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ಅವರು, ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರಿಗೆ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಅವಿನಾಶ್ ಪಾಂಡೆ, ಶಾಸಕಾಂಗ ಪಕ್ಷದ ನಾಯಕ ಆರಾಧನಾ ಮಿಶ್ರ ಮೋನಾ ಮತ್ತು ಅನೇಕ ಹಿರಿಯ ನಾಯಕರು ಉಪಸ್ಥಿತರಿದ್ದರು.
ಇದನ್ನೂ ಓದಿ: ಆಪರೇಷನ್ ಕಮಲ ಆರೋಪ: 2ನೇ ಸಲ ವಿಶ್ವಾಸಮತ ಯಾಚಿಸಿದ ದೆಹಲಿ ಸಿಎಂ ಕೇಜ್ರಿವಾಲ್