ETV Bharat / bharat

ಸಿಎಂ ಆಗಿಯೇ ವಿಧಾನಸಭೆಗೆ ಕಾಲಿಟ್ಟ ಚಂದ್ರಬಾಬು; ಡಿಸಿಎಂ ಹುದ್ದೆಯೊಂದಿಗೆ ರಾಜಕೀಯಕ್ಕೆ ಅಡಿಯಿಟ್ಟ ಪವನ್! - AP Assembly Session

author img

By ETV Bharat Karnataka Team

Published : Jun 21, 2024, 9:46 PM IST

ಸಿಎಂ ಆದ ನಂತರವೇ ಮತ್ತೆ ವಿಧಾನಸಭೆಗೆ ಬರುತ್ತೇನೆ ಎಂಬ ಪ್ರತಿಜ್ಞೆಯಂತೆ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಎರಡೂವರೆ ವರ್ಷಗಳ ಬಳಿಕ ಇಂದು ಸದನ ಪ್ರವೇಶಿಸಿದರು.

Chandrababu Naidu, Pawan Kalyan, YS Jagan
ಪವನ್​ ಕಲ್ಯಾಣ್, ಚಂದ್ರಬಾಬು ನಾಯ್ಡು, ವೈ.ಎಸ್.ಜಗನ್ (ETV Bharat)

ಅಮರಾವತಿ(ಆಂಧ್ರ ಪ್ರದೇಶ): ಆಂಧ್ರ ಪ್ರದೇಶದಲ್ಲಿ ವಿಧಾನಸಭೆಯ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಿದೆ. ನೂತನ ಮುಖ್ಯಮಂತ್ರಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಎರಡೂವರೆ ವರ್ಷಗಳ ಸುದೀರ್ಘ ಅವಧಿಯ ನಂತರ ಮೊದಲ ಬಾರಿಗೆ ಸದನ ಪ್ರವೇಶಿಸಿದರು.

ನಟ ಪವನ್​ ಕಲ್ಯಾಣ್ ತಮ್ಮ ರಾಜಕೀಯ ಜೀವನ ಆರಂಭಿಸಿದ ಬಳಿಕ ಮೊದಲ ಬಾರಿಗೆ ವಿಧಾನಸೌಧದ ಮೆಟ್ಟಿಲೇರಿದರು. ಹೊಸ ಉಪಮುಖ್ಯಮಂತ್ರಿ ಆಗಿಯೇ ಪವನ್ ವಿಧಾನಸಭೆಗೆ ಆಗಮಿಸಿದ್ದು ವಿಶೇಷ. ಇದೇ ವೇಳೆ, ಮಾಜಿ ಸಿಎಂ ವೈ.ಎಸ್.ಜಗನ್ ಹಿಂದಿನ ಗೇಟ್​ನಿಂದ ವಿಧಾನಸೌಧದ ಆವರಣ ತಲುಪಿದ್ದು ಗಮನ ಸೆಳೆಯಿತು!.

ರಾಜ್ಯದ 16ನೇ ವಿಧಾನಸಭೆ ಅಧಿವೇಶನ ಬೆಳಗ್ಗೆ 9:46ಕ್ಕೆ ಶುರುವಾಯಿತು. ಹಂಗಾಮಿ ಸ್ಪೀಕರ್ ಗೋರಂಟ್ಲ ಬುಚ್ಚಯ್ಯ ಚೌಧರಿ ಎಲ್ಲ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಥಮವಾಗಿ ಸಭಾನಾಯಕ ಹಾಗೂ ಸಿಎಂ ಚಂದ್ರಬಾಬು ನಾಯ್ಡು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸೇರಿದಂತೆ 172 ಸದಸ್ಯರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಲಭ್ಯತೆ ಮತ್ತಿತರ ಕಾರಣಗಳಿಂದ ಮೂವರು ಶಾಸಕರು ಪ್ರಮಾಣ ಸ್ವೀಕರಿಸಲಿಲ್ಲ.

ಪ್ರತಿಜ್ಞೆಯಂತೆ ನಡೆದ ಚಂದ್ರಬಾಬು: 2021ರ ನವೆಂಬರ್ 19ರಂದು ರೈತರ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿತ್ತು. ಆಗ ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಮತ್ತು ವಿಪಕ್ಷ ಟಿಡಿಪಿ ಸದಸ್ಯರ ನಡುವೆ ಮಾತಿನ ಯುದ್ಧವೇ ಏರ್ಪಟ್ಟಿತ್ತು. ಇದರ ನಡುವೆ ಚಂದ್ರಬಾಬು ಮಾತನಾಡುವಾಗ ಸ್ಪೀಕರ್ ಮೈಕ್ ಆಫ್​ ಮಾಡಿದ್ದರು.

ಅಲ್ಲದೇ, ಆಡಳಿತ ಪಕ್ಷದ ನಾಯಕರು ವಿಧಾನಸಭೆಯಲ್ಲಿ ತಮ್ಮ ಪತ್ನಿಗೆ ಅವಮಾನ ಮಾಡಿದ್ದಾರೆ ಎಂದು ಚಂದ್ರಬಾಬು ಗದ್ಗದಿತರಾಗಿದ್ದರು. ಅಂದೇ ವೈಎಸ್​ಆರ್​ ಕಾಂಗ್ರೆಸ್​ ಪಕ್ಷವನ್ನು ಸೋಲಿಸುವ ಶಪಥ ಮಾಡಿದ್ದರು. ''ಸಿಎಂ ಆದ ನಂತರವೇ ಮತ್ತೆ ವಿಧಾನಸಭೆಗೆ ಬರುತ್ತೇನೆ. ಈ ರಾಜಕೀಯ ನನಗೆ ಬೇಕಾಗಿಲ್ಲ. ಇದು ಗೌರವಾನ್ವಿತ ಸಭೆಯಲ್ಲ, ಇದು ಕೌರವ ಸಭೆ. ಇಂತಹ ಕೌರವ ಸಭೆಯಲ್ಲಿ ನಾನು ಇರುವುದಿಲ್ಲ'' ಎಂದು ಹೇಳುತ್ತಾ ಹೊರಬಂದಿದ್ದರು.

ವಿಭಜಿತ ಆಂಧ್ರದ ಮೊದಲ ಸಿಎಂ ಆಗಿದ್ದ ಚಂದ್ರಬಾಬು ಎರಡೂವರೆ ವರ್ಷಗಳ ನಂತರ ಇಂದು ಮತ್ತೆ ಸಿಎಂ ಆಗಿಯೇ ಸದನಕ್ಕೆ ಬಂದರು. ಅವರನ್ನು ಶಾಸಕರು ಅದ್ಧೂರಿಯಾಗಿ ಬರಮಾಡಿಕೊಂಡರು. ವಿಧಾನಸಭೆಯ ತಮ್ಮ ಚೇಂಬರ್‌ನಲ್ಲಿ ಪೂಜೆ ಸಲ್ಲಿಸಿದ ನಂತರ ಚಂದ್ರಬಾಬು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಚಂದ್ರಬಾಬು ಅವರನ್ನು ಅಪ್ಪಿಕೊಂಡರು. ಈ ವೇಳೆ ಸಿಎಂಗೆ ಸಚಿವರು, ಶಾಸಕರು ಅಭಿನಂದನೆ ಸಲ್ಲಿಸಿದರು.

ಹಿಂದಿನ ಗೇಟ್​ನಿಂದ ಬಂದ ಜಗನ್​: ಮಾಜಿ ಸಿಎಂ ವೈ.ಎಸ್.ಜಗನ್ ಇಂದು ಹಿಂದಿನ ಗೇಟ್​ನಿಂದ ವಿಧಾನಸೌಧ ಪ್ರವೇಶಿಸಿದರು. ಸಿಎಂ ಆಗಿದ್ದಾಗ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಮಾತ್ರ ಅವರು ಈ ಗೇಟ್​ನಿಂದ ಬರುತ್ತಿದ್ದರು. ಸದನದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಜಗನ್ ತಮ್ಮದೇ ಹೆಸರನ್ನು ಹೇಳಲು ತಡವರಿಸಿದರು.

ಮೀನುಗಾರರ ವೇಷದಲ್ಲಿ ಬಂದ ಶಾಸಕ: ಪಶ್ಚಿಮ ಗೋದಾವರಿ ಜಿಲ್ಲೆಯ ನರಸಾಪುರದ ಜನಸೇನಾ ಪಕ್ಷದ ಶಾಸಕ ಬೊಮ್ಮಿಡಿ ನಾಯ್ಕರ್ ಮೀನುಗಾರರ ವೇಷದಲ್ಲಿ ಆಗಮಿಸಿ ಗಮನ ಸೆಳೆದರು. ಕೈಯಲ್ಲಿ ಮೀನು, ಬಲೆ ಹಿಡಿದು ವಿನೂತನ ರೀತಿಯಲ್ಲಿ ವಿಧಾನಸಭೆಯನ್ನು ಅವರು ಪ್ರವೇಶಿಸಿದರು.

ಇದನ್ನೂ ಓದಿ: ಪವನ್ ಕಲ್ಯಾಣ್​ ಸೋಲುವ ಬಾಜಿ ಕಟ್ಟಿ ಸೋತು ಹೆಸರು ಬದಲಿಸಿಕೊಂಡ ವೈಎಸ್‌ಆರ್‌ಸಿಪಿ ನಾಯಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.