ETV Bharat / bharat

ಗುಜರಾತ್​ನಲ್ಲಿ ಮಹಾ ದುರಂತ: ಗೇಮ್‌ ಝೋನ್‌ನಲ್ಲಿ ಅಗ್ನಿ ಅವಘಡ, ಸಾವಿನ ಸಂಖ್ಯೆ 25ಕ್ಕೆ ಏರಿಕೆ.. ಪ್ರಧಾನಿ ತೀವ್ರ ಸಂತಾಪ - Fire in Rajkot Gaming Zone - FIRE IN RAJKOT GAMING ZONE

ಆಟದ ವಲಯ ಸಂಕೀರ್ಣದಲ್ಲಿ ಬೆಂಕಿ ಕಾಣಸಿಕೊಂಡು ಮಕ್ಕಳು ಸೇರಿದಂತೆ ಕನಿಷ್ಠ 25 ಜನರು ಮೃತಪಟ್ಟಿರುವ ಘಟನೆ ಗುಜರಾತ್‌ನ ರಾಜ್‌ಕೋಟ್​ನಲ್ಲಿ ನಡೆದಿದೆ.

Fire At Rajkot Gaming Zone
ಗೇಮ್‌ ಝೋನ್‌ನಲ್ಲಿ ಅಗ್ನಿ ದುರಂತ (Etv Bharat)
author img

By ETV Bharat Karnataka Team

Published : May 25, 2024, 9:20 PM IST

Updated : May 25, 2024, 10:16 PM IST

ರಾಜ್‌ಕೋಟ್ (ಗುಜರಾತ್): ಗುಜರಾತ್‌ನ ರಾಜ್‌ಕೋಟ್​ನಲ್ಲಿ ಶನಿವಾರ ಭಾರಿ ಅಗ್ನಿ ದುರಂತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 25ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ರಕ್ಷಣಾ ತಂಡಗಳು ದೌಡಾಯಿಸಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿದೆ.

ಇಲ್ಲಿನ ಟಿಆರ್‌ಪಿ ಗೇಮ್‌ ಝೋನ್‌ನಲ್ಲಿ ಕಟ್ಟಡದಲ್ಲಿ ಮಧ್ಯಾಹ್ನ ಭಾರಿ ಬೆಂಕಿ ಅವಘಡ ನಡೆದಿದೆ. ಬೇಸಿಗೆ ರಜೆಯ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರು. ಇದರಲ್ಲಿ ಮಕ್ಕಳೇ ಅಧಿಕವಾಗಿದ್ದರು. ಈಗಾಗಲೇ, ಸುಮಾರು 20 ಮೃತದೇಹಗಳು ಪತ್ತೆಯಾಗಿವೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದ ಎಂಟು ತಂಡಗಳು ತೊಡಗಿವೆ. ಬೆಂಕಿಯು ಇಡೀ ಆಟದ ವಲಯ ಸಂಕೀರ್ಣವನ್ನು ಆವರಿಸಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ರಾಜ್‌ಕೋಟ್ ಪೊಲೀಸ್ ಕಮಿಷನರ್ ರಾಜು ಭಾರ್ಗವ ಮಾತನಾಡಿ, ಟಿಆರ್‌ಪಿ ಗೇಮಿಂಗ್ ವಲಯದಲ್ಲಿ ಮಧ್ಯಾಹ್ನ ಈ ಬೆಂಕಿ ಕಾಣಿಸಿಕೊಂಡಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಬೆಂಕಿ ನಿಯಂತ್ರಣದಲ್ಲಿದೆ. ನಾವು ಸಾಧ್ಯವಾದಷ್ಟು ಜನರನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮೋದಿ ಟ್ವೀಟ್​ ಮಾಡಿ ಸಂತಾಪ: ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ’’ರಾಜ್‌ಕೋಟ್‌ನಲ್ಲಿ ನಡೆದ ಅಗ್ನಿ ದುರಂತ ನಮ್ಮೆಲ್ಲರಿಗೂ ತೀವ್ರ ದುಃಖ ತಂದಿದೆ. ಘಟನೆ ಬಗ್ಗೆ ಗುಜರಾತ್​ ಸಿಎಂ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ಅವರು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಎಸ್​​ಐಟಿ ತನಿಖೆಗೆ ಆದೇಶ: ಈ ನಡುವೆ ಘಟನೆ ಬಗ್ಗೆ ತನಿಖೆ ನಡೆಸಲು ಎಸ್​ಐಟಿ ರಚನೆ ಮಾಡಲಾಗಿದೆ. ಭೀಕರ ಘಟನೆಗೆ ಕಾರಣಗಳೇನು? ಎಂಬ ಬಗ್ಗೆ ಪತ್ತೆ ಹಚ್ಚಲು ಎಸ್​​​ಐಟಿಗೆ ಸೂಚನೆ ನೀಡಲಾಗಿದೆ.

ತಲಾ ನಾಲ್ಕು ಲಕ್ಷ ರೂ ಪರಿಹಾರ ಘೋಷಣೆ: ಗುಜರಾತ್ ಸರ್ಕಾರ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯ ಮಾಡಿದವು.

ಇದನ್ನೂ ಓದಿ: Watch; ಗನ್‌ಪೌಡರ್ ಕಾರ್ಖಾನೆಯಲ್ಲಿ ಭೀಕರ ಸ್ಫೋಟಕ್ಕೆ ಓರ್ವ ಬಲಿ, 6 ಮಂದಿಗೆ ಗಾಯ: ಬೆಚ್ಚಿಬೀಳಿಸಿದ ಸಿಸಿಟಿವಿ ದೃಶ್ಯಗಳು!

Last Updated : May 25, 2024, 10:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.