ETV Bharat / bharat

ಆಂಧ್ರಪ್ರದೇಶದ ನೂತನ ಸಿಎಂ ಆಗಿ ಇಂದು ಚಂದ್ರಬಾಬು ನಾಯ್ಡು ಪ್ರಮಾಣ ವಚನ: ಅಮಿತ್​ ಶಾ, ಜೆಪಿ ನಡ್ಡಾ, ಚಿರಂಜೀವಿ ಸೇರಿ ಗಣ್ಯರು ಭಾಗಿ - Chandrababu oath taking ceremony - CHANDRABABU OATH TAKING CEREMONY

ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಇಂದು (ಬುಧವಾರ) ಬೆಳಗ್ಗೆ ಆಂಧ್ರಪ್ರದೇಶದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈಗಾಗಲೇ ವಿಜಯವಾಡಕ್ಕೆ ಅಮಿತ್​ ಶಾ, ಜೆಪಿ ನಡ್ಡಾ, ನಟ ಚಿರಂಜೀವಿ ಆಗಮಿಸಿದ್ದು, ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

Chandrababu oath taking ceremony  Chandrababu Naidu  Amit Shah  JP Nadda
ಚಂದ್ರಬಾಬು ನಾಯ್ಡು ಇಂದು ಪ್ರಮಾಣ ವಚನ: ವಿಜಯವಾಡಕ್ಕೆ ಅಮಿತ್​ ಶಾ, ಜೆಪಿ ನಡ್ಡಾ, ಚಿರಂಜೀವಿ ಆಗಮನ (ETV Bharat)
author img

By ETV Bharat Karnataka Team

Published : Jun 12, 2024, 7:03 AM IST

ವಿಜಯವಾಡ (ಆಂಧ್ರಪ್ರದೇಶ): ತೆಲುಗು ದೇಶಂ ನಾಯಕ ನಾರಾ ಚಂದ್ರಬಾಬು ನಾಯ್ಡು ಅವರು ಇಂದು (ಬುಧವಾರ)ವಿಜಯವಾಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇದರಿಂದ ಕೇಂದ್ರ ಸಚಿವರು ಹಾಗೂ ವಿವಿಐಪಿಗಳು ಈಗಾಗಲೇ ವಿಜಯವಾಡಕ್ಕೆ ಆಗಮಿಸಿದ್ದಾರೆ. ಗನ್ನವರಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮೆಗಾ ಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಇತರರನ್ನು ತೆಲುಗು ದೇಶಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಮತ್ತು ಟಿಡಿಪಿ ಮುಖಂಡರು ಸ್ವಾಗತಿಸಿದ್ದಾರೆ.

ರಾಜ್ಯಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ನಾರಾ ಲೋಕೇಶ್ ಅವರು ನಿನ್ನೆ (ಮಂಗಳವಾರ) ಗನ್ನವರಂ ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಿದ್ದಾರೆ. ಬಳಿಕ ಈ ನಾಯಕರು ಉಂಡವಳ್ಳಿಯಲ್ಲಿರುವ ಚಂದ್ರಬಾಬು ನಾಯ್ಡು ಮನೆಗೆ ತೆರಳಿದರು.

ಅಮಿತ್ ಶಾ, ಜೆ.ಪಿ. ನಡ್ಡಾ, ಚಂದ್ರಬಾಬು ಮಾತುಕತೆ: ಈ ಸಂದರ್ಭದಲ್ಲಿ ಚಂದ್ರಬಾಬು ದಂಪತಿಗಳು ಅಮಿತ್ ಶಾ ಮತ್ತು ನಡ್ಡಾ ಅವರನ್ನು ಸ್ವಾಗತಿಸಿದರು. ರಾಜ್ಯ ಸಚಿವ ಸಂಪುಟ ರಚನೆ ಕುರಿತು ಚಂದ್ರಬಾಬು ನಾಯ್ಡು ಜೊತೆ ಮೈತ್ರಿ ನಾಯಕರು ಚರ್ಚೆ ನಡೆಸಿದ್ದಾರೆ. ಮಾತುಕತೆಯ ನಂತರ ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ನೊವಾಟೆಲ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದರು.

ಪ್ರಮಾಣ ವಚನಕ್ಕೆ ಸಕಲ ಸಿದ್ಧತೆ: ಪ್ರಮಾಣ ವಚನಕ್ಕೆ ಸಿದ್ದವಾಗಿರುವ ಚಂದ್ರಬಾಬು ನಾಯ್ಡು ಅವರು ಈಗಾಗಲೇ ನೂತನ ಸಚಿವರ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ಸಚಿವರಾಗುವ ಅವಕಾಶ ಗಿಟ್ಟಿಸಿಕೊಂಡಿರುವ ಬಿಜೆಪಿ ನಾಯಕರನ್ನು ಚಂದ್ರಬಾಬು ಅವರೇ ಕರೆಸಿಕೊಂಡು ಮಾತನಾಡಿದ್ದಾರೆ. ಹಲವು ಆಕಾಂಕ್ಷಿಗಳು ಈಗಾಗಲೇ ವಿಜಯವಾಡ ಮತ್ತು ಗುಂಟೂರಿನಲ್ಲಿ ನೆಲೆಸಿದ್ದಾರೆ. ಅವರಲ್ಲಿ ಕೆಲವು ನಾಯಕರಿಗೆ ಚಂದ್ರಬಾಬು ನಾಯ್ಡು ದೂರವಾಣಿ ಕರೆ ಮಾಡಿ ಶುಭ ಸುದ್ದಿಯನ್ನು ನೀಡಿದ್ದಾರೆ.

ಕುಟುಂಬ ಸಮೇತ ಚಿರಂಜೀವಿ ಭಾಗಿ: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಚಂದ್ರಬಾಬು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜ್ಯದ ಮುಖ್ಯ ಅತಿಥಿಯಾಗಿ ಆಹ್ವಾನ ಸ್ವೀಕರಿಸಿದ ಮೆಗಾಸ್ಟಾರ್ ಚಿರಂಜೀವಿ ವಿಜಯವಾಡಕ್ಕೆ ತಲುಪಿದ್ದಾರೆ. ಹೈದರಾಬಾದ್ ಬೇಗಂಪೇಟೆ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಕುಟುಂಬ ಸಮೇತರಾಗಿ ನಿನ್ನೆ (ಮಂಗಳವಾರ) ವಿಜಯವಾಡಕ್ಕೆ ಬಂದಿದ್ದಾರೆ. ಚಿರಂಜೀವಿ ಅವರ ಪತ್ನಿ ಸುರೇಖಾ, ಪುತ್ರಿ ಶ್ರೀಜಾ ಮತ್ತು ಇಬ್ಬರು ಮೊಮ್ಮಕ್ಕಳು ಆಗಮಿಸಿದ್ದಾರೆ. ಬುಧವಾರ ಬೆಳಗ್ಗೆ ನಡೆಯಲಿರುವ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸಮಾರಂಭದಲ್ಲಿ ಚಿರಂಜೀವಿ ಕುಟುಂಬ ಸಮೇತರಾಗಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಮೋದಿ ಸಂಪುಟದಲ್ಲಿರುವ ಶೇ.66ರಷ್ಟು ಮಂತ್ರಿಗಳ ವಯಸ್ಸು 51 ರಿಂದ 70 ವರ್ಷ! - ADR Report

ETV Bharat Logo

Copyright © 2024 Ushodaya Enterprises Pvt. Ltd., All Rights Reserved.