ETV Bharat / bharat

ಇಂಜಿನಿಯರ್ ರಶೀದ್ ಸವಾಲು ಸ್ವೀಕರಿಸಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ: ಏನದು ಚಾಲೆಂಜ್​? - omar abdullah accepted challenge

author img

By ETV Bharat Karnataka Team

Published : Sep 13, 2024, 4:53 PM IST

ಇಂಜಿನಿಯರ್ ರಶೀದ್ ಹಾಕಿದ್ದ ಸವಾಲು ಸ್ವೀಕರಿಸಿರುವ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ರಶೀದ್​ ಜೊತೆ ತಿಹಾರ್ ಜೈಲಿಗೆ ಹೋಗಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಒಮರ್ ಅಬ್ದುಲ್ಲಾ
ಒಮರ್ ಅಬ್ದುಲ್ಲಾ (ETV Bharat)

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಇಲ್ಲಿನ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಇಂಜಿನಿಯರ್ ರಶೀದ್ ಹಾಕಿದ್ದ ಸವಾಲು ಸ್ವೀಕರಿಸಿದ್ದಾರೆ.

ಕುಲ್ಗಾಮ್‌ನ ಚೋಗಾಮ್‌ನಲ್ಲಿ ರ‍್ಯಾಲಿ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂಜಿನಿಯರ್ ರಶೀದ್ ಅವರ ಹಾಕಿರುವ ಸವಾಲಿನ ಬಗ್ಗೆ ಪ್ರತಿಕ್ರಿಯಿಸಿ, ನಾನು ಇಂಜಿನಿಯರ್ ರಶೀದ್ ಜೊತೆ ಅಕ್ಟೋಬರ್ 2 ರಂದು ತಿಹಾರ್ ಜೈಲಿಗೆ ಹೋಗಲು ಸಿದ್ಧನಿದ್ದೇನೆ. ಜೈಲಿನಲ್ಲಿ ನನ್ನ ಜೊತೆಗಿದ್ದರೆ ನಾನು ರಾಜಕೀಯ ತೊರೆಯುತ್ತೇನೆ ಎಂದು ರಶೀದ್ ಸವಾಲು ಹಾಕಿದ್ದರು. ಆ ಸವಾಲನ್ನು ನಾನು ಸ್ವೀಕರಿಸುತ್ತೇನೆ. ರಶೀದ್​ ರಾಜಕೀಯವನ್ನು ತೊರೆದು ಮನೆಯಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದರು.

ಜನರ ನೋವು ನಿರಾಶೆಗಳಿಗೆ ಬಿಜೆಪಿ ಕಾರಣ: ಜಮ್ಮು ಮತ್ತು ಕಾಶ್ಮೀರದಲ್ಲಿನ ಜನ ನೋವು ಮತ್ತು ನಿರಾಶೆಗೆ ಬಿಜೆಪಿಯ ನೀತಿಗಳೇ ಕಾರಣ. ಆಡಳಿತ ಪಕ್ಷದೊಂದಿಗೆ ಕೆಲಸ ಮಾಡುವ ಇತರ ರಾಜಕೀಯ ಗುಂಪುಗಳಿಗಿಂತ ಭಿನ್ನವಾಗಿ ಬಿಜೆಪಿಯನ್ನು ವಿರೋಧಿಸಲು ನಮ್ಮ ಮೈತ್ರಿ ಬದ್ಧವಾಗಿದೆ. ನಾವು ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ ಎಂದು ದೃಢಪಡಿಸಲು ನಮ್ಮದು ಚುನಾವಣಾ ಪೂರ್ವ ಮೈತ್ರಿ ಎಂದು ತೋರಿಸುತ್ತಿದ್ದೇವೆ ಎಂದು ತಿಳಿಸಿದರು.

ಕೆಲವರು ಬಿಜೆಪಿಯನ್ನು ಬೇರೆ ಬೇರೆ ರೀತಿಯಲ್ಲಿ ಬೆಂಬಲಿಸಲು ಚುನಾವಣಾ ಕಣದಲ್ಲಿದ್ದಾರೆ. ಜಮ್ಮು ಮತ್ತು ಕಾಶ್ಮೀರವನ್ನು ಬಿಜೆಪಿಯ ನೀತಿಗಳಿಂದ ರಕ್ಷಿಸಲು ಮತ್ತು ಒಂದು ದಶಕದಲ್ಲಿ ಈ ಪ್ರದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳಿಂದ ಹೊರ ಬರಲು ನಮ್ಮ ಮೈತ್ರಿ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸಿ ಎಂದು ಮತದಾರರಿಗೆ ಮನವಿ ಮಾಡಿದರು.

ಇದನ್ನೂ ಓದಿ: 'ಸತ್ಯಕ್ಕೆ ತೊಂದರೆ ಕೊಡಬಹುದು, ಆದರೆ ಸೋಲಿಸಲು ಸಾಧ್ಯವಿಲ್ಲ': ಆಪ್‌ ಸಂಸದ ರಾಘವ್​ ಚಡ್ಡಾ - Raghav Chadha

ETV Bharat Logo

Copyright © 2024 Ushodaya Enterprises Pvt. Ltd., All Rights Reserved.