ನವದೆಹಲಿ: ಇಂದಿನಿಂದ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಹೊಸ ನಿಯಮಗಳು ಜಾರಿಗೆ ಬರಲಿದೆ. ಅದರ ಅನುಸಾರ ಇನ್ಮುಂದೆ ಆರ್‌ಟಿಒದಿಂದ ಅಧಿಕಾರ ಪಡೆದ ಕೇಂದ್ರಗಳು ಮಾತ್ರ ಡ್ರೈವಿಂಗ್ ಟೆಸ್ಟ್‌ಗಳನ್ನು ನಡೆಸಲು ಮತ್ತು ಚಾಲನಾ ಅರ್ಹತೆಯ ಪ್ರಮಾಣ ಪತ್ರ ನೀಡಬಹುದಾಗಿದೆ. ಜೂನ್ 1 ರಿಂದ ಅಸ್ತಿತ್ವದಲ್ಲಿರುವ ನಿಯಮಗಳಿಗೆ ಯಾವುದೇ ಬದಲಾವಣೆಗಳಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರಗಳ (ಎಡಿಟಿಸಿ) ಸುತ್ತ ನಿಬಂಧನೆಗಳನ್ನು ಸೂಚಿಸುವ ನಿಯಮಗಳು 31B ನಿಂದ 31J ವರೆಗೆ ಕೇಂದ್ರ ಮೋಟಾರು ವಾಹನಗಳ ನಿಯಮಗಳಲ್ಲಿ (ಸಿಎಂವಿಆರ್) ), 1989 ಜಿಎಸ್ಆರ್ 394 (ಇ) ಅಡಿ ಸೇರಿಸಲಾಗಿದೆ. ಈ ಹಿಂದಿನ ವರದಿಗಳಂತೆ ಡ್ರೈವಿಂಗ್ ಲೈಸೆನ್ಸ್ ಪಡೆಯುವವರು ಇನ್ಮುಂದೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ಚಾಲನಾ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ. ಮಾನ್ಯತೆ ಪಡೆದ ಖಾಸಗಿ ಡ್ರೈವಿಂಗ್ ಶಾಲೆಗಳಲ್ಲಿ ಡ್ರೈವಿಂಗ್ ಪರೀಕ್ಷೆ ಮಾಡಬಹುದು ಎಂದು ಸುದ್ದಿಯಾಗಿತ್ತು.
ಅಲ್ಲದೇ, ಖಾಸಗಿ ಡ್ರೈವಿಂಗ್ ಶಾಲೆಗಳಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅರ್ಜಿದಾರರು ಪ್ರಮಾಣಪತ್ರ ಪಡೆಯುತ್ತಾರೆ. ಈ ಪ್ರಮಾಣ ಪತ್ರದಿಂದ ಆರ್ಟಿಒನಲ್ಲಿ ಹೆಚ್ಚಿನ ಪರೀಕ್ಷೆಗೆ ಒಳಗಾಗದೇ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಲು ಬಳಸಬಹುದು.
ಮೋಟಾರು ವಾಹನಗಳ ಕಾಯಿದೆ, 1988 ರ ಸೆಕ್ಷನ್ 12 ರ ಪ್ರಕಾರ ಮೋಟಾರು ವಾಹನಗಳನ್ನು ಚಾಲನೆ ಮಾಡಲು ಸೂಚನೆಗಳನ್ನು ನೀಡಲು ಶಾಲೆಗಳು ಅಥವಾ ಸಂಸ್ಥೆಗಳಿಗೆ ಪರವಾನಗಿ ಮತ್ತು ನಿಯಂತ್ರಣವನ್ನು ಒದಗಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ಡ್ರೈವಿಂಗ್ ಟೆಸ್ಟ್ ಪರೀಕ್ಷೆಯ ಅವಶ್ಯಕತೆಯಿಂದ ಯಾವುದೇ ವಿನಾಯಿತಿ ಪಡೆಯದೇ ಡ್ರೈವಿಂಗ್ ಲೈಸೆನ್ಸ್ ನೀಡುವ ಅಧಿಕಾರ ಪ್ರಾಧಿಕಾರದ ಬಳಿ ಇರುತ್ತದೆ. ಆರ್‌ಟಿಒ ಕಚೇರಿ ಬದಲಿಗೆ ಖಾಸಗಿ ತರಬೇತಿ ಕೇಂದ್ರಗಳಲ್ಲಿ ಚಾಲನಾ ಪರೀಕ್ಷೆಗೆ ಹಾಜರಾಗಬಹುದು. ಚಾಲನ ಪರೀಕ್ಷೆ ಅಗತ್ಯತೆಯಿಂದ ಯಾವುದೇ ಮಾನ್ಯತೆ ಪಡೆದ ಡ್ರೈವಿಂಗ್ ತರಬೇತಿ ಶಾಲೆಗಳು ಹೊರತಾಗಿಲ್ಲ. ಆರ್‌ಟಿಒ ಕಚೇರಿಯಿಂದಲೂ ಚಾಲನಾ ಪರವಾನಗಿ ಪಡೆಯಬಹುದು. ಈ ಹೊಸ ನಿಯಮಗಳ ಮುಖ್ಯ ಉದ್ದೇಶವೆಂದರೆ ಡ್ರೈವಿಂಗ್ ಲೈಸೆನ್ಸ್‌ಗಾಗಿ ಅರ್ಜಿದಾರರು ನೇರವಾಗಿ ಆರ್‌ಟಿಒ ಕಚೇರಿಗಳಿಗೆ ಹೋಗುವ ಅಗತ್ಯವನ್ನು ತೊಡೆದುಹಾಕುವುದೇ ಆಗಿದೆ. ಚಾಲನಾ ಪರವಾನಗಿ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನೀಡಲಾಗುತ್ತದೆ. (ಐಎಎನ್ಎಸ್)
ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕೇ?; ಗಮನದಲ್ಲಿರಲಿ ಜೂನ್ 1 ರಿಂದ ಹೊಸ ನಿಯಮಗಳು ಜಾರಿ - ಇನ್ಮುಂದೆ ಇರಲ್ಲ ಟೆಸ್ಟ್ ಡ್ರೈವ್!