ETV Bharat / bharat

ಕೇಂದ್ರ ಸರ್ಕಾರಿ ನೌಕರರಿಗೆ ಶಿವರಾತ್ರಿ ಬಂಪರ್ ಗಿಫ್ಟ್​​​: ಶೇ ನಾಲ್ಕರಷ್ಟು ಡಿಎ ಹೆಚ್ಚಿಸಿ ಕೇಂದ್ರದ ಆದೇಶ

ಶಿವರಾತ್ರಿ ಮುನ್ನಾ ದಿನ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಬಂಪರ್​ ಗಿಫ್ಟ್​ ನೀಡಿದೆ. ಡಿಎ ಇದುವರೆಗೂ ಮೂಲವೇತನದ ಶೇ 50ರ ಹೆಚ್ಚಳ ಕಂಡಿದೆ. ಅಂದರೆ ಶೇ 46ರ ಇದ್ದ ಡಿಎ ಈಗ ಶೇ 50ರಷ್ಟಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.

centre-hikes-da-to-50-pc-of-basic-pay-for-its-employees
ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್​​: ಮೂಲ ವೇತನದ 50 ಬೇಸಿಸ್ ಪಾಯಿಂಟ್​ನಷ್ಟು ಡಿಎ ಹೆಚ್ಚಿಸಿದ ಕೇಂದ್ರ
author img

By PTI

Published : Mar 7, 2024, 8:38 PM IST

Updated : Mar 7, 2024, 9:08 PM IST

ನವದೆಹಲಿ: ಕೇಂದ್ರ ಸರ್ಕಾರವು ನೌಕರರಿಗೆ ಭರ್ಜರಿ ಶಿವರಾತ್ರಿ ಗಿಫ್ಟ್​ ನೀಡಿದೆ. ತುಟ್ಟಿಭತ್ಯೆ (ಡಿಎ) ಮೂಲ ವೇತನದ ಶೇ 50ಕ್ಕೆ ಹೆಚ್ಚಿಸಿದ್ದು, ಅಂದರೆ ಪ್ರಸ್ತುತ ಇದ್ದ ಶೇ 46ರಷ್ಟು ಡಿಎ ಯನ್ನು ಶೇ 50ಕ್ಕೆ ಹೆಚ್ಚಿಸಿ, ಒಟ್ಟಾರೆ ಶೇ ನಾಲ್ಕರಷ್ಟು ಏರಿಕೆ ಮಾಡಲಾಗಿದೆ. ಈ ವರ್ಷದ ಜನವರಿ 1 ರಿಂದ ಜಾರಿಗೆ ಬರುವಂತೆ 1 ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ ನೀಡಿದೆ. ಚುನಾವಣೆಗೂ ಮುನ್ನ ಡಿಎ ಹೆಚ್ಚಿಸಿ ಸರ್ಕಾರಿ ನೌಕರರ ಮನವೊಲಿಸುವ ಕಸರತ್ತು ನಡೆಸಿದೆ.

ಜನವರಿ 1, 2024 ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ಡಿಆರ್‌ನೆಸ್ ರಿಲೀಫ್ (ಡಿಆರ್) ಅನ್ನು ಸಹ ಬಿಡುಗಡೆ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು ಪ್ರಸ್ತುತ ಇರುವ ಶೇಕಡಾ 46 ರಿಂದ ಶೇ 50ಕ್ಕೆ ಏರಿಕೆಯಾಗಿದೆ. ಅಂದರೆ ಶೇ ನಾಲ್ಕರಷ್ಟು ಹೆಚ್ಚಳವನ್ನು ಮಾಡಲಾಗಿದೆ. ಬೆಲೆ ಏರಿಕೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಮೂಲ ವೇತನ/ಪಿಂಚಣಿ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಂಪುಟ ಸಭೆಯ ನಂತರ ಹೇಳಿದ್ದಾರೆ.

ತುಟ್ಟಿಭತ್ಯೆ ಹೆಚ್ಚಳದಿಂದ ವಾರ್ಷಿಕ 12,869 ಕೋಟಿ ರೂ. ಹೊರೆ ಬೀಳಲಿದೆ. ಇದರ ಪರಿಣಾಮ 2024-25ರ ಅವಧಿಯಲ್ಲಿ (ಜನವರಿ 2024 ರಿಂದ ಫೆಬ್ರವರಿ 2025) 15,014 ಕೋಟಿ ರೂ. ಸರ್ಕಾರಕ್ಕೆ ಹೊರೆ ಆಗಲಿದೆ ಎಂದು ಅಂದಾಜಿಸಲಾಗಿದೆ.

ಡಿಎ ಹೆಚ್ಚಳದೊಂದಿಗೆ ಸಾರಿಗೆ ಭತ್ಯೆ, ಕ್ಯಾಂಟೀನ್ ಭತ್ಯೆ ಮತ್ತು ನಿಯೋಜಿತ ಭತ್ಯೆಗಳನ್ನು ಶೇ 25 ರಷ್ಟನ್ನು ಹೆಚ್ಚಿಸಲಾಗಿದೆ. ಮನೆ ಬಾಡಿಗೆ ಭತ್ಯೆಯನ್ನು ಮೂಲ ವೇತನದ ಶೇ.27, ಶೇ.19 ಮತ್ತು ಶೇ.9 ರಿಂದ ಕ್ರಮವಾಗಿ ಶೇ.30, ಶೇ.20 ಮತ್ತು ಶೇ.10ಕ್ಕೆ ಏರಿಸಲಾಗಿದೆ. ಗ್ರಾಚ್ಯುಟಿ ಅಡಿಯಲ್ಲಿ ಬರುವ ಪ್ರಯೋಜನಗಳನ್ನು ಶೇಕಡಾ 25 ರಷ್ಟು ಹೆಚ್ಚಿಸಲಾಗಿದೆ ಮತ್ತು ಈಗಿರುವ ಒಟ್ಟಾರೆ 20 ಲಕ್ಷದಿಂದ 25 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ವಿವಿಧ ಭತ್ಯೆಗಳ ಹೆಚ್ಚಳದಿಂದ ಬೊಕ್ಕಸಕ್ಕೆ ವಾರ್ಷಿಕವಾಗಿ 9,400 ಕೋಟಿ ರೂ. ಹೊರೆ ಆಗಲಿದೆ. 7ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಅಂಗೀಕೃತ ಸೂತ್ರಕ್ಕೆ ಅನುಗುಣವಾಗಿ ಡಿಎ ಮತ್ತು ಡಿಆರ್ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ನಿರ್ಧಾರವು 67.95 ಲಕ್ಷ ಪಿಂಚಣಿದಾರರ ಜೊತೆಗೆ 49.18 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಪ್ರಯೋಜನವಾಗಲಿದೆ.

ಇದನ್ನು ಓದಿ: ಮಹಾಶಿವರಾತ್ರಿ: ಅರಮನೆಯ ತ್ರಿನೇಶ್ವರ ದೇವಾಲಯಕ್ಕೆ ಬಂತು 11 ಕೆಜಿ ಅಪರಂಜಿ ಚಿನ್ನದ ಕೊಳಗ

Last Updated : Mar 7, 2024, 9:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.