ETV Bharat / bharat

ಮುಂಗಾರು ಹಂಗಾಮಿನ 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ ಕೇಂದ್ರ; ಭತ್ತಕ್ಕೆ ₹117 ಹೆಚ್ಚಳ - MSP for Kharif Crops

author img

By ANI

Published : Jun 19, 2024, 10:42 PM IST

Updated : Jun 19, 2024, 11:04 PM IST

ಮುಂಗಾರು ಹಂಗಾಮಿನ 14 ಬೆಳೆಗಳಿಗೆ ಕೇಂದ್ರ ಸರ್ಕಾರ ಇಂದು ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ.

Union Cabinet meeting
ಕೇಂದ್ರ ಸಚಿವ ಸಂಪುಟ ಸಭೆ (ಸಂಗ್ರಹ ಚಿತ್ರ - ANI)

ನವದೆಹಲಿ: ಮುಂಗಾರು ಹಂಗಾಮಿನ ಭತ್ತ, ರಾಗಿ, ಜೋಳ, ಸಜ್ಜೆ, ಮೆಕ್ಕೆಜೋಳ ಮತ್ತು ಹತ್ತಿ ಸೇರಿದಂತೆ 14 ಬೆಳೆಗಳಿಗೆ ಕೇಂದ್ರ ಸರ್ಕಾರ ಬುಧವಾರ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಎಂಎಸ್‌ಪಿಗೆ ಅನುಮೋದನೆ ನೀಡಿತು.

ಖಾರಿಫ್ ಬೆಳೆಗಳಿಗೆ ಎಂಎಸ್‌ಪಿ, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿ, ಮಹಾರಾಷ್ಟ್ರದಲ್ಲಿ 76,000 ಕೋಟಿ ರೂ. ವೆಚ್ಚದ ವಧವನ್ ಬಂದರು ಯೋಜನೆ ಸೇರಿದಂತೆ ಐದು ಪ್ರಮುಖ ನಿರ್ಧಾರಗಳನ್ನು ಕೇಂದ್ರ ಸಂಪುಟ ತೆಗೆದುಕೊಂಡಿದೆ.

ಖಾರಿಫ್ ಹಂಗಾಮು ಆರಂಭವಾಗುತ್ತಿದ್ದು, ರೈತರ ಹಿತದೃಷ್ಟಿಯಿಂದ 14 ಬೆಳೆಗಳ ಎಂಎಸ್‌ಪಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎಂಎಸ್​ಪಿಯಿಂದ ಸರ್ಕಾರಕ್ಕೆ ಎರಡು ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಹೊರೆಯಾಗಲಿದೆ. ಹಿಂದಿನ ಹಂಗಾಮಿನಲ್ಲಿ ಹೋಲಿಸಿದರೆ ರೈತರಿಗೆ 35,000 ಕೋಟಿ ರೂಪಾಯಿಗಳ ಲಾಭವಾಗಲಿದೆ. ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳಿಗೆ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಎಂಎಸ್‌ಪಿ ಶಿಫಾರಸು ಮಾಡಲಾಗಿದೆ.

ಗೂರೆಳ್ಳು (ಕಪ್ಪು ಎಳ್ಳು) ಕ್ವಿಂಟಲ್‌ಗೆ 983 ರೂ., ಎಳ್ಳು ಕ್ವಿಂಟಲ್‌ಗೆ 632 ಮತ್ತು ತೊಗರಿ ಬೇಳೆ, ಮಸೂರು ಬೇಳೆ ಕ್ವಿಂಟಲ್‌ಗೆ 550 ರೂ. ಹೊಸ ಎಂಎಸ್​ಪಿ ನಿಗದಿ ಮಾಡಲಾಗಿದೆ. ಭತ್ತಕ್ಕೆ ಹೊಸ ಎಂಎಸ್‌ಪಿ ಕ್ವಿಂಟಲ್‌ಗೆ 2,300 ರೂ.ಗಳಾಗಿದ್ದು, ಹಿಂದಿನ ಬೆಲೆಗಿಂತ 117 ರೂ. ಹೆಚ್ಚಳ ಮಾಡಲಾಗಿದೆ. ಹತ್ತಿಯ ಎಂಎಸ್‌ಪಿಯನ್ನು 501 ರೂ. ಹೆಚ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಎಂಎಸ್​ಪಿ ಹೆಚ್ಚಳ:

ಬೆಳೆ - ರೂಪಾಯಿ

  • ಭತ್ತ - 117
  • ಜೋಳ - 191
  • ಸಜ್ಜೆ -125
  • ರಾಗಿ - 444
  • ಮೆಕ್ಕೆಜೋಳ - 135
  • ಹೆಸರು - 124
  • ತೊಗರಿ /ಮಸೂರ ಬೇಳೆ - 550
  • ಉದ್ದು - 450
  • ನೆಲಗಡಲೆ - 406
  • ಸೂರ್ಯಕಾಂತಿ - 520
  • ಸೋಯಾಬೀನ್ - 292
  • ಎಳ್ಳು - 632
  • ಗೂರೆಳ್ಳು - 582
  • ಹತ್ತಿ - 501

ಇದನ್ನೂ ಓದಿ: 'ಬೇಟಿ ಬಚಾವೋ, ಬೇಟಿ ಪಢಾವೋ' ಘೋಷವಾಕ್ಯವನ್ನೇ ತಪ್ಪಾಗಿ ಬರೆದ ಕೇಂದ್ರ ಸಚಿವೆ! ವಿಡಿಯೋ

Last Updated : Jun 19, 2024, 11:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.