ETV Bharat / bharat

ಮಕ್ಕಳು, ಮಹಿಳೆಯರು ಜೀತದಾಳುಗಳಾಗಿ ಬಳಕೆ; ಕಾರ್ಮಿಕರಿಗೆ ನಿಂದಿಸಿದ ವಿಡಿಯೋ ವೈರಲ್​ ಬೆನ್ನಲ್ಲೇ ಇಟ್ಟಿಗೆ ಭಟ್ಟಿ ಮಾಲೀಕನ ವಿರುದ್ಧ ಕೇಸ್

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರನ್ನು ಜೀತದಾಳುಗಳಾಗಿ ಇಟ್ಟುಕೊಂಡಿದ್ದಲ್ಲದೆ, ಅವರನ್ನು ನಿಂದಿಸಿದ ವಿಡಿಯೋ ವೈರಲ್​ ಆಗಿತ್ತು. ಈ ಹಿನ್ನೆಲೆಯಲ್ಲಿ ಇಟ್ಟಿಗೆ ಭಟ್ಟಿ ಮಾಲೀಕನ ವಿರುದ್ಧ ಪೊಲೀಸ್​ ಕೇಸ್ ದಾಖಲಿಸಲಾಗಿದೆ.

Brick kiln owner booked for employing child and bonded labourers
ಕಾರ್ಮಿಕರಿಗೆ ನಿಂದಿಸಿದ ವಿಡಿಯೋ ವೈರಲ್​: ಇಟ್ಟಿಗೆ ಭಟ್ಟಿ ಮಾಲೀಕನ ವಿರುದ್ಧ ಕೇಸ್
author img

By PTI

Published : Feb 21, 2024, 4:56 PM IST

ಪಾಲ್ಘರ್ (ಮಹಾರಾಷ್ಟ್ರ): ಸಾಲಕ್ಕಾಗಿ ಕಾರ್ಮಿಕರು ಮತ್ತು ಮಕ್ಕಳನ್ನು ಜೀತದಾಳುಗಳಾಗಿ ಕೆಲಸಕ್ಕೆ ಇಟ್ಟುಕೊಂಡಿದ್ದ ಆರೋಪದ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕನ ವಿರುದ್ಧ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಪೊಲೀಸ್​ ಕೇಸ್​ ದಾಖಲಾದ ಘಟನೆ ನಡೆದಿದೆ. ಕಾರ್ಮಿಕರನ್ನು ಮಾಲೀಕ ನಿಂದಿಸುತ್ತಿದ್ದ ವಿಡಿಯೋ ವೈರಲ್​ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ದಹಾನು ತಾಲೂಕಿನ ಗದ್ನೆ ಗ್ರಾಮದ ರಾಮು ವೆಡ್ಗಾ ಎಂಬುವರ ಇಟ್ಟಿಗೆ ಭಟ್ಟಿಯಲ್ಲಿ ಈ ಕಾರ್ಮಿಕರು 2023ರಿಂದ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಮೂವರು ಪುರುಷರು, ಐವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ. ಈ ಕೆಲಸದ ಸಮಯದಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು. ಆರೋಪಿ ಮಾಲೀಕ ರಾಮು ವೆಡ್ಗಾ, ಮಹಿಳೆಯರ ತಲೆಕೂದಲು ಹಿಡಿದು ಎಳೆದುಕೊಂಡು ಹೋಗಿ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದ. ಅಲ್ಲದೇ, ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ಕೆಲಸ ಮಾಡಿಸಿಕೊಳ್ಳಲಾಗಿದೆ ಎಂಬುದಾಗಿ ಸಂತ್ರಸ್ತ ಕಾರ್ಮಿಕರು ಆರೋಪಿಸಿದ್ದಾರೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಕಾರ್ಮಿಕರನ್ನು ಮಾಲೀಕ ನಿಂದಿಸುತ್ತಿದ್ದ ವಿಡಿಯೋ ವೈರಲ್​ ಆಗಿತ್ತು. ಇದರ ಆಧಾರದ ಮೇಲೆ ಬುಡಕಟ್ಟು ಜನರಿಗಾಗಿ ಶ್ರಮಿಸುತ್ತಿರುವ ಎನ್‌ಜಿಒಯೊಂದು ಸಂತ್ರಸ್ತರನ್ನು ಪತ್ತೆಹಚ್ಚಿತ್ತು. ಬಳಿಕ ನೊಂದ ಕೂಲಿಕಾರರನ್ನು ತಲಸರಿ ಪೊಲೀಸ್​ ಠಾಣೆಗೆ ಎನ್‌ಜಿಒದವರು ಕರೆದುಕೊಂಡು ಬಂದಿದ್ದರು. ಇದೀಗ ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಇಟ್ಟಿಗೆ ಭಟ್ಟಿಯಲ್ಲಿ ಬಾಲಕ ಸೇರಿ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.