ETV Bharat / bharat

ಚಂಡೀಗಢ: ಹಿರಿಯ ಉಪ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ

author img

By ETV Bharat Karnataka Team

Published : Mar 4, 2024, 9:19 PM IST

ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಹಿರಿಯ ಉಪ ಮೇಯರ್, ಉಪ ಮೇಯರ್ ಹುದ್ದೆಯನ್ನು ಬಿಜೆಪಿ ಅಭ್ಯರ್ಥಿಗಳು ಗೆದ್ದುಕೊಂಡಿದ್ದಾರೆ.

ಚಂಡೀಗಢ
ಚಂಡೀಗಢ

ಚಂಡೀಗಢ : ಇಲ್ಲಿನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆ ಕ್ರಮವಾಗಿ ಕುಲ್ಜೀತ್ ಸಿಂಗ್ ಸಂಧು, ಉಪಮೇಯರ್ ಆಗಿ ರಾಜೇಂದ್ರ ಶರ್ಮಾ ಅವರು ಗೆಲುವು ಸಾಧಿಸಿದ್ದಾರೆ.

ಕುಲ್ಜೀತ್ ಸಿಂಗ್ ಸಂಧು ಅವರು 19 ಮತಗಳನ್ನು ಗಳಿಸಿದರೆ, ಎಎಪಿ - ಕಾಂಗ್ರೆಸ್‌ನ ಜಂಟಿ ಅಭ್ಯರ್ಥಿ ಗುರುಪ್ರೀತ್ ಸಿಂಗ್ ಗಾಬಿ 16 ಮತಗಳನ್ನು ಪಡೆದರು. ಒಂದು ಮತವನ್ನು ಅಸಿಂಧು ಎಂದು ಘೋಷಿಸಲಾಯಿತು. ಉಪಮೇಯರ್ ಸ್ಥಾನವನ್ನು ಗೆದ್ದ ಶರ್ಮಾ ಅವರು 19 ಮತಗಳನ್ನು ಪಡೆದರು ಮತ್ತು ಎಎಪಿ - ಕಾಂಗ್ರೆಸ್‌ನ ಜಂಟಿ ಅಭ್ಯರ್ಥಿ ನಿರ್ಮಲಾ ದೇವಿ 17 ಮತಗಳನ್ನು ಪಡೆದರು.

ಜನವರಿ 30ರಂದು ಚಂಡೀಗಢದ ಮೇಯರ್ ಚುನಾವಣೆ ನಡೆದಿದ್ದು, ಆಗ ಉಂಟಾದ ಗೊಂದಲ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಎಎಪಿ ಮತ್ತು ಕಾಂಗ್ರೆಸ್ ಚುನಾವಣೆ ನಡೆಸಿದ್ದು, ಸ್ಥಳೀಯ ಕೋರ್ಟ್​ ತೀರ್ಪು ನೀಡಿದ ರೀತಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ಈ ಹಿನ್ನೆಲೆ ಇತ್ತೀಚೆಗೆ ಉಪಮೇಯರ್ ಮತ್ತು ಹಿರಿಯ ಉಪಮೇಯರ್ ಚುನಾವಣೆ ನಡೆಸಲಾಯಿತು.

ಕಾಂಗ್ರೆಸ್ ಮತ್ತು ಎಎಪಿ ಮೈತ್ರಿಕೂಟ 20 ಕೌನ್ಸಿಲರ್‌ಗಳನ್ನು ಹೊಂದಿದ್ದರೆ, ಇತ್ತೀಚೆಗೆ ಮೂವರು ಬಿಜೆಪಿ ಸೇರಿದ್ದಾರೆ. ಪದನಿಮಿತ್ತ ಸದಸ್ಯರಾಗಿ ಮತದಾನದ ಹಕ್ಕು ಹೊಂದಿರುವ ಚಂಡೀಗಢ ಸಂಸದ ಕಿರಣ್ ಖೇರ್ ಮತ್ತು ಶಿರೋಮಣಿ ಅಕಾಲಿದಳದ ಕೌನ್ಸಿಲರ್ ಬಿಜೆಪಿ ಪರವಾಗಿ ಮತ ಚಲಾಯಿಸಿ ಬಿಜೆಪಿಗೆ 19 ಮತಗಳು ಬರುವಂತೆ ಮಾಡಿದರು.

ಇಂಡಿಯಾ ಒಕ್ಕೂಟದ ಪಾಲುದಾರರಾದ ಕಾಂಗ್ರೆಸ್ ಮತ್ತು ಎಎಪಿ ಜಂಟಿಯಾಗಿ ಬಿಜೆಪಿ ವಿರುದ್ಧ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಮೈತ್ರಿಯ ಆಧಾರದ ಮೇಲೆ ಕಾಂಗ್ರೆಸ್ ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆ ಸ್ಪರ್ಧಿಸಿದರೆ, ಎಎಪಿ ಮೇಯರ್ ಹುದ್ದೆಗೆ ಪೈಪೋಟಿ ನಡೆಸಿತ್ತು.

ಇದನ್ನೂ ಓದಿ : ಚಂಡೀಗಢ ಮೇಯರ್ ಚುನಾವಣೆ ಫಲಿತಾಂಶ ವಿವಾದ: ಆಪ್ ಅಭ್ಯರ್ಥಿಯೇ ವಿಜಯಿ ಎಂದು ಘೋಷಿಸಿದ ಸುಪ್ರೀಂ ಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.