ETV Bharat / bharat

ಲೋಕಸಭೆ ಚುನಾವಣೆ: ಬಿಜೆಪಿ ಯುಪಿಯ ಪ್ರತಿ ಕ್ಷೇತ್ರದಲ್ಲಿ 2.5 ಲಕ್ಷ ಮತಗಳನ್ನು ಕಳೆದುಕೊಳ್ಳಲಿದೆ- ಅಖಿಲೇಶ್‌ ಯಾದವ್​

author img

By PTI

Published : Feb 24, 2024, 9:13 PM IST

ಉತ್ತರ ಪ್ರದೇಶದಲ್ಲಿ ಕಾನ್ಸ್‌ಟೇಬಲ್‌ ನೇಮಕಾತಿ ಪರೀಕ್ಷೆ ರದ್ದು ಪ್ರಕರಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ರುಚಿ ತೋರಿಸಲಿದೆ ಎಂದು ಮಾಜಿ ಸಿಎಂ ಅಖಿಲೇಶ್​ ಯಾದವ್​ ಹೇಳಿದ್ದಾರೆ.

Akhilesh Yadav
ಅಖಿಲೇಶ್ ಯಾದವ್

ಲಕ್ನೋ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸಿರುವುದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗಲಿದ್ದು, ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಯುವ ಸಮೂಹ ಕೆಳಗಿಳಿಸಲಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದರು.

ಶನಿವಾರ ಲಕ್ನೋದ ಎಸ್‌ಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ, "ಪರೀಕ್ಷೆ ರದ್ದತಿ ಬ್ರೇಕಿಂಗ್ ನ್ಯೂಸ್ ಆಗಿರಬಹುದು. ಆದರೆ ಯುಪಿಯ ಪ್ರತಿ ಕ್ಷೇತ್ರದಲ್ಲಿ 2.5 ಲಕ್ಷಕ್ಕೂ ಹೆಚ್ಚು ಮತಗಳನ್ನು ಕಳೆದುಕೊಳ್ಳುವುದರಿಂದ ಬಿಜೆಪಿಗೆ ಇದು ಆಘಾತಕಾರಿ ಸುದ್ದಿ" ಎಂದು ಹೇಳಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯನ್ನು ಯುಪಿ ಸರ್ಕಾರ ಶನಿವಾರ ರದ್ದುಗೊಳಿಸಿದೆ, ಆರು ತಿಂಗಳೊಳಗೆ ಮರು ಪರೀಕ್ಷೆ ನಡೆಸುವಂತೆ ಆದೇಶ ಸಹ ಹೊರಡಿಸಿದೆ. ಆದ್ರೆ ಈ ಕುರಿತು ಸರ್ಕಾರದ ವಿರುದ್ಧ ಹರಿಹಾಯ್ದಿರುವ ಯಾದವ್, "ಪೊಲೀಸ್ ನೇಮಕಾತಿ ಪರೀಕ್ಷೆಗೆ 60 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರೆ, ಮತ್ತು ನಾವು ಅವರ ಪೋಷಕರನ್ನು ಎಣಿಕೆ ಮಾಡಿದರೆ, ಆ ಸಂಖ್ಯೆ ಸಂಖ್ಯೆ 1.8 ಕೋಟಿಗೆ ತಲುಪುತ್ತದೆ. ಇದರರ್ಥ ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಪ್ರತಿಯೊಂದರಲ್ಲಿ ಸುಮಾರು 2.5 ಲಕ್ಷ ಜನರು ಬಿಜೆಪಿ ವಿರುದ್ಧ ಮತ ಚಲಾಯಿಸಲಿದ್ದಾರೆ. ಪ್ರತಿ ಕ್ಷೇತ್ರದಲ್ಲಿ 2.5 ಲಕ್ಷ ಮತಗಳನ್ನು ಕಳೆದುಕೊಳ್ಳುವುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು ಮತ್ತು ವರ್ಷಗಟ್ಟಲೆ ಪೊಲೀಸ್ ನೇಮಕಾತಿಗಾಗಿ ಕಾಯುತ್ತಿದ್ದ ಯುವಕರು ಈಗ ಬಿಜೆಪಿಯನ್ನು ರಾಜ್ಯದಿಂದ ತೆಗೆದುಹಾಕುತ್ತಾರೆ'' ಎಂದು ಯಾದವ್ ಭವಿಷ್ಯ ನುಡಿದರು.

ರಾಜ್ಯಾದ್ಯಂತ ಫೆಬ್ರವರಿ 17 ಮತ್ತು 18 ರಂದು ನಡೆದ ಪರೀಕ್ಷೆಯಲ್ಲಿ 48 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮೂಲಕ ಪೇಪರ್ ಸೋರಿಕೆ ಆರೋಪದ ಬಗ್ಗೆ ತನಿಖೆ ನಡೆಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.

ಕನೌಜ್ ಜಿಲ್ಲೆಯ ಬ್ರಿಜೇಶ್ ಪಾಲ್ ಎಂಬ 28 ವರ್ಷದ ಯುವಕ ತನ್ನ ಎಲ್ಲಾ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸುಟ್ಟುಹಾಕಿ ಶುಕ್ರವಾರ ಕನೌಜ್‌ನ ಭೂದ್‌ಪುರವಾ ಪ್ರದೇಶದ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಗ್ಗೆಯೂ ಅಖಿಲೇಶ್​ ಯಾದವ್ ಪ್ರಸ್ತಾಪಿಸಿದರು.

ಎಲ್ಲಾ ಪದವಿಗಳನ್ನು ಸುಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬ್ರಿಜೇಶ್ ಪಾಲ್ ಅವರ ಸಾವಿನ ಸುದ್ದಿ ಕೇಳಿದಾಗ ದುಃಖ ಹೆಚ್ಚಾಗುತ್ತದೆ. ಉದ್ಯೋಗ ನೀಡಲಾಗದ ಈ ರೀತಿಯ ಸರ್ಕಾರದ ಬಗ್ಗೆ ಯೋಚಿಸಿ ಎಂದು ಯಾದವ್ ಹೇಳಿದರು. ಮೃತರ ಕುಟುಂಬಕ್ಕೆ ಸರ್ಕಾರ 1 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ನೇಮಕಾತಿ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗೆ ಹೆರಿಗೆ; ಹೆಣ್ಣು ಮಗುವಿನ ಜನ್ಮ ನೀಡಿದ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.