ETV Bharat / bharat

ಕಂಗನಾ ವಿರುದ್ಧ ಕಾಂಗ್ರೆಸ್​ ನಾಯಕಿ 'ಆಕ್ಷೇಪಾರ್ಹ ಪೋಸ್ಟ್​​ '​: ಚು.ಆಯೋಗಕ್ಕೆ ಮಹಿಳಾ ಆಯೋಗ ದೂರು - Kangana Ranaut

ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್​ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡ ಕಾಂಗ್ರೆಸ್​ ನಾಯಕಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇವರ ವಿರುದ್ಧ ಕ್ರಮಕ್ಕೆ ಮಹಿಳಾ ಆಯೋಗ ಆಗ್ರಹಿಸಿದೆ.

author img

By ETV Bharat Karnataka Team

Published : Mar 26, 2024, 1:13 PM IST

Updated : Mar 26, 2024, 2:40 PM IST

ಕಂಗನಾ ವಿರುದ್ಧ ಕಾಂಗ್ರೆಸ್​ ನಾಯಕಿ ಕೀಳು ಪೋಸ್ಟ್

ಹೈದರಾಬಾದ್: ಬಿಜೆಪಿ ಲೋಕಸಭಾ ಅಭ್ಯರ್ಥಿ, ನಟಿ ಕಂಗನಾ ರಣಾವತ್ ಕುರಿತು ಕಾಂಗ್ರೆಸ್​ ನಾಯಕಿ ಹಂಚಿಕೊಂಡಿರುವ 'ಅವಹೇಳನಕಾರಿ' ಪೋಸ್ಟ್​ ವಿವಾದ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಕೈ ಪಕ್ಷದ ನಾಯಕಿ ಸ್ಪಷ್ಟನೆ ನೀಡಿದ್ದು, ನನ್ನ ಅಕೌಂಟ್​ನಿಂದ ಬೇರೊಬ್ಬರು ಇದನ್ನು ಪೋಸ್ಟ್​​ ಮಾಡಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಆದೇಶಿಸಿದೆ.

ಕಾಂಗ್ರೆಸ್​ ನಾಯಕಿ ಸುಪ್ರಿಯಾ ಶ್ರೀನೇಟ್​ ಅವರ ಎಕ್ಸ್​ ಖಾತೆಯಲ್ಲಿ ಕಂಗನಾ ಅವರ ಚಿತ್ರವೊಂದನ್ನು ಹಂಚಿಕೊಂಡು, ಆಕ್ಷೇಪಾರ್ಹ ಅಡಿಬರಹ ನೀಡಲಾಗಿತ್ತು. ಇದು ವೈರಲ್​ ಆಗುತ್ತಿದ್ದಂತೆ ಕಾಂಗ್ರೆಸ್​ ನಾಯಕಿ ಪೋಸ್ಟ್​ ಅಳಿಸಿ ಹಾಕಿದ್ದಾರೆ.

ಕಂಗನಾ ತಿರುಗೇಟು: ಕಾಂಗ್ರೆಸ್ ನಾಯಕಿಯ ವಿವಾದಾತ್ಮಕ ಪೋಸ್ಟ್​ಗೆ ತಿರುಗೇಟು ನೀಡಿರುವ ನಟಿ ಕಂಗನಾ, "ನನ್ನ 20 ವರ್ಷಗಳ ಸಿನಿಮಾ ವೃತ್ತಿಜೀವನದಲ್ಲಿ ಎಲ್ಲ ಪಾತ್ರಗಳನ್ನು ಮಾಡಿದ್ದೇನೆ. ಮಹಾರಾಣಿ ಪಾತ್ರದಿಂದ ಹಿಡಿದು ಲೈಂಗಿಕ ಕಾರ್ಯಕರ್ತೆಯಾಗಿಯೂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ಅವರವರ ವೃತ್ತಿಯಲ್ಲಿ ಗೌರವ ಹೊಂದಿದ್ದೇವೆ. ಮಹಿಳೆಯರ ಬಗ್ಗೆ ಸಮಾಜದಲ್ಲಿನ ಅಭಿಪ್ರಾಯವನ್ನು ಬದಲಿಸಬೇಕು ಎಂಬುದು ನನ್ನ ಉದ್ದೇಶ. ಎಲ್ಲ ಮಹಿಳೆಯರೂ ಗೌರವಕ್ಕೆ ಅರ್ಹರು" ಎಂದು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಕಾಂಗ್ರೆಸ್​ ನಾಯಕಿ ಹೇಳೋದೇನು?: ವಿವಾದ ಉಂಟಾದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್​ ನಾಯಕಿ ಸುಪ್ರಿಯಾ ಶ್ರೀನೇಟ್​, ನನ್ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬಳಸುವ ವ್ಯಕ್ತಿಯೊಬ್ಬರು ಈ ರೀತಿಯ ಕೀಳು ಅಭಿರುಚಿಯ ಪೋಸ್ಟ್​ ಮಾಡಿದ್ದಾರೆ. ತಮ್ಮನ್ನು ಕೆಟ್ಟದಾಗಿ ಬಿಂಬಿಸಲು ನನ್ನ ಖಾತೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಮಹಿಳೆಯರ ವಿರುದ್ಧ ನಾನು ಎಂದಿಗೂ ಅಗೌರವದ ಹೇಳಿಕೆ ನೀಡಿಲ್ಲ. ಇದು ನನ್ನನ್ನು ತಿಳಿದವರಿಗೆ ಗೊತ್ತಿದೆ. ನನ್ನ ಖಾತೆಗಳನ್ನು ನಿರ್ವಹಿಸುತ್ತಿರುವವರು ತಪ್ಪಾಗಿ ಪೋಸ್ಟ್​ ಮಾಡಿ ಅಪಖ್ಯಾತಿ ತಂದಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯವಾಗಿದೆ ಎಂದು ಹೇಳಿದ್ದಾರೆ. ಬಳಿಕ ತಮ್ಮ ಖಾತೆಯಲ್ಲಿನ ವಿವಾದಿತ ಪೋಸ್ಟ್​ ಡಿಲೀಟ್​ ಮಾಡಿದ್ದಾರೆ.

ಮಹಿಳಾ ಆಯೋಗ ದೂರು: ಸುಪ್ರಿಯಾ ಶ್ರಿನೇಟ್‌ ಅವರ ಕೀಳು ಅಭಿರುಚಿಯ ಪೋಸ್ಟ್​ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಮಹಿಳಾ ಆಯೋಗ ಚುನಾವಣಾ ಆಯೋಗಕ್ಕೆ ದೂರಿನ ಪತ್ರ ಬರೆದಿದೆ. ಕಿಸಾನ್ ಕಾಂಗ್ರೆಸ್‌ನ ರಾಜ್ಯ ಜಂಟಿ ಸಂಯೋಜಕ ಅಹಿರ್ ಮತ್ತು ಸುಪ್ರಿಯಾ ಅವರು ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇವರ ನಡವಳಿಕೆಗೆ ಮಹಿಳಾ ಆಯೋಗವು ದಿಗ್ಭ್ರಮೆಗೊಂಡಿದೆ. ಇದು ಅಸಹನೀಯವಾಗಿದೆ ಮತ್ತು ಮಹಿಳೆಯರ ಘನತೆಗೆ ವಿರುದ್ಧವಾಗಿದೆ. ಇವರ ವಿರುದ್ಧ ತಕ್ಷಣದ ಮತ್ತು ಕಠಿಣ ಕ್ರಮ ಕೈಗೊಳ್ಳಿ ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಆಗ್ರಹಿಸಿದ್ದಾರೆ

ಇತ್ತ ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು, ಕಂಗನಾ ರಣಾವತ್ ವಿರುದ್ಧದ ಆಕ್ಷೇಪಾರ್ಹ ಹೇಳಿಕೆಗಾಗಿ ಸುಪ್ರಿಯಾ ಶ್ರೀನೇಟ್​ ಅವರನ್ನು ಪಕ್ಷದಿಂದ ವಜಾಗೊಳಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಕೋರಿದ್ದಾರೆ. ಪಕ್ಷದೊಳಗೆ ಇಂತಹ ನಡವಳಿಕೆಯನ್ನು ಸಹಿಸಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂಡಿಯಿಂದ ಕಂಗನಾ ರಣಾವತ್​ ಸ್ಪರ್ಧೆ: ಕ್ಷೇತ್ರದ ಜನರೊಂದಿಗೆ ಹೋಳಿ ಆಚರಿಸಿದ ನಟಿ - kangana ranaut

Last Updated : Mar 26, 2024, 2:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.