ETV Bharat / bharat

ಬಿಹಾರ ವಿಶ್ವಾಸಮತ ಪರೀಕ್ಷೆ ಚರ್ಚೆ ಆರಂಭ: ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತ ಮೂವರು ಆರ್​ಜೆಡಿ ಶಾಸಕರು - ಎನ್​ಡಿಎ ಮೈತ್ರಿ

ಬಿಹಾರ ವಿಶ್ವಾಸಮತ ಪರೀಕ್ಷೆ ಅಧಿವೇಶನ ಆರಂಭವಾಗಿದ್ದು, ಮೂವರು ಆರ್​ಜೆಡಿ ಶಾಸಕರು ಆಡಳಿತಾರೂಢ ಸಾಲಿನಲ್ಲಿ ಕುಳಿತಿರುವುದು ನಿತೀಶ್​ಕುಮಾರ್​ ಸರ್ಕಾರಕ್ಕೆ ಹೆಚ್ಚಿನ ಬಲ ಬಂದಿದೆ.

ಬಿಹಾರ ವಿಶ್ವಾಸಮತ ಪರೀಕ್ಷೆ
ಬಿಹಾರ ವಿಶ್ವಾಸಮತ ಪರೀಕ್ಷೆ
author img

By ETV Bharat Karnataka Team

Published : Feb 12, 2024, 1:32 PM IST

Updated : Feb 12, 2024, 1:43 PM IST

ಪಾಟ್ನಾ (ಬಿಹಾರ): ಆರ್​ಜೆಡಿ - ಕಾಂಗ್ರೆಸ್​ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡು ಬಿಜೆಪಿ ಜೊತೆಗೆ ಕೈ ಜೋಡಿಸಿ ಹೊಸ ಸರ್ಕಾರ ರಚಿಸಿಕೊಂಡಿರುವ ಸಿಎಂ ನಿತೀಶ್​ಕುಮಾರ್​ ಇಂದು ಬಹುಮತ ಸಾಬೀತು ಪಡಿಸಬೇಕಿದ್ದು, ವಿಧಾನಸಭೆ ಅಧಿವೇಶನ ಆರಂಭವಾಗಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಮೂವರು ಆರ್​ಜೆಡಿ ಶಾಸಕರು ಆಡಳಿತಾರೂಢ ಪಕ್ಷಗಳ ಸಾಲಿನಲ್ಲಿ ಕುಳಿತಿದ್ದಾರೆ. ಇದು ವಿಪಕ್ಷಗಳಿಗೆ ಭಾರಿ ಮುಜುಗರ ತಂದಿದೆ.

ವಿಶ್ವಾಸಮತ ಪರೀಕ್ಷೆ ಮೇಲಿನ ಚರ್ಚೆ ಆರಂಭವಾಗಿದೆ. ಇದೇ ವೇಳೆ, ಮೂವರು ಆರ್​ಜೆಡಿ ಶಾಸಕರು ಆಡಳಿತ ಪಕ್ಷಗಳ ಸಾಲಿನಲ್ಲಿ ಕುಳಿತಿರುವ ಬಗ್ಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ. ಜೊತೆಗೆ ಅವರ ಮತವನ್ನು ಅಮಾನ್ಯ ಮಾಡಬೇಕು ಎಂದು ಆಗ್ರಹಿಸುತ್ತಿವೆ. ಬಿಜೆಪಿ ಮತ್ತು ಜೆಡಿಯು ಪ್ರಜಾಪ್ರಭುತ್ವವನ್ನು ಹೈಜಾಕ್​ ಮಾಡುತ್ತಿವೆ. ಸಂವಿಧಾನದ ನೀತಿಗಳನ್ನೇ ಗಾಳಿಗೆ ತೂರಿವೆ ಎಂದು ವಿಪಕ್ಷಗಳ ನಾಯಕರು ಆರೋಪಿಸುತ್ತಿದ್ದಾರೆ.

ಆರ್‌ಜೆಡಿ ಶಾಸಕರಾದ ಚೇತನ್ ಆನಂದ್, ನೀಲಂ ದೇವಿ ಮತ್ತು ಪ್ರಹ್ಲಾದ್ ಯಾದವ್ ಅವರು ಆಡಳಿತ ಪಕ್ಷಗಳ ಸಾಲಿನಲ್ಲಿ ಕುಳಿತವರು. ಅಧಿವೇಶನ ಆರಂಭದಲ್ಲೇ ಸ್ಪೀಕರ್ ಮತ್ತು ಆರ್‌ಜೆಡಿ ನಾಯಕ ಅವಧ್ ಬಿಹಾರಿ ಚೌಧರಿ ಅವರನ್ನು ಪದಚ್ಯುತಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಮತ ಅಸಿಂಧುಗೆ ಆಗ್ರಹ: ಮಾಜಿ ಡಿಸಿಎಂ ತೇಜಸ್ವಿ ಯಾದವ್​ ಮಾತನಾಡಿ, ನಿತೀಶ್​ಕುಮಾರ್​ ಸರ್ಕಾರ ವಿಪಕ್ಷಗಳ ಶಾಸಕರನ್ನ ಬೆದರಿಸುತ್ತಿದೆ. ಕುದುವೆ ವ್ಯಾಪಾರ ನಡೆಸಿದೆ. ಹೀಗಾಗಿ ನಮ್ಮ ಮೂವರು ಶಾಸಕರು ಆಡಳಿತ ಪಕ್ಷದ ಕಡೆಗೆ ಕುಳಿತಿದ್ದಾರೆ. ಮತದಾನ ನಡೆಯುವ ಮೊದಲೇ ಅವರು ಆ ಪಾಳಯ ಸೇರಿದ್ದಾರೆ. ಅವರನ್ನು ತಕ್ಷಣವೇ ವಿಪಕ್ಷಗಳ ಕಡೆಗೆ ಕಳುಹಿಸಬೇಕು. ಅವರ ಮತವನ್ನು ಅಸಿಂಧುಗೊಳಿಸಬೇಕು ಎಂದು ಆಗ್ರಹಿಸಿದರು.

ಸ್ಪೀಕರ್​ ವಿರುದ್ಧ ಅವಿಶ್ವಾಸ ಪಾಸು: ಬಿಹಾರ ವಿಧಾನಸಭೆ ಸ್ಪೀಕರ್ ಮತ್ತು ಆರ್‌ಜೆಡಿ ನಾಯಕ ಅವಧ್ ಬಿಹಾರಿ ಚೌಧರಿ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. 125 ಸದಸ್ಯರು ನಿರ್ಣಯದ ಪರವಾಗಿ ಮತ ಹಾಕಿದರೆ, ವಿರುದ್ಧವಾಗಿ 112 ಸದಸ್ಯರು ಮತ ಹಾಕಿದರು.

ಇದನ್ನೂ ಓದಿ : ಇಂದು ವಿಶ್ವಾಸಮತ ಪರೀಕ್ಷೆ: ಬಿಹಾರದತ್ತ ಕಾಂಗ್ರೆಸ್​ ಶಾಸಕರು, ಸಿಎಂ ನಿತೀಶ್​ಕುಮಾರ್​ ಸಭೆ

Last Updated : Feb 12, 2024, 1:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.