ಶಾದ್ ನಗರ, ತೆಲಂಗಾಣ: ಎರಡು ನಾಯಿಗಳು ನಾಗರ ಹಾವನ್ನು ಕೊಂದು ಹಾಕಿರುವ ಘಟನೆ ಹೈದರಾಬಾದ್ ಸಮೀಪದ ಶಾದ್ನಗರದಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಕೂಡಾ ಆಗಿದೆ. ಸಾಮಾನ್ಯವಾಗಿ ಹಾವುಗಳನ್ನು ಕಂಡರೆ ನಾಯಿಗಳು ಬೆಚ್ಚಿ ಬೀಳುತ್ತವೆ. ವಿಷಪೂರಿತ ಹಾವು ಕಂಡರೆ ಎಂತಹ ಧೈರ್ಯಶಾಲಿಗಳು ಒಂದು ಕ್ಷಣ ನಡುಗಿ ಬಿಡುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ.
ಹಾಗೆಯೇ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ಹಾವು ಎದುರಾದರೆ ಒಂದು ಹೆಜ್ಜೆ ಹಿಂದೆ ಸರಿಯುತ್ತವೆ. ಆದರೆ, ಇತ್ತೀಚೆಗೆ ರಂಗಾರೆಡ್ಡಿ ಜಿಲ್ಲೆಯ ಶಾದ್ ನಗರದಲ್ಲಿ ನಡೆದ ಘಟನೆಯೊಂದರ ದೃಶ್ಯಗಳು ಅಚ್ಚರಿ ಮೂಡಿಸುವಂತಿದೆ. ಎರಡು ನಾಯಿಗಳು ಬೃಹತ್ ನಾಗರ ಹಾವನ್ನು ಕಚ್ಚಿ ಕಚ್ಚಿ ಸಾಯಿಸಿವೆ.
ಮೊಗಿಲಗಿಡ ಗ್ರಾಮದ ಬಳಿಯ ಜಮೀನಿನಲ್ಲಿ ಮಾಲೀಕರು ಡಾಬರ್ ಮನ್ ನಾಯಿಗಳನ್ನು ಸಾಕುತ್ತಿದ್ದಾರೆ. ಶುಕ್ರವಾರ ಇವರ ಜಮೀನಿನಲ್ಲಿ ಬೃಹತ್ ಹಾವೊಂದು ಸಾಕುನಾಯಿಗಳ ಕಣ್ಣಿಗೆ ಬಿದ್ದಿದೆ. ಎರಡು ನಾಯಿಗಳು ರೋಮಾಂಚನಗೊಂಡು ಹಾವನ್ನು ಒಟ್ಟಿಗೆ ಓಡಿಸಿವೆ. ಹಾವನ್ನು ಕಚ್ಚಿ ಕಚ್ಚಿ ಸಾಯಿಸಿವೆ. ಸತ್ತ ನಂತರವೂ ಹಾವನ್ನು ಬಾಯಿಯಲ್ಲಿ ಕಚ್ಚಿಕೊಂಡು ಅಲ್ಲಿ ಇಲ್ಲಿ ಎಳೆದಾಡಿವೆ. ಈ ದೃಶ್ಯ ವೈರಲ್ ಆಗಿದೆ.
ಇದನ್ನು ಓದಿ: ಕಾಶ್ಮೀರದಲ್ಲಿ ಉಗ್ರರಿಂದ ಗುಂಡಿನ ದಾಳಿ: ಇಬ್ಬರು ವಲಸೆ ಕಾರ್ಮಿಕರಿಗೆ ಗುಂಡೇಟು