ETV Bharat / bharat

ಚೀನಾ ಕಂಪನಿಗಳೊಂದಿಗೆ ವ್ಯವಹರಿಸುವ ಮುನ್ನ ಎಚ್ಚರ: ಬೀಜಿಂಗ್​ನ ಭಾರತೀಯ ರಾಯಭಾರ ಕಚೇರಿ ಸಲಹೆ - Indian Embassy Advisory

ಚೀನಾ ಕಂಪನಿಗಳೊಂದಿಗೆ ವ್ಯವಹರಿಸುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಬೀಜಿಂಗ್​​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಸ್ಎಂಇ) ಸಲಹೆ ನೀಡಿದೆ.

India's small & medium firms told to be careful while doing biz with entities in China
ಚೀನಾ ಕಂಪನಿಗಳೊಂದಿಗೆ ವ್ಯವಹರಿಸುವ ಮುನ್ನ ಎಚ್ಚರ: ಬೀಜಿಂಗ್​ನ ಭಾರತೀಯ ರಾಯಭಾರ ಕಚೇರಿ ಸಲಹೆ (IANS)
author img

By ETV Bharat Karnataka Team

Published : Jul 30, 2024, 6:33 PM IST

ನವದೆಹಲಿ : ಚೀನಾದ ಕಂಪನಿಗಳೊಂದಿಗೆ ಯಾವುದೇ ವ್ಯವಹಾರ ನಡೆಸುವ ಮುನ್ನ ಕೆಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಬೀಜಿಂಗ್​​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಸ್ಎಂಇ) ಸಲಹೆ ನೀಡಿದೆ. ಚೀನಾದಲ್ಲಿನ ಚೀನಾ ಕಂಪನಿಗಳೊಂದಿಗೆ ವ್ಯವಹಾರ ನಡೆಸುವ ಭಾರತೀಯ ಕಂಪನಿಗಳು ಸಮಸ್ಯೆಗಳನ್ನು ಎದುರಿಸುತ್ತಿರುವ ಹಲವಾರು ಪ್ರಕರಣಗಳು ನಿರಂತರವಾಗಿ ರಾಯಭಾರ ಕಚೇರಿಯ ಗಮನಕ್ಕೆ ಬರುತ್ತಿರುವುದರಿಂದ ಈ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಸಲಹೆಯಲ್ಲಿ ತಿಳಿಸಲಾಗಿದೆ.

ಯಾವುದೇ ಚೀನೀ ಕಂಪನಿಯೊಂದಿಗೆ ವ್ಯವಹಾರ ಮಾಡುವ ಮೊದಲು, ಆ ಕಂಪನಿಗಳ ವಿಶ್ವಾಸಾರ್ಹತೆ ತಿಳಿದುಕೊಳ್ಳಲು ಭಾರತೀಯ ಕಂಪನಿಗಳು ಶಾಂಘೈ (hoc.shanghai@mea.gov.in), ಗುವಾಂಗ್ ಝೌ (com.guangzhou@mea.gov.in) ಮತ್ತು ಹಾಂಕಾಂಗ್ (commerce.hongkong@mea.gov.in) ನಲ್ಲಿರುವ ಭಾರತೀಯ ರಾಯಭಾರ ಕಚೇರಿ (com.beijing@mea.gov.in, ccom.beijing@mea.gov.in) ಅಥವಾ ಭಾರತೀಯ ದೂತಾವಾಸಗಳಿಗೆ ಪತ್ರ ಬರೆಯಬೇಕು ಎಂದು ಸಲಹೆಯಲ್ಲಿ ಶಿಫಾರಸು ಮಾಡಲಾಗಿದೆ. ಆಯಾ ದೂತಾವಾಸ ಕಚೇರಿಗಳು 4 ರಿಂದ 5 ಕೆಲಸದ ದಿನಗಳಲ್ಲಿ ಪತ್ರಕ್ಕೆ ಪ್ರತಿಕ್ರಿಯಿಸುತ್ತವೆ.

ದೊಡ್ಡ ಮೊತ್ತದ ವಹಿವಾಟುಗಳ ಸಂದರ್ಭದಲ್ಲಿ ಭಾರತೀಯ ಕಂಪನಿಗಳು ಬಿಸಿನೆಸ್ ಕನ್ಸಲ್ಟನ್ಸಿ ಕಂಪನಿಗಳ ಸಲಹೆ ಪಡೆದು ಮುಂದುವರಿಯಬೇಕು ಎಂದು ಶಿಫಾರಸು ಮಾಡಲಾಗಿದೆ. ಬಿಸಿನೆಸ್ ಕನ್ಸಲ್ಟನ್ಸಿ ಸಂಸ್ಥೆಗಳು ಚೀನಾ ಕಂಪನಿಗಳ ವ್ಯವಹಾರ ಪಾರದರ್ಶಕತೆ, ಹಣಕಾಸು ಸ್ಥಿತಿ, ಖ್ಯಾತಿ, ವಿಶ್ವಾಸಾರ್ಹತೆ ಮತ್ತು ರುಜುವಾತುಗಳ ಬಗ್ಗೆ ವರದಿ ನೀಡುತ್ತವೆ ಎಂದು ಸಲಹೆಯಲ್ಲಿ ತಿಳಿಸಲಾಗಿದೆ.

ಯಾವುದೇ ಚೀನೀ ಘಟಕದೊಂದಿಗೆ ವ್ಯವಹಾರ ಮಾಡುವ ಮೊದಲು, ಭಾರತೀಯ ಕಂಪನಿಗಳು ನಿವಾಸಿ ಗುರುತಿನ ಚೀಟಿ (ಚೀನೀ ಗುರುತಿನ ಸಂಖ್ಯೆ) ಮತ್ತು ಮಾಲೀಕ ಮತ್ತು ಚೀನಾದ ಘಟಕದ ಇತರ ಜವಾಬ್ದಾರಿಯುತ ಪ್ರತಿನಿಧಿಗಳ ಪಾಸ್ ಪೋರ್ಟ್ ಈ ಎರಡರ ಪ್ರತಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂದು ಸಲಹೆಯಲ್ಲಿ ಶಿಫಾರಸು ಮಾಡಲಾಗಿದೆ.

ಶಾಂಡೊಂಗ್, ಹೆಬೀ, ಗುವಾಂಗ್ ಡಾಂಗ್, ಜಿಯಾಂಗ್ ಸು ಮತ್ತು ಝೆಜಿಯಾಂಗ್ ಪ್ರಾಂತ್ಯಗಳಲ್ಲಿ ನೋಂದಾಯಿಸಲಾದ ಕಂಪನಿಗಳ ವಿಷಯದಲ್ಲಿ ಹೆಚ್ಚಿನ ವ್ಯವಹಾರಿಕ ವ್ಯಾಜ್ಯಗಳು ಉದ್ಭವಿಸುತ್ತಿವೆ ಎಂದು ರಾಯಭಾರ ಕಚೇರಿ ಹೇಳಿದೆ. ಆದ್ದರಿಂದ, ಈ ಪ್ರಾಂತ್ಯಗಳ ಕಂಪನಿಗಳೊಂದಿಗೆ ವ್ಯಾಪಾರ ಮಾಡುವ ಮೊದಲು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಭಾರತೀಯ ಕಂಪನಿಗಳಿಗೆ ಸೂಚಿಸಲಾಗಿದೆ.

ಅನುಬಂಧ 1 ಭಾರತೀಯ ಕಂಪನಿಗಳು ಎದುರಿಸುತ್ತಿರುವ ವಿಶಿಷ್ಟ ಸಮಸ್ಯೆಗಳ ಪಟ್ಟಿಯನ್ನು ಒಳಗೊಂಡಿದೆ. ಚೀನಾದ ಘಟಕಗಳೊಂದಿಗೆ ವ್ಯವಹರಿಸುವಾಗ ಭಾರತೀಯ ಕಂಪನಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಚೆಕ್ ಲಿಸ್ಟ್ ಅನ್ನು ಸಹ ಇದು ಒಳಗೊಂಡಿದೆ. ಅನುಬಂಧ 2 ರಲ್ಲಿ ಚೀನಾದ ಘಟಕಗಳು ಅಳವಡಿಸಿಕೊಂಡ ವಿಶಿಷ್ಟ ಕಾರ್ಯವಿಧಾನದ ವಿವರಣಾತ್ಮಕ ಮಾಹಿತಿಗಳಿದ್ದರೆ, ಅನುಬಂಧ 3 ರಲ್ಲಿ 2009 ರಿಂದ ಏಪ್ರಿಲ್ 2024 ರವರೆಗೆ ಭಾರತೀಯ ಕಂಪನಿಗಳೊಂದಿಗೆ ವ್ಯಾಪಾರ ವಿವಾದಗಳಲ್ಲಿ ಭಾಗಿಯಾಗಿರುವ ಚೀನಾದ ಸಂಸ್ಥೆಗಳ ಪಟ್ಟಿಯನ್ನು ನೀಡಲಾಗಿದೆ.

ಇದನ್ನೂ ಓದಿ : 8 ತಿಂಗಳ ಹಿಂದೆ ಕೈಬಿಟ್ಟಿದ್ದ ಚೀನಾದ ಬೆಲ್ಟ್​ ಅಂಡ್​ ರೋಡ್​ ಯೋಜನೆಗೆ ಮರು ಸೇರಿದ ಇಟಲಿ - Italy PM Meloni china tour

ETV Bharat Logo

Copyright © 2024 Ushodaya Enterprises Pvt. Ltd., All Rights Reserved.