ETV Bharat / bharat

ರಾಮ ಲಲ್ಲಾ ವಿಗ್ರಹ ಪ್ರತಿಷ್ಠಾಪನೆ ನಂತರ ಮೊದಲ ಚೈತ್ರ ನವರಾತ್ರಿ: ರಾಮನವಮಿಗೆ ಅಯೋಧ್ಯೆ ಸಜ್ಜು - Ram Lalla Idol - RAM LALLA IDOL

ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ನವಮಿಗೆ ಭರ್ಜರಿ ಸಿದ್ಧತೆಗಳು ನಡೆದಿವೆ. ಇಂದಿನಿಂದ ಚೈತ್ರ ನವರಾತ್ರಿ ಸಮಾರಂಭ ಆರಂಭವಾಗಿದ್ದು, ಒಂಬತ್ತನೇ ದಿನದಂದು 'ಚೈತ್ರ ನವರಾತ್ರಿ' ಆಚರಿಸಲಾಗುತ್ತದೆ.

Ram Navami  Ayodhya  Chaitra Navratri  Uttar Pradesh
ರಾಮ ಲಲ್ಲಾನ ವಿಗ್ರಹ ಪ್ರತಿಷ್ಠಾಪನೆ ನಂತರ ಮೊದಲ ಚೈತ್ರ ನವರಾತ್ರಿ: ರಾಮನವಮಿಗೆ ಅಯೋಧ್ಯೆ ಸಜ್ಜು
author img

By ETV Bharat Karnataka Team

Published : Apr 9, 2024, 10:57 AM IST

ಅಯೋಧ್ಯೆ (ಉತ್ತರ ಪ್ರದೇಶ): ಜನವರಿ 22ರಂದು ಉದ್ಘಾಟನೆಗೊಂಡ ಅಯೋಧ್ಯೆಯ ರಾಮ ಮಂದಿರದಲ್ಲಿ ಮೊದಲ ಚೈತ್ರ ನವರಾತ್ರಿ ಸಂಭ್ರಮ ಶುರುವಾಗಿದೆ. ಮಂಗಳವಾರದಿಂದ ಚೈತ್ರ ನವರಾತ್ರಿ ಆರಂಭವಾಗಿದ್ದು, ಭಗವಾನ್ ರಾಮನ ಜನ್ಮದಿನವಾದ ರಾಮನವಮಿಯವರೆಗೆ (ಏಪ್ರಿಲ್ 17) ಬಾಲ ರಾಮನಿಗೆ ದೇವರ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗುವುದು. ಚೈತ್ರ ನವರಾತ್ರಿ ಪ್ರಯುಕ್ತ ಪ್ರತಿದಿನವೂ ಹೊಸ ಉಡುಗೆ ತೊಡಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

RAM NAVAMI  AYODHYA  CHAITRA NAVRATRI  UTTAR PRADESH
ಚೈತ್ರ ನವರಾತ್ರಿ ಹಿನ್ನೆಲೆ ದೇವರಿಗೆ ವಿಶೇಷ ಅಲಂಕಾರ

ರಾಮನ ಜನ್ಮದಿನ ಆಚರಿಸುವ ಹಬ್ಬವಾದ ರಾಮ ನವಮಿ ನಿಮಿತ್ತ ಒಂಬತ್ತನೇ ದಿನದಂದು 'ಚೈತ್ರ ನವರಾತ್ರಿ' ಆಚರಿಸಲಾಗುತ್ತದೆ. ಆದ್ದರಿಂದ ರಾಮ ಲಲ್ಲಾನಿಗೆ ಹೊಸ ಉಡುಪುಗಳನ್ನು ವಿಶೇಷವಾಗಿ ಕೈಯಿಂದ ನೇಯ್ದ ಮತ್ತು ಕೈಯಿಂದ ನೂಲುವ ಖಾದಿ ಹತ್ತಿಯಿಂದ ತಯಾರಿಸಲಾಗುತ್ತದೆ. ಒಂಬತ್ತು ದಿನಗಳ ಉತ್ಸವದಲ್ಲಿ ಹೆಚ್ಚಿನ ಭಕ್ತರು ಸೇರುವ ಸಾಧ್ಯತೆಯಿದೆ. ದೇವಾಲಯಕ್ಕೆ ಸೆಲ್ ಫೋನ್ ತರದಂತೆ ಟ್ರಸ್ಟ್ ಭಕ್ತರಿಗೆ ಮನವಿ ಮಾಡಿದೆ. ಇದೇ ವೇಳೆ, ಬಾಲ ರಾಮನಿಗೆ ವಿಶೇಷ ಅಲಂಕಾರ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಹಂಚಿಕೊಳ್ಳಲಾಗಿದೆ.

''ಭಕ್ತರು ರಾಮಲಲ್ಲಾನ ತ್ವರಿತ ದರ್ಶನವನ್ನು ಬಯಸಿದರೆ, ಅವರು ರಾಮಮಂದಿರಕ್ಕೆ ಬರುವ ಮೊದಲು ತಮ್ಮ ಸೆಲ್ ಫೋನ್ ಮತ್ತು ಪಾದರಕ್ಷೆಗಳನ್ನು ನಿಗದಿಪಡಿಸಿದ ಸ್ಥಳದಲ್ಲಿ ಇಟ್ಟುಬರಬೇಕು. ಇದು ಸಮಯವನ್ನು ಉಳಿಸುತ್ತದೆ. ಸರದಿಯಲ್ಲಿ ತ್ವರಿತವಾಗಿ ಮುಂದೆ ಸಾಗಲು ಖಚಿತಪಡಿಸುತ್ತದೆ'' ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ.

ರಾಮ ಜನ್ಮೋತ್ಸವಕ್ಕೆ ಸಿದ್ಧತೆ: ಮುಂಬರುವ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಅಯೋಧ್ಯೆಯಲ್ಲಿ ಪೊಲೀಸರೊಂದಿಗೆ ಅರೆಸೈನಿಕ ಪಡೆಗಳ ಹಲವು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿಯನ್ನು ಪಕ್ಕದ ಜಿಲ್ಲೆಗಳಿಂದಲೂ ಅಯೋಧ್ಯೆಯಲ್ಲಿ ನಿಯೋಜಿಸಲಾಗಿದೆ.

ರಾಮ ನವಮಿ ಮತ್ತು ಏಪ್ರಿಲ್ 9ರಿಂದ ಏಪ್ರಿಲ್ 17ರವರೆಗೆ ಒಂಬತ್ತು ದಿನಗಳ ಕಾಲ ನಡೆಯುವ ರಾಮ ಜನ್ಮೋತ್ಸವದ ಸಿದ್ಧತೆಗಳ ಬಗ್ಗೆ ಆಡಳಿತವು ಸೂಕ್ಷ್ಮವಾಗಿ ಗಮನ ಹರಿಸಿದೆ. ಅಧಿಕಾರಿಗಳು ರಾಮ ಜನ್ಮಭೂಮಿಗೆ ಭೇಟಿ ನೀಡಿ, ದೇವಾಲಯದ ಸಂಕೀರ್ಣದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲು ಸೂಚಿಸಿದರು.

ರಾಮನವಮಿ ಸಮಯದಲ್ಲಿ ಭಕ್ತರ ಸುರಕ್ಷತೆ ಮತ್ತು ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಯುದ್ಧೋಪಾದಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ನಿರೀಕ್ಷಿತ ಭಕ್ತರ ಭೇಟಿಯಿಂದ ಸಂಖ್ಯೆಯನ್ನು ಅಳೆಯುವುದು ಕಠಿಣವಾಗಿದೆ. ವಿವಿಧ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಯಾವುದೇ ಕಾಲ್ತುಳಿತದಂತಹ ಪರಿಸ್ಥಿತಿಯನ್ನು ತಪ್ಪಿಸಲು ಭಕ್ತರಿಗೆ ಬಹು ಪ್ರವೇಶ ಮತ್ತು ನಿರ್ಗಮನದ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಬಿಸಿಲಿನ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ತೆರೆದ ಮಹಡಿಗಳಲ್ಲಿ ನೀರು ಮತ್ತು ಚಾಪೆಗಳನ್ನು ಒಗಿಸಲಾಗುತ್ತಿದೆ. ಭಕ್ತರನ್ನು ಶಾಖದ ಹೊಡೆತದಿಂದ ರಕ್ಷಿಸಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ.

ಯಾತ್ರಾರ್ಥಿಗಳು ತಂಗುವ ಧರ್ಮಶಾಲೆಗಳು, ದೇವಸ್ಥಾನಗಳು, ಟೆಂಟ್ ಸಿಟಿಗಳು ಮತ್ತು ಹೋಟೆಲ್‌ಗಳಲ್ಲಿ ಹಾಲು, ಸಕ್ಕರೆ, ಚಹಾ, ಆಹಾರಧಾನ್ಯಗಳು ಮತ್ತು ತರಕಾರಿಗಳಂತಹ ಅಗತ್ಯ ವಸ್ತುಗಳ ಲಭ್ಯತೆ ಮತ್ತು ನಿಯಮಿತ ಪೂರೈಕೆಯನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: 17 ಮೊಮ್ಮಕ್ಕಳಿಗೆ ಒಂದೇ ಸಲಕ್ಕೆ ವಿವಾಹ ಮಾಡಿಸಿದ ತಾತ; ಬಂಧುಗಳಿಗೂ ಒಂದೇ ಆಮಂತ್ರಣ ಪತ್ರಿಕೆ! - GRANDCHILDRENS MARRIAGE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.