ETV Bharat / bharat

ಪಂಜಾಬ್: ಯುವತಿಯ ಕತ್ತು ಹಿಸುಕಿ ಕೊಂದು ಅತ್ಯಾಚಾರ ಎಸಗಿದ ದುರುಳ - Auto Driver arrested

ಪಂಜಾಬ್​ನಲ್ಲಿ ಕಳೆದ ವರ್ಷದ ಡಿಸೆಂಬರ್ ಅಂತ್ಯದಲ್ಲಿ ನಡೆದಿದ್ದ ಯುವತಿ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ಪಂಜಾಬ್‌ ಪೊಲೀಸರು ಭೇದಿಸಿದ್ದಾರೆ. ತನಿಖೆಯಲ್ಲಿ ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ.

ಅತ್ಯಾಚಾರ ಅರೋಪಿ ಬಂಧನ
ಅತ್ಯಾಚಾರ ಅರೋಪಿ ಬಂಧನ
author img

By ETV Bharat Karnataka Team

Published : Jan 21, 2024, 11:32 AM IST

ಜಲಂಧರ್(ಪಂಜಾಬ್​): ಕಳೆದ ವರ್ಷದ ಡಿಸೆಂಬರ್​ನಲ್ಲಿ ಇಲ್ಲಿನ ಜಲಂಧರ್ ಗ್ರಾಮದ ಲಂಬ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಲನ ಸೃಷ್ಟಿಸಿದ್ದ ಯುವತಿ ಕೊಲೆ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಮಾಡೆಲ್ ಹೌಸ್ ನಿವಾಸಿ, ಆಟೋ ಚಾಲಕ ರಾಜಕುಮಾರ್​ ಎಂದು ಗುರುತಿಸಲಾಗಿದೆ. ಆರೋಪಿ ವಿಚಾರಣೆಯಲ್ಲಿ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ. ಇದನ್ನು ಕೇಳಿ ಪೊಲೀಸರೇ ಆಘಾತ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಡಿಎಸ್‌ಪಿ ಸುರಿಂದರ್‌ಪಾಲ್ ಸಿಂಗ್ ಧೋಗಾಡಿ, "ಡಿ.26ರಂದು ಬೆಳಿಗ್ಗೆ ಲಂಬ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ತಕ್ಷಣ ಘಟನಾ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಹೋಗಿ ಪರಿಶೀಲನೆ ನಡೆಸಿದಾಗ ಮೃತಳನ್ನು ಗುರುದಾಸ್ಪುರ್ ಜಿಲ್ಲೆಯ ನಿವಾಸಿ, ವೃತ್ತಿಯಲ್ಲಿ ನರ್ಸ್ ಎಂಬ ಮಾಹಿತಿ ದೊರೆಯಿತು. ಪ್ರಾಥಮಿಕ ವರದಿಯಲ್ಲಿ ಯುವತಿಯನ್ನು ಕೊಲೆ ಮಾಡಿರುವುದು ತಿಳಿದುಬಂದಿತ್ತು".

"ಆರೋಪಿಯ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಘಟನೆ ನಡೆದ ಸುತ್ತಮುತ್ತಲ ಪ್ರದೇಶದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿತ್ತು. ಇದು ಆರೋಪಿಯನ್ನು ಬಂಧಿಸಲು ಸಹಾಯವಾಯಿತು. ನಂತರ ವಿಚಾರಣೆ ನಡೆಸಿದಾಗ, "ಯುವತಿ ಚರ್ಚ್‌ಗೆ ಹೋಗಲು ಆಟೋದಲ್ಲಿ ಬಂದಿದ್ದಳು. ಈ ವೇಳೆ ಮೊದಲು ಕತ್ತು ಹಿಸುಕಿ ಹತ್ಯೆಗೈದು ನಂತರ ಶವದ ಮೇಲೆ ಅತ್ಯಾಚಾರ ಎಸಗಿದೆ" ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ" ಎಂದು ಹೇಳಿದರು.

ಬಾಲಕಿಯರ ಮೇಲೆ ಅತ್ಯಾಚಾರ, ಕೊಲೆ(ಪ್ರತ್ಯೇಕ ಪ್ರಕರಣ): ಜನವರಿ 9ರಂದು ಬಿಹಾರದ ಫುಲ್ವಾರಿ ಶರೀಫ್ ಎಂಬಲ್ಲಿ ಇಬ್ಬರು ಬಾಲಕಿಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದಿತ್ತು. ಈ ಪೈಕಿ ಒಬ್ಬಳು ಹಿಂದೂನಿ ಗ್ರಾಮದ ಹೊಲದಲ್ಲಿ ಶವವಾಗಿ ಪತ್ತೆಯಾಗಿದ್ದರೆ, ಮತ್ತೊಬ್ಬಾಕೆ ಹತ್ತಿರದ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ಕೃತ್ಯದಿಂದ ಅಲ್ಲಿನ ಜನತೆ ಬೆಚ್ಚಿಬಿದ್ದಿದ್ದರು. ಪ್ರಕರಣವನ್ನು ಪಾಟ್ನಾ ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿದ್ದರು. ನಂತರ ಆರೋಪಿಯಿಂದ ಸಂತ್ರಸ್ತರ ಕುಟುಂಬದ ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆತನ ಗುರುತನ್ನು ಬಹಿರಂಗಪಡಿಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ: ಪತ್ನಿಯ ಕೊಂದು ದೇಹವನ್ನು ತುಂಡರಿಸಿ ಕಾಲುವೆಗೆ ಎಸೆದ ಪತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.