ETV Bharat / bharat

ರೈಲು ಹಳಿ ಮೇಲೆ ಗ್ಯಾಸ್ ಸಿಲಿಂಡರ್​ ಇಟ್ಟ ದುಷ್ಕರ್ಮಿಗಳು! ತುರ್ತು ಬ್ರೇಕ್ ಹಾಕಿ ಅನಾಹುತ ತಪ್ಪಿಸಿದ ಲೋಕೋ ಪೈಲಟ್ - LPG Cylinder On Railway Track

author img

By PTI

Published : Sep 9, 2024, 11:16 AM IST

ಹಳಿ ಮೇಲಿರಿಸಿದ್ದ ಎಲ್​ಪಿಜಿ ಸಿಲಿಂಡರ್​ ಅನ್ನು ಲೋಕೋ ಪೈಲಟ್​​ ಗಮನಿಸಿದ್ದು, ತಕ್ಷಣ ತುರ್ತು ಬ್ರೇಕ್​ ಹಾಕಿದ್ದಾರೆ. ಈ ಮೂಲಕ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ.

attempt-made-to-derail-kalindi-express-by-placing-lpg-cylinder-on-tracks-in-kanpur
ರೈಲು ಹಳಿ ಪಕ್ಕದಲ್ಲಿ ಬಿದ್ದಿರುವ ಗ್ಯಾಸ್‌ ಸಿಲಿಂಡರ್​ ಪರಿಶೀಲಿಸುತ್ತಿರುವ ಅಧಿಕಾರಿಗಳು (ETV Bharat)

ಕಾನ್ಪುರ: ಪ್ರಯಾಗ್​ರಾಜ್​ ಮಾರ್ಗವಾಗಿ ತೆರಳುತ್ತಿದ್ದ ಕಾಳಿಂದಿ ಎಕ್ಸ್​ಪ್ರೆಸ್​​​ ರೈಲು ತೆರಳುವ ಹಳಿಗಳ ಮೇಲೆ ದುಷ್ಕರ್ಮಿಗಳು ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ಇಟ್ಟಿದ್ದು, ಲೋಕೋ ಪೈಲಟ್‌ ಇದನ್ನು ಗಮನಿಸಿ ತಕ್ಷಣ ತುರ್ತು ಬ್ರೇಕ್​ ಹಾಕಿದ್ದಾರೆ. ಈ ವೇಳೆ ಉಂಟಾದ ಘರ್ಷಣೆಯ ಹಿನ್ನೆಲೆಯಲ್ಲಿ ರೈಲು ಬಡಿದು ಸಿಲಿಂಡರ್​ ದೂರಕ್ಕೆ ಹಾರಿದೆ. ಅದೃಷ್ಟವಶಾತ್​​ ಸಂಭಾವ್ಯ ಅನಾಹುತ ತಪ್ಪಿದೆ.

ಶಿವರಾಜ್ಪುರ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ರೈಲು ಅಪಘಾತ ನಡೆಸುವ ದುರುದ್ದೇಶದಿಂದ ಹಳಿಯ ಮೇಲೆ ಸಿಲಿಂಡರ್​ ಇಡಲಾಗಿತ್ತು ಎಂದು ತಿಳಿದುಬಂದಿದೆ. ಭಾನುವಾರ ಬೆಳಗ್ಗೆ ಸುಮಾರು 8.20ಕ್ಕೆ ಘಟನೆ ನಡೆದಿದೆ.

ಹಿರಿಯ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ರಕ್ಷಣಾ ದಳ (ಆರ್‌ಪಿಎಫ್​) ವಿಧಿ ವಿಜ್ಞಾನ ತಂಡವನ್ನೂ ಸ್ಥಳಕ್ಕೆ ಕರೆಸಿತ್ತು.

ಕಾನೂನು ಮತ್ತು ಸುವ್ಯವಸ್ಥೆ ಎಸಿಪಿ ಹರೀಶ್​ ಚಂದ್ರ ಪ್ರತಿಕ್ರಿಯಿಸಿ, "ಹಳಿಗಳ ಮೇಲೆ ಇಡಲಾಗಿದ್ದ ಎಲ್‌ಪಿಜಿ ಸಿಲಿಂಡರ್​ ಅನ್ನು ಲೋಕೋ ಪೈಲಟ್​​ ಗಮನಿಸಿದ್ದು ತುರ್ತು ಬ್ರೇಕ್​ ಹಾಕಿದ್ದಾರೆ. ಘರ್ಷಣೆಯಿಂದಾಗಿ ಸಿಲಿಂಡರ್​ಗೆ ಬದಿಗೆ ಸರಿದಿದೆ. ಲೋಕೋ ಪೈಲಟ್​ ಈ ಬಗ್ಗೆ ಗಾರ್ಡ್​ ಮತ್ತು ಗೇಟ್​ಮ್ಯಾನ್​ಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ರೈಲು ಶಿವರಾಜ್ಫುರ ಪ್ರದೇಶದಲ್ಲಿ 20 ನಿಮಿಷ ರೈಲು ನಿಂತಿತ್ತು" ಎಂದರು.

"ಸಿಲಿಂಡರ್​ ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ ಪೆಟ್ರೋಲ್​ ಮತ್ತು ಬೆಂಕಿಪೊಟ್ಟಣವನ್ನೂ ಜಪ್ತಿ ಮಾಡಲಾಗಿದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಆ್ಯಂಟಿ ಡ್ರೋನ್​, ಭದ್ರತಾ ಸಿಬ್ಬಂದಿ ಹೆಚ್ಚಿಸಿದ ರಾಜ್ಯ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.