ETV Bharat / bharat

ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಅಮಿತ್ ಶಾಗೆ ಕೇಜ್ರಿವಾಲ್ ಪತ್ರ - ARVIND KEJRIWAL WRITES TO AMIT SHAH

ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಈ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡುವಂತೆ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ARVIND KEJRIWAL WRITES TO AMIT SHAH
ಅರವಿಂದ್ ಕೇಜ್ರಿವಾಲ್ (ETV Bharat)
author img

By ETV Bharat Karnataka Team

Published : Dec 14, 2024, 3:52 PM IST

ನವದೆಹಲಿ: ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್, ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ ಕುರಿತು ತಮ್ಮೊಂದಿಗೆ ಚರ್ಚಿಸಲು ಅವಕಾಶ ಮಾಡಿಕೊಡುವಂತೆ ಕೋರಿದ್ದಾರೆ.

"ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಆದರೂ, ದೆಹಲಿ ಈಗ ದೇಶ ಮತ್ತು ವಿದೇಶಗಳಲ್ಲಿ ಅಪರಾಧಗಳ ರಾಜಧಾನಿ ಎಂದು ಬಿಂಬಿಸಿಕೊಳ್ಳುತ್ತಿದೆ. ಭಾರತದ 19 ಮೆಟ್ರೋ ನಗರಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ಕೊಲೆ ಪ್ರಕರಣಗಳಲ್ಲಿಯೂ ಮೊದಲ ಸ್ಥಾನದಲ್ಲಿದೆ. ಸುಲಿಗೆ, ದರೋಡೆ ನಡೆಸುವ ಗ್ಯಾಂಗ್​​ಗಳು ಸಕ್ರಿಯವಾಗಿವೆ. ವಿಮಾನ ನಿಲ್ದಾಣಗಳು ಮತ್ತು ಶಾಲೆಗಳಿಗೆ ಬೆದರಿಕೆ ಕರೆಗಳು ಬರುತ್ತಿವೆ. ಇಂತಹ ಕೃತ್ಯಗಳಿಂದ ದೆಹಲಿಯ ಜನರು ಅಭದ್ರತೆ ಅನುಭವಿಸುತ್ತಿದ್ದಾರೆ. ದೆಹಲಿಯ ಐಷಾರಾಮಿ ಪ್ರದೇಶವಾಗಲಿ ಅಥವಾ ಇನ್ನಾವುದೇ ಪ್ರದೇಶವಾಗಲಿ, ಇಂದು ತಾಯಂದಿರು ತಮ್ಮ ಮಕ್ಕಳ ಬಗ್ಗೆ ಚಿಂತಿತರಾಗಿದ್ದಾರೆ. ಉದ್ಯಮಿಗಳು ತಮ್ಮ ವ್ಯವಹಾರದ ಬಗ್ಗೆ ಅಸುರಕ್ಷಿತ ಭಾವನೆ ಅನುಭವಿಸುತ್ತಿದ್ದಾರೆ. ದರೋಡೆಕೋರರು ಸಿನಿಮಾಗಳ ಮಾದರಿಯಲ್ಲಿ ಶೂಟೌಟ್ ಮಾಡುತ್ತಿದ್ದಾರೆ. ಹಗಲಿನಲ್ಲೇ ಗುಂಡಿನ ದಾಳಿ, ಕೊಲೆ ಮತ್ತು ಅಪಹರಣಗಳು ನಡೆಯುತ್ತಿವೆ. ಈ ಕೃತ್ಯಗಳಿಗೆ ಮುಕ್ತಿ ಸಿಗಬೇಕು. ಅಪರಾಧಗಳ ರಾಜಧಾನಿ ಎಂಬ ನಾಮಾಂಕಿತದಿಂದ ದೆಹಲಿ ಹೊರಬರಬೇಕಿದೆ" ಎಂದು ಅಪರಾಧ ಅಂಕಿಅಂಶಗಳನ್ನು ಉಲ್ಲೇಖಿಸಿ, ಕೇಜ್ರಿವಾಲ್ ಅವರು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕೇಂದ್ರ ಸರ್ಕಾರದ ಮೇಲೆ ಅರವಿಂದ ಕೇಜ್ರಿವಾಲ್ ಇತ್ತೀಚೆಗಷ್ಟೇ ವಾಗ್ದಾಳಿ ನಡೆಸಿದ್ದರು.

"ಸರ್ಕಾರ ರಚಿಸಿದ ನಂತರ ಸಾರ್ವಜನಿಕರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗಿದೆ. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡುವ ಸಂಪೂರ್ಣ ಜವಾಬ್ದಾರಿಯನ್ನು ದೆಹಲಿಯ ಜನರು ಅವರಿಗೆ (ಕೇಂದ್ರ) ನೀಡಿದ್ದರು. ದೆಹಲಿ ಅರ್ಧ ರಾಜ್ಯ ಆದ್ದರಿಂದ ಅರ್ಧ ಜವಾಬ್ದಾರಿ ದೆಹಲಿ ಸರ್ಕಾರದ್ದು, ಇನ್ನರ್ಧ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ದಿಲ್ಲಿ ಪೊಲೀಸರ ಮೇಲೆ ನಮ್ಮ ಸರ್ಕಾರ ನಿಯಂತ್ರಣ ಹೊಂದಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಆದರೆ, ದೆಹಲಿಯ ಜನತೆಗೆ ಭದ್ರತೆ ಒದಗಿಸುವ ಹೊಣೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಗಲ ಮೇಲೆ ಪ್ರತಿಯೊಬ್ಬರಿಗೂ ಭದ್ರತೆ ಒದಗಿಸುವ ಹೊಣೆಗಾರಿಕೆ ಇದೆ. ಆದರೆ, ಅವರು ಚುನಾವಣೆಗಳಲ್ಲಿ ನಿರತರಾಗಿದ್ದರಿಂದ ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ" ಎಂದು ಕೇಜ್ರಿವಾಲ್ ಅವರು ಅಮಿತ್ ಶಾ ಸೇರಿ ಕೇಂದ್ರದ ವಿರುದ್ಧ ಕಿಡಿಕಾರಿದ್ದರು.

ಇದನ್ನೂ ಓದಿ: ಮತ್ತೆ ದೆಹಲಿಯ ಹಲವು ಶಾಲೆಗಳಿಗೆ ಬೆದರಿಕೆ ಸಂದೇಶ: ಪಶ್ಚಿಮ್​ ವಿಹಾರ್​ ಸ್ಕೂಲ್​ಗೆ ವಿದ್ಯಾರ್ಥಿಯಿಂದಲೇ ಬಂತು ಬೆದರಿಕೆ ಮೆಸೇಜ್​ - BOMB THREAT EMAIL TO SCHOOL

ETV Bharat Logo

Copyright © 2025 Ushodaya Enterprises Pvt. Ltd., All Rights Reserved.