ETV Bharat / bharat

ವೈಎಸ್​ಆರ್ ಅವಧಿಯಲ್ಲಿ ಶಾರದಾ ಪೀಠಕ್ಕೆ ಮಂಜೂರಾದ ಭೂಮಿ ಹಿಂಪಡೆದ ಆಂಧ್ರ ಸರ್ಕಾರ

ಶ್ರೀ ಶಾರದಾ ಪೀಠಕ್ಕೆ ನೀಡಲಾದ ಭೂಮಿಯನ್ನು ವಾಪಸ್ ಪಡೆಯಲು ಆಂಧ್ರಪ್ರದೇಶದ ಟಿಡಿಪಿ ನೇತೃತ್ವದ ಎನ್​ಡಿಎ ಸರ್ಕಾರ ನಿರ್ಧರಿಸಿದೆ.

ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ವೈಎಸ್​ ಜಗನ್ ರೆಡ್ಡಿ, ಶ್ರೀ ಶಾರದಾ ಪೀಠದ ಪೀಠಾಧಿಪತಿ ಸ್ವರೂಪಾನಂದೇಂದ್ರ ಸರಸ್ವತಿ ಸ್ವಾಮಿಜಿ
ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ವೈಎಸ್​ ಜಗನ್ ರೆಡ್ಡಿ, ಶ್ರೀ ಶಾರದಾ ಪೀಠದ ಪೀಠಾಧಿಪತಿ ಸ್ವರೂಪಾನಂದೇಂದ್ರ ಸರಸ್ವತಿ ಸ್ವಾಮಿಜಿ (IANS)
author img

By ETV Bharat Karnataka Team

Published : Oct 23, 2024, 8:01 PM IST

ಅಮರಾವತಿ: ವಿಶಾಖಪಟ್ಟಣಂ ಬಳಿಯ ಶ್ರೀ ಶಾರದಾ ಪೀಠಕ್ಕೆ ವೈಎಸ್ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಲಾಗಿದ್ದ 15 ಎಕರೆ ಭೂಮಿಯನ್ನು ಹಿಂಪಡೆಯಲು ಆಂಧ್ರಪ್ರದೇಶದ ಟಿಡಿಪಿ ನೇತೃತ್ವದ ಎನ್​ಡಿಎ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬುಧವಾರ ಪ್ರಕಟಿಸಲಾಗಿದೆ.

ಶ್ರೀ ಶಾರದಾ ಪೀಠದ ಪೀಠಾಧಿಪತಿ ಸ್ವರೂಪಾನಂದೇಂದ್ರ ಸರಸ್ವತಿ ಅವರನ್ನು ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಆಧ್ಯಾತ್ಮಿಕ ಗುರು ಎಂದು ಪರಿಗಣಿಸಲಾಗಿದೆ. ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ಸರ್ಕಾರವು ವೈದಿಕ ಶಾಲೆಯನ್ನು ಸ್ಥಾಪಿಸಲು ಶ್ರೀಗಳ ಕೋರಿಕೆಯ ಮೇರೆಗೆ 2021 ರಲ್ಲಿ ವಿಶಾಖಪಟ್ಟಣಂನ ಉಪನಗರವಾದ ಭೀಮುನಿಪಟ್ಟಣಂ ಬಳಿ ಪೀಠಕ್ಕೆ 15 ಎಕರೆ ಭೂಮಿ ಮಂಜೂರು ಮಾಡಿತ್ತು.

ದೇಶದ ಹಲವಾರು ಮುಖ್ಯಮಂತ್ರಿಗಳ ಗುರು ಎಂದು ಹೇಳಲಾಗುವ ಶ್ರೀಗಳು, ಭೂಮಿಯನ್ನು ಇತರ ಉದ್ದೇಶಗಳಿಗಾಗಿ ಬಳಸಲು ಅನುಕೂಲವಾಗುವಂತೆ ಭೂ ಹಂಚಿಕೆಗೆ ಸಂಬಂಧಿಸಿದ ಸರ್ಕಾರಿ ಆದೇಶಕ್ಕೆ (ಜಿಒ) ತಿದ್ದುಪಡಿ ಮಾಡುವಂತೆ ಕೋರಿದ್ದರು. ಹಿಂದಿನ ಸರ್ಕಾರವು ಈ ವರ್ಷದ ಆರಂಭದಲ್ಲಿ ಜಿಒಗೆ ತಿದ್ದುಪಡಿ ಮಾಡಿತ್ತು.

ಜಗನ್ ಮೋಹನ್ ರೆಡ್ಡಿ ಅವರ ಗೆಲುವಿಗಾಗಿ ಯಜ್ಞ ನಡೆಸಿದ್ದರಿಂದ ಪೀಠಕ್ಕೆ ಹಲವಾರು ಕೋಟಿ ಮೌಲ್ಯದ ಭೂಮಿಯನ್ನು ಕಡಿಮೆ ಬೆಲೆಗೆ ಮಂಜೂರು ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಈ ವರ್ಷದ ಜೂನ್​ನಲ್ಲಿ ಟಿಡಿಪಿ ನೇತೃತ್ವದ ಎನ್​ಡಿಎ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ಭೂ ಮಂಜೂರಾತಿಯನ್ನು ರದ್ದುಗೊಳಿಸಬೇಕೆಂಬ ಒತ್ತಾಯ ಕೇಳಿ ಬಂದಿದ್ದವು. ಎನ್​ಡಿಎ ಸರ್ಕಾರದ ಪಾಲುದಾರರಾಗಿರುವ ಜನಸೇನಾ, ವಿಶಾಖ ಜಿಲ್ಲಾ ದಲಿತ ಏಕತಾ ವೇದಿಕೆ, ತೆಲುಗು ಶಕ್ತಿ ಮತ್ತು ಇತರ ಸಂಘಟನೆಗಳು ಭೂಮಿ ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದವು.

ಶಾರದಾ ಪೀಠಕ್ಕೆ ಭೂಮಿ ಹಂಚಿಕೆಯನ್ನು ರದ್ದುಗೊಳಿಸಬೇಕೆಂದು ಆಂಧ್ರಪ್ರದೇಶದ ಸಾಧು ಪರಿಷತ್ ಅಧ್ಯಕ್ಷ ಶ್ರೀನಿವಾಸಾನಂದ ಸರಸ್ವತಿ ಅವರು ಎನ್​ಡಿಎ ಸರ್ಕಾರಕ್ಕೆ ಒತ್ತಾಯಿಸಿದ್ದರು. ವೈಎಸ್ಆರ್ ಕಾಂಗ್ರೆಸ್ ಸರ್ಕಾರವು ವಿಶಾಖ ಶಾರದಾ ಪೀಠಕ್ಕೆ ಮೂಲಸೌಕರ್ಯಗಳನ್ನು ನಿರ್ಮಿಸುವ ನೆಪದಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಭೂಮಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.

ಅಮೂಲ್ಯವಾದ ಭೂಮಿಯನ್ನು ಪೀಠಕ್ಕೆ ಎಕರೆಗೆ ಕೇವಲ 1 ಲಕ್ಷ ರೂ.ಗೆ ಮಂಜೂರು ಮಾಡಲಾಗಿದೆ ಎಂದು ಚಂದ್ರಬಾಬು ನಾಯ್ಡು ಜುಲೈನಲ್ಲಿ ಹೇಳಿದ್ದರು. ವೈಎಸ್ಆರ್ ಕಾಂಗ್ರೆಸ್ ಪಕ್ಷದ ಐದು ವರ್ಷಗಳ ಆಡಳಿತದಲ್ಲಿ 35,000 ಕೋಟಿ ರೂ.ಗಳ ಮೌಲ್ಯದ 1.75 ಲಕ್ಷ ಎಕರೆ ಭೂಮಿಯನ್ನು ಅಕ್ರಮವಾಗಿ ಕಬಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಭೂ ಕಬಳಿಕೆಯನ್ನು ತಡೆಗಟ್ಟಲು ಗುಜರಾತ್ ಶಾಸನದ ಮಾದರಿಯಲ್ಲಿ ಆಂಧ್ರಪ್ರದೇಶ ಭೂ ಕಬಳಿಕೆ ಕಾಯ್ದೆಯನ್ನು ಸರ್ಕಾರ ಶೀಘ್ರದಲ್ಲೇ ತರಲಿದೆ ಎಂದು ನಾಯ್ಡು ಹೇಳಿದ್ದರು. ಪ್ರಸ್ತಾವಿತ ಕಾನೂನು ಜಾರಿಗೆ ಬಂದ ನಂತರ, ಯಾವುದೇ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡವರು ಭೂಮಿ ತಮಗೆ ಸೇರಿದ್ದು ಎಂದು ಸಾಬೀತುಪಡಿಸಬೇಕಾಗುತ್ತದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ : ಕೈಗಾರಿಕಾ ಮದ್ಯದ ಉತ್ಪಾದನೆ, ನಿಯಂತ್ರಣ ರಾಜ್ಯಗಳ ಅಧಿಕಾರ: ಸುಪ್ರೀಂ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.