ಅಯೋಧ್ಯೆ: ರಾಮನಗರಿ ಅಯೋಧ್ಯೆಯಲ್ಲಿ ಬಾಲ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಾಳೆ ನಡೆಯಲಿದೆ. ಶತಮಾನಗಳ ಕಾಯುವಿಕೆಯ ನಂತರ ಶ್ರೀರಾಮ ಭವ್ಯ ದೇಗುಲದಲ್ಲಿ ಆಸೀನನಾಗಲಿದ್ದಾನೆ. ಇದೇ ವೇಳೆ, ಈ ಪುಣ್ಯನಗರದ ಸುತ್ತಮುತ್ತ ಮನೆ ಕಟ್ಟುವ ಕನಸು ಕಾಣುವ ಜನರ ದೊಡ್ಡ ದಂಡೇ ಇದೆ. ಪ್ರಪಂಚದ ಆಧ್ಯಾತ್ಮಿಕ ರಾಜಧಾನಿಯಾಗುತ್ತಿರುವ ಅಯೋಧ್ಯೆಯೊಂದಿಗೆ ನೇರ ಸಂಪರ್ಕ ಹೊಂದಲು ಪ್ರತಿಯೊಬ್ಬರೂ ಬಯಸುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಖ್ಯಾತ ಚಲನಚಿತ್ರ ನಟ, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೂ ಸೇರಿಕೊಂಡಿದ್ದಾರೆ.
ಅಮಿತಾಬ್ ಬಚ್ಚನ್ ಅಯೋಧ್ಯೆ ದೇವಾಲಯದಿಂದ ಕೇವಲ 15 ನಿಮಿಷಗಳ ದೂರದಲ್ಲಿ ನಿರ್ಮಿಸಲಾದ ಟೌನ್‌ಶಿಪ್‌ನಲ್ಲಿ ತಮ್ಮ ಮನೆ ನಿರ್ಮಿಸಲು ಭೂಮಿ ಖರೀದಿಸಿದ್ದಾರೆ. ಈ ಪ್ರದೇಶವು ಸರಯೂ ನದಿ ದಡಕ್ಕೆ ಹೊಂದಿಕೊಂಡಿದೆ. ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ನವ ಅಯೋಧ್ಯೆ ಯೋಜನೆಯೂ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸರಯೂ ನದಿಯ ದಡದ ಪಕ್ಕದಲ್ಲಿರುವ ಖಾಲಿ ಪ್ರದೇಶವು ಹೋಟೆಲ್ ಮತ್ತು ಅಪಾರ್ಟ್‌ಮೆಂಟ್ ಬಿಲ್ಡರ್‌ಗಳಿಗೆ ನೆಚ್ಚಿನ ಪ್ರದೇಶವೂ ಹೌದು. ಇದರ ಜೊತೆಗೆ, ಅನೇಕ ಯೋಜನೆಗಳು ಇಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಳ್ಳಲಿವೆ.
₹14.5 ಕೋಟಿ ಮೌಲ್ಯದ ಭೂಮಿ ಖರೀದಿಸಿದ ಬಚ್ಚನ್: ಅಮಿತಾಬ್ ಬಚ್ಚನ್ 10 ಸಾವಿರ ಚದರ ಅಡಿ ಭೂಮಿ ಖರೀದಿಸಿದ್ದು, ಇದರ ಬೆಲೆ 14.5 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಇವರು ಭೂಮಿ ಖರೀದಿಸಿರುವ ಸರಯೂ ಎನ್‌ಕ್ಲೇವ್ ರಾಮಮಂದಿರದಿಂದ ಸುಮಾರು 15 ನಿಮಿಷಗಳ ದೂರದಲ್ಲಿದೆ. ಅಯೋಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 30 ನಿಮಿಷಗಳ ದೂರದಲ್ಲಿದೆ.
ಇದನ್ನೂ ಓದಿ: ಜ.22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಮುಹೂರ್ತ: ಈ ದಿನದ ವಿಶೇಷತೆ ಬಗ್ಗೆ ಪಂಡಿತರು ಹೇಳುವುದಿಷ್ಟು