ETV Bharat / bharat

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆ: ದಾಸೋಹಕ್ಕೆ ಮುಂದಾದ ಅಜ್ಮೀರ್​ ಶರೀಫ್​ ದರ್ಗಾ

ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ದಾಸೋಹದ ಕುರಿತು ದರ್ಗಾದ ಅಧಿಕಾರಿಗಳು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪ್ರಧಾನಿ ಮೋದಿ ಅವರ 74ನೇ ಜನ್ಮದಿನದ ಹಿನ್ನೆಲೆ ಅಜ್ಮೀರ್​ ಶರೀಫ್ ದರ್ಗಾದಲ್ಲಿ ಸಸ್ಯಾಹಾರ ಅನ್ನ ದಾಸೋಹ (ಲಾಂಗರ್​) ನಡೆಸಲಾಗುವುದು.

ajmer-sharif-dargah-to-mark-pm-modis-birthday-with-4000-kg-of-vegetarian-langar
ಅಜ್ಮೀರ್​ ಶರೀಫ್​ ದರ್ಗಾ (ANI)
author img

By ANI

Published : Sep 12, 2024, 4:36 PM IST

ನವದೆಹಲಿ: ಸೆಪ್ಟೆಂಬರ್​ 17ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಹಿನ್ನೆಲೆ ಅಜ್ಮೀರ್​​ ಶರೀಫ್​ ದರ್ಗಾದಲ್ಲಿ 4,000 ಕೆಜಿ ಸಸ್ಯಾಹಾರದ ದಾಸೋಹ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಈ ಕುರಿತು ದರ್ಗಾದ ಅಧಿಕಾರಿಗಳು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪ್ರಧಾನಿ ಮೋದಿ ಅವರ 74ನೇ ಜನ್ಮದಿನದ ಹಿನ್ನಲೆ ಅಜ್ಮೀರ್​ ಶರೀಫ್ ದರ್ಗಾದಲ್ಲಿ ಸಸ್ಯಾಹಾರ ಅನ್ನ ದಾಸೋಹ (ಲಾಂಗರ್​) ನಡೆಸಲಾಗುವುದು. ದೇಶದ ಧಾರ್ಮಿಕ ಸ್ಥಳಗಳಲ್ಲಿ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಕ್ಕಿ ಮತ್ತು ಶುದ್ಧ ತುಪ್ಪ, ಒಣ ಹಣ್ಣುಗಳನ್ನು ಸೇರಿಸಿದ ಆಹಾರವನ್ನು ತಯಾರಿಸಿ ವಿತರಿಸಲಾಗುವುದು. ಗುರುಗಳ ಮತ್ತು ನಮ್ಮ ಸುತ್ತಲಿನ ಬಡ ಜನರಿಗೆ ಸಾಮೂಹಿಕ ಭೋಜನ ಸೇವೆಗೆ ವ್ಯವಸ್ಥೆ ನಡೆಸಲಾಗಿದೆ ಎಂದರು.

ಸುದೀರ್ಘ ಆಯುಷ್ಯಕ್ಕೆ ಹಾರೈಕೆ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದಂದು ಅವರ ಸುದೀರ್ಘ ಜೀವನಕ್ಕೆ ನಾವು ಹಾರೈಸುತ್ತೇವೆ. ಈ ಸಂಪೂರ್ಣ ಸಾಮೂಹಿಕ ಆಹಾರ ದಾಸೋಹ ವ್ಯವಸ್ಥೆಯನ್ನು ಭಾರತೀಯ ಅಲ್ಪ ಸಂಖ್ಯಾತ ಫೌಂಡೇಷನ್​ ಮತ್ತು ಅಜ್ಮೀರ್​ ಶರೀಫ್​ ಚಿಸ್ತಿ ಫೌಂಡೇಷನ್​ ವತಿಯಿಂದ ಸಂಘಟಿಸಲಾಗಿದೆ ಎಂದು ಸೈಯದ್​ ಅಫ್ಸಾನ್​ ಚಿಸ್ತಿ ತಿಳಿಸಿದರು.

ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ, ಭಕ್ತಿ ಮತ್ತು ಕಾಳಜಿಯಿಂದ ನಡೆಸಲಾಗುವುದು. ಈ ಮೂಲಕ ಸಾವಿರಾರು ಭಕ್ತರು ಮತ್ತು ಸಾಧಕರಿಗೆ ಸೇವೆ ಸಲ್ಲಿಸಲಾಗುವುದು. ಹಜ್ರಾತ್​ ಖ್ವಾಜಾ ಮುಯುನುದ್ದೀನ್​ ಚಿಸ್ತಿ ದರ್ಗಾದೊಳಗೆ ರಾತ್ರಿ 10.30ಕ್ಕೆ ದೊಡ್ಡದಾದ ಶಾಹಿ ದೆಗ್ (ಅಡುಗೆ ಪಾತ್ರೆ)​​ ಅನ್ನು ಬೆಳಗುವ ಮೂಲಕ ಕಾರ್ಯಕ್ರಮ ಆರಂಭಿಸಲಾಗುವುದು. ಶಾಂತಿ, ಏಕತೆ, ಸಮೃದ್ಧಿ ಮತ್ತು ಪ್ರಧಾನಿ ಅವರ ಯೋಗಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಾರ್ಥನೆಯಲ್ಲಿ ಈ ಸೇವೆಯ ಯಶಸ್ಸಿಗೆ ಮತ್ತು ಎಲ್ಲ ಜನರ ಯೋಗಕ್ಷೇಮಕ್ಕೆ ಆಶೀರ್ವಾದವನ್ನು ಒಳಗೊಂಡಿಲಿದೆ. ದರ್ಗಾದಲ್ಲಿರುವ ದೆಗ್​​ ಜಗತ್ತಿನ ಅತಿ ದೊಡ್ಡ ಅಡುಗೆ ಪಾತ್ರೆಯಾಗಿದ್ದು, ಇದು 4 ಸಾವಿರ ಆಹಾರ ತಯಾರಿಸುವ ಸಾಮರ್ಥ್ಯವನ್ನು ಹಿಂದಿದ್ದು, ಭಕ್ತರಿಗೆ ಸಾಮೂಹಿಕ ಭೋಜನಕ್ಕಾಗಿ ಹಲವು ಶತಮಾನದಿಂದ ಬಳಕೆ ಮಾಡಲಾಗುತ್ತಿದೆ. ಈ ಅಡುಗೆ ಪ್ರಕ್ರಿಯೆಯು ರಾತ್ರಿಯಿಡಿ ಸಾಗಲಿದೆ. ಈ ವೇಳೆ ರಾತ್ರಿ ಇಡೀ ಭಕ್ತರು ಮತ್ತು ಸ್ವಯಂ ಕಾರ್ಯಕರ್ತರು ಪ್ರಾರ್ಥನೆ ಮತ್ತು ದೇವರ ಸ್ಮರಣೆ ಗೀತೆಗಳಾದ ನಾಟ್ಸ್​​, ಮಂಕ್ಬಾತ್, ಕ್ವಾಲಿಸ್​ಗಳನ್ನು ಹಾಡಲಿದ್ದಾರೆ ಎಂದು ದರ್ಗಾ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನೆಯ ಗಣಪತಿ ಪೂಜೆಯಲ್ಲಿ ಪ್ರಧಾನಿ ಮೋದಿ ಭಾಗಿ; ಪ್ರತಿಪಕ್ಷಗಳ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.