ನವದೆಹಲಿ: ಲಂಡನ್ನ ಹೋಟೆಲ್ ರೂಮ್ ಒಳಗೆ ನಿದ್ರಿಸುತ್ತಿದ್ದ ಏರ್ ಇಂಡಿಯಾ ಮಹಿಳಾ ಸಿಬ್ಬಂದಿ ಮೇಲೆ ಅಪರಿಚಿತ ವ್ಯಕ್ತಿ ಒಳನುಗ್ಗಿ ಹಲ್ಲೆ ನಡೆಸಿರುವ ಘಟನೆ ಹೀಥ್ರೂನಲ್ಲಿರುವ ರಾಡಿಸನ್ ರೆಡ್ ಹೋಟೆಲ್‌ನಲ್ಲಿ ಗುರುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹೋಟೆಲ್ನ ಒಳಗೆ ನುಗ್ಗಿದ ಆರೋಪಿ ದಿಢೀರ್ ಸಿಬ್ಬಂದಿಯ ಕೋಣೆಗೆ ಪ್ರವೇಶಿಸಿ ಆಕೆಯ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಸಿಬ್ಬಂದಿ ಕಿರುಚಾಡಿದ್ದಾರೆ. ಈ ಬೊಬ್ಬೆ ಕೇಳಿದ ಆಕೆಯ ಸಹೋದ್ಯೋಗಿಗಳು ಆಕೆಯನ್ನು ರಕ್ಷಿಸಿದ್ದಾರೆ. ತಕ್ಷಣ ಜಾಗೃತಗೊಂಡ ಹೋಟೆಲ್ ಸಿಬ್ಬಂದಿ ಒಳನುಗ್ಗಿದ ವ್ಯಕ್ತಿಯನ್ನು ಹಿಡಿದಿದ್ದಾರೆ.
ವರದಿಗಳ ಪ್ರಕಾರ, ಮಹಿಳಾ ಸಿಬ್ಬಂದಿ ನಿದ್ರಿಸುತ್ತಿದ್ದಾಗ ಒಳನುಗ್ಗಿದ್ದ ಆರೋಪಿ ಬಟ್ಟೆ ಹ್ಯಾಂಗರ್‌ನಿಂದ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ನೆಲದ ಮೇಲೆ ಆಕೆಯನ್ನು ಎಳೆದಿದ್ದಾನೆ. ದಾಳಿಯಿಂದ ನೋವು ಅನುಭವಿಸಿರುವ ಸಿಬ್ಬಂದಿ ಸದ್ಯ ಆಸ್ಪತ್ರೆಗೆ ದಾಖಲಾಗಿ ಭಾರತಕ್ಕೆ ಮರಳಿದ್ದಾರೆ. ಇವರಿಗೆ ಘಟನೆಯ ಬಗ್ಗೆ ಕೌನ್ಸೆಲಿಂಗ್ ನಡೆಯುತ್ತಿದೆ.
ಘಟನೆಯಿಂದ ಹೋಟೆಲ್ನ ಭದ್ರತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಹೋಟೆಲ್‌ನಲ್ಲಿನ ಅಸಮರ್ಪಕ ನಿಯಮಗಳು, ಕತ್ತಲಿನಿಂದ ತುಂಬಿದ ಕಾರಿಡಾರ್‌ಗಳು, ಹೋಟೆಲ್ಗೆ ಆಗಮಿಸುವಲ್ಲಿ ರಿಸಪ್ಶನಿಸ್ಟ್ ಇಲ್ಲದೇ ಇರುವುದು, ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ರೂಮ್ ಬಾಗಿಲು ಬಡಿದಿರುವ ಬಗ್ಗೆ ಈ ಹಿಂದೆ ದೂರುಗಳನ್ನು ದಾಖಲಾಗಿದ್ದವು ಎಂದು ತಿಳಿದುಬಂದಿದೆ.
ಏರ್‌ಲೈನ್ಸ್ ಆಡಳಿತ ಮಂಡಳಿ ಪ್ರತಿಕ್ರಿಯೆ; ಏರ್ ಇಂಡಿಯಾದ ವಕ್ತಾರರು ಈ ಆಘಾತಕಾರಿ ಘಟನೆಯ ಕುರಿತು ಸಂಕ್ಷಿಪ್ತ ಹೇಳಿಕೆಯನ್ನು ನೀಡಿದ್ದಾರೆ ಮತ್ತು ಪ್ರೊಪೆಶನಲ್ ಕೌನ್ಸೆಲಿಂಗ್ ಸೇರಿದಂತೆ 'ಸಾಧ್ಯವಾಗಿರುವ ಎಲ್ಲ ಬೆಂಬಲವನ್ನು' ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ. "ನಮ್ಮ ಸಿಬ್ಬಂದಿ ಅವರ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮಕ್ಕೆ ಏರ್ ಇಂಡಿಯಾ ಯಾವಾಗಲು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ಪ್ರಮುಖ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ವಹಿಸಲ್ಪಡುವ ಹೋಟೆಲ್‌ನಲ್ಲಿನ ಅಕ್ರಮ ಒಳನುಸುವಿಕೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಮೊದಲೇ ಹೇಳಿದಂತೆ ಪ್ರೊಪೆಶನಲ್ ಕೌನ್ಸೆಲಿಂಗ್ ಸೇರಿದಂತೆ ನಮ್ಮ ಸಹೋದ್ಯೋಗಿ ಮತ್ತು ಅವರ ತಂಡಕ್ಕೆ ನಾವು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿದ್ದೇವೆ" ಎಂದು ಏರ್‌ಲೈನ್ಸ್ ಸ್ಪಷ್ಟೀಕರಣ ನೀಡಿದೆ.
ಜತೆಗೆ ಏರ್ ಇಂಡಿಯಾವು ಸ್ಥಳೀಯ ಪೊಲೀಸರೊಂದಿಗೆ ಪ್ರಕರಣದ ಕುರಿತು ತನಿಖೆ ಮತ್ತು ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಹೋಟೆಲ್ ಆಡಳಿತದೊಂದಿಗೆ ಕೆಲಸ ಮಾಡುತ್ತಿದೆ.
ಇದನ್ನೂ ಓದಿ: ಈ ಸ್ವೀಪರ್ ಕೋಟ್ಯಾಧಿಪತಿ; ಈತನ ಮನೆಯಲ್ಲಿವೆ 9 ಐಷಾರಾಮಿ ಕಾರುಗಳು! - MILLIONAIRE SWEEPER