ಹೈದರಾಬಾದ್: ಕಳೆದ ಮೂರೂವರೆಗಳ ಹಿಂದೆ ಅನಾರೋಗ್ಯಕ್ಕೆ ಒಳಗಾದ ಮಗನಿಗೆ ಚಿಕಿತ್ಸೆಗೆಂದು ಆಶ್ರಮಕ್ಕೆ ಕರೆದುಕೊಂಡು ಹೋದ ತಂದೆ ಆತನನ್ನು ಅಲ್ಲಿಯೇ ಬಿಟ್ಟಿದ್ದಾರೆ. ಆತ ಜೀವಂತವಾಗಿದ್ದು, ಹುಷಾರಾಗಿ ಮನೆಗೆ ಮರಳುತ್ತಾನೆ ಎಂಬ ಭರವಸೆಯಲ್ಲಿ ಜೀವನ ಕಳೆಯುತ್ತಿದ್ದ ತಾಯಿಗೆ ಇದೀಗ ಬರಸಿಡಿಲಿನಂತಹ ಆಘಾತ ಎದುರಾಗಿದೆ. ಮಗನಿಗಾಗಿ ಕಾದು ಕಾದು ಮಾನಸಿಕವಾಗಿ ಕುಗ್ಗಿ ಹೋದ ತಾಯಿ ಕಡೆಗೆ ಪೊಲೀಸರಿಗೆ ದೂರು ನೀಡಿದಾಗ ಅಸಲಿ ವಿಷಯ ಹೊರಬಂದಿದ್ದು, ಇದೀಗ ತಾಯಿಯ ನೋವಿಗೆ ಕೊನೆಯಿಲ್ಲದಂತೆ ಆಗಿದೆ.
ಏನಿದು ಘಟನೆ: ಕುಮುರಂಭೀಮ್ ಜಿಲ್ಲೆಯ ರೆಬ್ಬೇನ ಸಿಐ ಚಿಟ್ಟಿಬಾಬು ಅವರು ನೀಡಿರುವ ದೂರಿನ ವಿವರ ಇಂತಿದೆ.
ರೆಬ್ಬೆಣ ಮಂಡಲದ ನಂಬಲ ಗ್ರಾಮದ ನಿವಾಸಿಗಳಾದ ಸುಳ್ವ ಶ್ರೀನಿವಾಸ್ ಮತ್ತು ಮಲ್ಲೇಶ್ವರಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಮೊದಲ ಮಗ ರಿಷಿ(11) 2020ರಲ್ಲಿ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದ. ಈ ವೇಳೆ ಆತನನ್ನು ಅದೇ ಮಂಡಲದ ಪಾಸಿಗಾಮ್ನ ಹೊರವಲಯದಲ್ಲಿ ಆಶ್ರಮದ ದೇವಮಾನವ ಎಂದು ಘೋಷಿಸಿಕೊಂಡ ವ್ಯಕ್ತಿಬಳಿ ಕರೆದು ತರಲಾಗಿತ್ತು. ಮಗನನ್ನು ಗುಣಮುಖ ಮಾಡುವಂತೆ ಶ್ರೀನಿವಾಸ್ ಆತನನ್ನು ಕೋರಿದ್ದ. ಭೀಮ್ ರಾವ್ ಎಂಬ ದೇವಮಾನವ ಮಗುವಿಗೆ ಎಣ್ಣೆ ಹಚ್ಚಿದರೆ ಆತ ಗುಣಮುಖನಾಗುತ್ತಾನೆ ಎಂದು ದಾಖಲಿಸಿಕೊಂಡ. ಅದರಂತೆ ಬಾಲಕನಿಗೆ ನಾಟಿ ಚಿಕಿತ್ಸೆ ನೀಡಲಾಯಿತು. ದಿನಕಳೆದಂತೆ ಬಾಲಕನ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಒಂದು ದಿನ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ. ಈ ಕುರಿತು ಪ್ರಶ್ನಿಸಿ, ಗಲಾಟೆ ಮಾಡುವ ಬದಲಾಗಿ ಶ್ರೀನಿವಾಸ್ ಕೂಡ ಭೀಮ್ರಾವ್ ಜೊತೆ ಸೇರಿ ಆಶ್ರಮದ ಹಿಂದೆ ಮಗನನ್ನು ಸಮಾಧಿ ಮಾಡಿದ್ದ.
ಇತ್ತ ಮಗ ಆಶ್ರಮದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಸುಳ್ಳನ್ನು ಹೇಳಿ ಹೆಂಡತಿಗೆ ನಂಬಿಸಿದ. ಪ್ರತಿ ಬಾರಿ ಆಕೆ ಪ್ರಶ್ನಿಸಿದಾಗ ಆತನ ಆರೋಗ್ಯ ಸುಧಾರಿಸುತ್ತಿದೆ ಎನ್ನುತ್ತಿದ್ದ. ಸರಿ ತಾನೇ ಹೋಗಿ ನೋಡಿ ಬರೋಣ ಎಂದು ಆಶ್ರಮಕ್ಕೆ ಭೇಟಿ ನೀಡಿದಾಗ ಭೀಮ್ರಾವ್, ಬಾಲಕ ಮಲಗಿದ್ದಾನೆ ಎಂದು ಆಕೆಯನ್ನು ಬರಿಗೈಲಿ ಕಳುಹಿಸುತ್ತಿದ್ದ.
ಗಂಡ ಶ್ರೀನಿವಾಸ್ ಮತ್ತು ಭೀಮ್ರಾವ್ ಅವರ ದೌರ್ಜನ್ಯದಿಂದ ಮಲ್ಲೇಶ್ವರಿ ಜರ್ಜರಿತಳಾಗಿದ್ದಳು. ಮಾನಸಿಕವಾಗಿ ಖಿನ್ನತೆಗೆ ಜಾರಿದ ಮಲ್ಲೇಶ್ವರಿ ಕಡೆಗೆ ಗಂಡನ ತೊರೆದು ಕಳೆದ 11 ತಿಂಗಳಿನಿಂದ ಆಕೆಯ ತವರಿನಲ್ಲಿದ್ದಾರೆ. ಸಂಬಂಧಿಕರ ಸಹಾಯದಿಂದ ಮಗನನ್ನು ತನ್ನಿಂದ ಮರೆಮಾಚುತ್ತಿದ್ದಾರೆ ಎಂದು ಇದೇ ತಿಂಗಳ 16ರಂದು ಪೊಲೀಸರಿಗೆ ದೂರು ನೀಡಿದ್ದಳು.
ಪ್ರಾಥಮಿಕ ತನಿಖೆ ವೇಳೆ ಆರೋಪಿಗಳು ಪೊಲೀಸರ ಮುಂದೆ ನಿಜ ಏನು ಎಂಬುದನ್ನು ತಿಳಿಸಿದ್ದಾರೆ. ಗುರುವಾರ ಭೀಮ್ರಾವ್ ಮತ್ತು ಶ್ರೀನಿವಾಸ್ ಬಾಲಕನ ಹೂತು ಹಾಕಿದ ಸ್ಥಳವನ್ನು ತೋರಿಸಿದ್ದಾರೆ. ಸಿಐ ಚಿಟ್ಟಿಬಾಬು ಮತ್ತು ಎಸ್ಎಸ್ ಚಂದ್ರಶೇಖರ್, ತಹಸೀಲ್ದಾರ್ ಜ್ಯೋತ್ಸ್ನಾ ಮತ್ತು ವಿಧಿವಿಜ್ಞಾನ ತಜ್ಞ ಸುರೇಂದರ್ ರೆಡ್ಡಿ ಅವರ ಉಪಸ್ಥಿತಿಯಲ್ಲಿ ಬಾಲಕನ ಶವದ ಕುರುಹುಗಳು ಪತ್ತೆಮಾಡಲಾಗಿದೆ. ಆಸಿಫಾಬಾದ್ ಡಿಎಸ್ಪಿ ಸದಯ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತೊರಕಿರುವ ಕುರುಹುಗಳ ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದು ಸಿಐ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಭೀಮರಾವ್ ಮತ್ತು ಶ್ರೀನಿವಾಸ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮತಾಂತರಕ್ಕೆ ನಿರಾಕರಿಸಿದ ಮಹಿಳೆ ಮನೆ ಮೇಲೆ ದಾಳಿ, ಅತ್ಯಾಚಾರ ಯತ್ನ ಆರೋಪ: 25 ಮಂದಿ ವಿರುದ್ಧ ಎಫ್ಐಆರ್