ETV Bharat / bharat

ಅ.27ರಂದು ನಟ ವಿಜಯ್​ ಟಿವಿಕೆ ಪಕ್ಷದ ಮೊದಲ ರಾಜ್ಯ ಸಮ್ಮೇಳನ: ಸಿದ್ಧಾಂತ, ಪದಾಧಿಕಾರಿಗಳ ಪಟ್ಟಿ ಬಿಡುಗಡೆ - Tamizhaga Vettri Kazhagam - TAMIZHAGA VETTRI KAZHAGAM

ತಮಿಳು ನಟ ವಿಜಯ್​ ನೇತೃತ್ವದ ಹೊಸ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ ನ ಮೊದಲ ರಾಜ್ಯ ಸಮ್ಮೇಳನವು ಅಕ್ಟೋಬರ್​ 27 ರಂದು ನಡೆಯಲಿದೆ.

ತಮಿಳು ಸೂಪರ್ ಸ್ಟಾರ್ ವಿಜಯ್
ತಮಿಳು ಸೂಪರ್ ಸ್ಟಾರ್ ವಿಜಯ್ (IANS)
author img

By ETV Bharat Karnataka Team

Published : Sep 20, 2024, 4:04 PM IST

ಚೆನ್ನೈ: ತಮಿಳು ಸೂಪರ್ ಸ್ಟಾರ್ ವಿಜಯ್ ಅವರು ಸ್ಥಾಪಿಸಿರುವ ಹೊಸ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ)ನ ಮೊದಲ ರಾಜ್ಯ ಸಮ್ಮೇಳನವು ಅಕ್ಟೋಬರ್ 27 ರಂದು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆಯಲಿದೆ. ನಟ ವಿಜಯ್ ಶುಕ್ರವಾರ ನೀಡಿರುವ ಹೇಳಿಕೆಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.

ವಿ ಸಾಲೈ ಗ್ರಾಮದಲ್ಲಿ ಸಮಾವೇಶ: ವಿಲ್ಲುಪುರಂ ಜಿಲ್ಲೆಯ ವಿಕ್ರಾವಂಡಿ ಬ್ಲಾಕ್​​ನ ವಿ ಸಾಲೈ ಗ್ರಾಮದಲ್ಲಿ ಅಕ್ಟೋಬರ್ 27 ರ ಸಂಜೆ 4 ಗಂಟೆಗೆ ಸಮಾವೇಶ ನಡೆಯಲಿದೆ. ಸಭೆಯಲ್ಲಿ ಪಕ್ಷದ ರಾಜಕೀಯ ಸಿದ್ಧಾಂತ, ರಾಜ್ಯ ಪದಾಧಿಕಾರಿಗಳ ಪಟ್ಟಿ ಮತ್ತು ಪಕ್ಷದ ನೀತಿ ಆಧಾರಿತ ಕ್ರಿಯಾ ಯೋಜನೆಗಳನ್ನು ಘೋಷಿಸಲಾಗುವುದು.

"ನಮ್ಮ ಪಕ್ಷದ ಮೊದಲ ರಾಜ್ಯ ಸಮ್ಮೇಳನವನ್ನು ರಾಜಕೀಯ ಹಬ್ಬವಾಗಿ ಆಚರಿಸಲಾಗುವುದು. ನಮಗೆ ಮಾರ್ಗದರ್ಶನ ನೀಡುವ ಸಿದ್ಧಾಂತಗಳು ಮತ್ತು ನಮ್ಮ ಗುರಿಗಳನ್ನು ಪ್ರಕಟಿಸಲಾಗುವುದು. ಪಕ್ಷದ ಸಿದ್ಧಾಂತವನ್ನು ಕೂಡಾ ಘೋಷಿಸಲಾಗುವುದು" ಎಂದು ಸೂಪರ್ ಸ್ಟಾರ್ ವಿಜಯ್ ಹೇಳಿದರು.

"ಸಮ್ಮೇಳನದ ಪೂರ್ವಸಿದ್ಧತಾ ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದು, ಇದನ್ನು ಶೀಘ್ರದಲ್ಲೇ ವೇಗಗೊಳಿಸಲಾಗುವುದು. ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್ ಆನಂದ್ ಅವರು ವಿಲ್ಲುಪುರಂ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಸಮ್ಮೇಳನಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಿದ್ದಾರೆ" ಎಂದು ನಟ ವಿಜಯ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್​ 23ರ ಬದಲು ಅಕ್ಟೋಬರ್​ 27ಕ್ಕೆ ಸಮಾವೇಶ: ಪಕ್ಷದ ಮೊದಲ ರಾಜ್ಯ ಸಮ್ಮೇಳನವನ್ನು ಈ ಹಿಂದೆ ಸೆಪ್ಟೆಂಬರ್ 23 ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅನುಮತಿ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಅದನ್ನು ಮುಂದೂಡಲಾಯಿತು.ತಮ್ಮ ಹೊಸ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಗೆ ಭಾರತದ ಚುನಾವಣಾ ಆಯೋಗದಿಂದ (ಇಸಿಐ) ಮಾನ್ಯತೆ ಸಿಕ್ಕಿದೆ ಎಂದು ವಿಜಯ್ ಸೆಪ್ಟೆಂಬರ್ 8 ರಂದು ಘೋಷಿಸಿದ್ದಾರೆ.

2024 ರ ಲೋಕಸಭಾ ಚುನಾವಣೆಯಲ್ಲಿ ಟಿವಿಕೆ ಸ್ಪರ್ಧಿಸುವುದಿಲ್ಲ ಮತ್ತು 2026 ರ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನಿಂದ ಸ್ಪರ್ಧಿಸುವುದು ಪಕ್ಷದ ಗುರಿಯಾಗಿದೆ ಎಂದು ವಿಜಯ್ ಫೆಬ್ರವರಿ 2024 ರಲ್ಲಿ ಪಕ್ಷವನ್ನು ಘೋಷಣೆ ಮಾಡಿದ ಸಮಯದಲ್ಲಿ ಹೇಳಿದ್ದರು.

ತಮ್ಮ ಅಭಿಮಾನಿ ಸಂಘ ಆಲ್ ಇಂಡಿಯಾ ತಲಪತಿ ವಿಜಯ್ ಮಕ್ಕಳ್ ಇಯಕ್ಕಂ (ಎಐಟಿವಿಎಂಐ) ಈಗಾಗಲೇ ಹಲವಾರು ವರ್ಷಗಳಿಂದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಆದರೆ ಅದು ತನ್ನದೇ ಆದ ಪೂರ್ಣ ಪ್ರಮಾಣದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸುಧಾರಣೆಗಳನ್ನು ತರಲು ಸಾಧ್ಯವಿಲ್ಲ. ಹೀಗಾಗಿ ಅದಕ್ಕೆ ರಾಜಕೀಯ ಅಧಿಕಾರದ ಅಗತ್ಯವಿದೆ ಎಂದು ಅವರು ಆಗ ಹೇಳಿದ್ದರು.

ಇದನ್ನೂ ಓದಿ : ಜನರನ್ನು ಬೆಚ್ಚಿಬೀಳಿಸಿದ ಸೂಟ್​ಕೇಸ್​: ತೆರೆದು ನೋಡಿದಾಗ ಅದರಲ್ಲಿತ್ತು ಮಹಿಳೆಯ ಶವ! - Womans Dismembered Body

ETV Bharat Logo

Copyright © 2024 Ushodaya Enterprises Pvt. Ltd., All Rights Reserved.