ನವದೆಹಲಿ: ಮುಂದಿನ ವರ್ಷದ ಫೆಬ್ರವರಿ ಒಳಗೆ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಆಪ್) ಭರ್ಜರಿ ತಯಾರಿಯಲ್ಲಿದೆ. ಇಂದು (ಭಾನುವಾರ) ತನ್ನ ನಾಲ್ಕನೇ ಮತ್ತು ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು.
ಪಕ್ಷದ ನಾಯಕ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಸಿಎಂ ಅತಿಶಿ ಸೇರಿದಂತೆ ಪಟ್ಟಿಯಲ್ಲಿ 38 ಅಭ್ಯರ್ಥಿಗಳಿದ್ದಾರೆ. ಕೇಜ್ರಿವಾಲ್ ಅವರು ದೆಹಲಿ ವಿಧಾನಸಭೆ, ಸಿಎಂ ಅತಿಶಿ ಕಲ್ಕಾಜಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಪಟ್ಟಿಯಲ್ಲಿರುವ 38 ಅಭ್ಯರ್ಥಿಗಳ ಪೈಕಿ 36 ಹಾಲಿ ಶಾಸಕರಾಗಿದ್ದಾರೆ. ಇನ್ನೆರಡು ಕ್ಷೇತ್ರಗಳಲ್ಲಿ ಬಿಜೆಪಿ ತೊರೆದು ಆಪ್ ಸೇರಿದ್ದ ನಾಯಕರಿಗೆ ಮಣೆ ಹಾಕಲಾಗಿದೆ.
आज आम आदमी पार्टी ने सभी 70 सीटों पर अपने उम्मीदवार घोषित कर दिए। पार्टी पूरे आत्मविश्वास और पूरी तैयारी के साथ चुनाव लड़ रही है।
— Arvind Kejriwal (@ArvindKejriwal) December 15, 2024
बीजेपी गायब है। उनके पास ना CM चेहरा है, ना टीम है, ना प्लानिंग है और ना दिल्ली के लिए कोई विज़न है। उनका केवल एक ही नारा है, केवल एक ही नीति है और… https://t.co/OQ4ehsfKHY
ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಆಪ್ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದೆ. ವಿಪಕ್ಷಗಳ ಇಂಡಿಯಾ ಮೈತ್ರಿಕೂಟದಲ್ಲಿ ಇದ್ದರೂ, ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕೇಜ್ರಿವಾಲ್ ಅವರು ಸ್ಪಷ್ಟಪಡಿಸಿದ್ದಾರೆ.
ಇದರಿಂದ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಆಪ್ ಮಧ್ಯೆ ತ್ರಿಕೋನ ಸೆಣಸಾಟ ನಡೆಯುವುದು ಶತ:ಸಿದ್ಧವಾಗಿದೆ. 2020 ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ ಆಪ್ 62 ರಲ್ಲಿ ಗೆದ್ದು ಐತಿಹಾಸಿ ಜಯಭೇರಿ ಬಾರಿಸಿತ್ತು. ಉಳಿದ 8 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಪಡೆದಿತ್ತು. ಈ ಮೂಲಕ ವಿಧಾನಸಭೆಯಲ್ಲಿ ಅಧಿಕೃತ ವಿಪಕ್ಷವೇ ಇಲ್ಲವಾಗಿತ್ತು. ದೆಹಲಿ ಗೆದ್ದುಗೆಯ ಮೇಲೆ ಸತತ 15 ವರ್ಷ ಆಳ್ವಿಕೆ ಮಾಡಿದ್ದ ಕಾಂಗ್ರೆಸ್ ಒಂದೂ ಕ್ಷೇತ್ರವನ್ನು ಗೆಲ್ಲಲಾಗದೆ ತೀವ್ರ ಮುಖಭಂಗ ಅನುಭವಿಸಿತ್ತು.
ಇದನ್ನೂ ಓದಿ: ಕಾಂಗ್ರೆಸ್ನ ಗರೀಬಿ ಹಠಾವೋ ದೇಶದ ಅತಿದೊಡ್ಡ ಜುಮ್ಲಾ: ಪ್ರಧಾನಿ ಮೋದಿ