ETV Bharat / bharat

ಜಮ್ಮು- ಕಾಶ್ಮೀರದ ಕಿಶ್ತ್ವಾರ್​ ಅರಣ್ಯ ಪ್ರದೇಶದಲ್ಲಿ ಮುಂದುವರೆದ ಉಗ್ರರ ಶೋಧ ಕಾರ್ಯ - MILITANTS SEARCH OPERATION

ನಾಲ್ಕು ದಿನಗಳ ಹಿಂದೆ ಕಿಶ್ತ್ವಾರ್​ನ ಕುಂಟ್ವಾರ ಪ್ರದೇಶದಲ್ಲಿ ಇಬ್ಬರು ಗ್ರಾಮ ರಕ್ಷಕರನ್ನು ಉಗ್ರರು ಹತ್ಯೆಗೈದಿದ್ದರು.

A massive search operation resumed on Monday in the Bharat Ridge area
ಭದ್ರತಾ ಪಡೆ (ANI)
author img

By ETV Bharat Karnataka Team

Published : Nov 11, 2024, 2:32 PM IST

ಜಮ್ಮು ಕಾಶ್ಮೀರ: ಇಲ್ಲಿನ ಕಿಶ್ತ್ವಾರ್ ಮತ್ತು ದೋಡಾ ಜಿಲ್ಲೆಯನ್ನು ಸಂಪರ್ಕಿಸುವ ಭಾರತ್ ರಿಡ್ಜ್ ಪ್ರದೇಶದಲ್ಲಿ ಸೇನೆ ಬೃಹತ್​​ ಕಾರ್ಯಾಚರಣೆ ಮುಂದುವರೆಸಿದೆ. ಭಾನುವಾರಪೂರ್ತಿ ನಡೆದ ಕಾರ್ಯಾಚರಣೆಯನ್ನು ರಾತ್ರಿ ಸ್ಥಗಿತಗೊಳಿಸಿದ್ದು, ಇಂದು ಬೆಳಗ್ಗೆಯಿಂದ ಪುನಾರಂಭಿಸಲಾಗಿದೆ.

ಭಾನುವಾರ ಬೆಳಗ್ಗೆ 11 ಗಂಟೆಗೆ ಕೇಶ್ವಾನ್​ ಅರಣ್ಯ ಪ್ರದೇಶದಲ್ಲಿ ಸೇನೆ ಮತ್ತು ಪೊಲೀಸರು​​ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ನಾಲ್ಕು ಗಂಟೆಗಳ ಕಾಲ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಸೇನೆಯ ಜ್ಯೂನಿಯರ್​ ಕಮಿಷನ್ಡ್​​ ಆಫೀಸರ್​ ನಯಬ್​ ಸುಬೇದರ್​ ರಾಕೇಶ್​ ಕುಮಾರ್ ಹುತಾತ್ಮರಾಗಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ.

ಇತ್ತೀಚಿಗೆ ಕಿಶ್ತ್ವಾರ್​ನ ಕುಂಟ್ವಾರ ಪ್ರದೇಶದಲ್ಲಿ ಗ್ರಾಮ ರಕ್ಷಕ ಗಾರ್ಡ್​ (ವಿಡಿಜಿ)ಗಳಾದ ಕುಲ್ದೀಪ್​​ ಕುಮಾರ್​ ಮತ್ತು ನಜೀರ್​ ಅಹ್ಮದ್​ ಅವರನ್ನು ಉಗ್ರರು ಹತ್ಯೆ ಮಾಡಿದ್ದರು.

ಇದನ್ನೂ ಓದಿ: ಜಮ್ಮು ಕಾಶ್ಮೀರ: ಓರ್ವ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.