ಹೈದರಾಬಾದ್: ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಗಾತಿ ಹಿಮಾನಿ ಅವರನ್ನು ವರಿಸಿದ್ದಾಗಿ ನೀರಜ್ ಚೋಪ್ರಾ ಮದುವೆಯ ಮೊದಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾನುವಾರ ಹಂಚಿಕೊಂಡಿದ್ದಾರೆ. ಆದರೆ ಎರಡು ದಿನಗಳ ಹಿಂದೆ ಮದುವೆ ಆಗಿದ್ದು, ಎಲ್ಲಿ ಮತ್ತು ಯಾವಾಗ ಎಂಬುದು ತಿಳಿದು ಬಂದಿಲ್ಲ.
"ನನ್ನ ಕುಟುಂಬದೊಂದಿಗೆ ಜೀವನದ ಹೊಸ ಅಧ್ಯಾಯ ಆರಂಭಿಸಿದೆ " ಎಂದು ನೀರಜ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
जीवन के नए अध्याय की शुरुआत अपने परिवार के साथ की। 🙏
— Neeraj Chopra (@Neeraj_chopra1) January 19, 2025
Grateful for every blessing that brought us to this moment together. Bound by love, happily ever after.
नीरज ♥️ हिमानी pic.twitter.com/OU9RM5w2o8
"ಈ ಕ್ಷಣ ನಮ್ಮನ್ನು ಒಟ್ಟಿಗೆ ಸೇರಿಸಿದ ಪ್ರತಿ ಆಶೀರ್ವಾದಕ್ಕೂ ಕೃತಜ್ಞರಾಗಿರುತ್ತೇನೆ. ಪ್ರೀತಿಯಿಂದ ಬಂಧಿತರಾಗಿದ್ದು, ಯಾವಾಗಲೂ ಸಂತೋಷವಾಗಿರುತ್ತೇವೆ" ಎಂದು ಬಂಗಾರದ ಹುಡುಗ ನೀರಜ್ ಸಂತಸ ಹಂಚಿಕೊಂಡಿದ್ದಾರೆ. ಮದುವೆ ವಿಚಾರವನ್ನು ನೀರಜ್ ಬಹಿರಂಗಪಡಿಸಿರಲಿಲ್ಲ. ಆದರೆ ಎಕ್ಸ್ ಖಾತೆಯಲ್ಲಿ ಫೋಟೋ ಪೋಸ್ಟ್ ಮೂಲಕ ವಿವಾಹವಾದ ಸುದ್ದಿಯನ್ನು ನೀಡಿದ್ದಾರೆ.
ಭಾರತದಲ್ಲಿ ಎರಡು ದಿನಗಳ ಹಿಂದೆ ನೀರಜ್ ಮದುವೆ ನಡೆದಿದೆ. ಯಾವ ಸ್ಥಳದಲ್ಲಿ ವಿವಾಹವಾಗಿದೆ ಎಂದು ನನಗೆ ಹೇಳಲಾಗುವುದಿಲ್ಲ. ಸದ್ಯ ದಂಪತಿಗಳು ಹನಿಮೂನ್‌ಗೆ ತೆರಳಿದ್ದಾರೆ ಎಂದು ಹರಿಯಾಣದ ಪಾಣಿಪತ್ ಬಳಿಯ ಖಂದ್ರಾದಲ್ಲಿರುವ ತಮ್ಮ ಹಳ್ಳಿಯಿಂದ ಭೀಮ್ ಮಾಹಿತಿ ನೀಡಿದ್ದಾರೆ.
"ನೀರಜ್ ಪತ್ನಿ ಸೋನಿಪತ್ ಮೂಲದವರಾಗಿದ್ದು, ಅಮೆರಿಕದಲ್ಲಿ ಓದುತ್ತಿದ್ದಾರೆ. ಅವರು ಹನಿಮೂನ್‌ಗೆ ವಿದೇಶಕ್ಕೆ ಹೋಗಿದ್ದು, ಎಲ್ಲಿಗೆ ಹೋಗಿದ್ದಾರೆಂದು ನನಗೆ ಗೊತ್ತಿಲ್ಲ" ಎಂದು ಒಲಿಂಪಿಕ್ ಡಬಲ್ ಪದಕ ವಿಜೇತರೊಂದಿಗೆ ವಾಸಿಸುವ ಭೀಮ್ ತಿಳಿಸಿದ್ದಾರೆ.
ಜಾವೆಲಿನ್ ಎಸೆತದಲ್ಲಿ 2021ರ ಒಲಿಂಪಿಕ್ಸ್‌ನಲ್ಲಿ ನೀರಜ್ ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇನ್ನೂ ಕಳೆದ ವರ್ಷದ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಒಲಿಂಪಿಕ್ ಬಂಗಾರದ ಹುಡುಗ ಮದುವೆ ವಿಚಾರ ಬಹಿರಂಗಪಡಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆ ಹರಿದು ಬಂದಿದೆ.
ಇದನ್ನೂ ಓದಿ: ಭಾರತಕ್ಕೆ ಖೋ-ಖೋ ವಿಶ್ವಕಪ್ ಡಬಲ್ ಸಂಭ್ರಮ: ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ ಮಹಿಳಾ, ಪುರುಷರ ತಂಡಗಳು
ಇದನ್ನೂ ಓದಿ: ಕೈತಪ್ಪಿದ ಡೈಮಂಡ್ ಲೀಗ್ ಟ್ರೋಫಿ: ಎಕ್ಸ್-ರೇ ಸಮೇತ ಅಸಲಿ ಕಾರಣ ತಿಳಿಸಿದ ನೀರಜ್ ಚೋಪ್ರಾ - Neeraj Chopra