ಮುಂಬೈ (ಮಹಾರಾಷ್ಟ್ರ) : ಇಲ್ಲಿನ ನಾಂದೇಡ್ ಜಿಲ್ಲೆಯಲ್ಲಿ ದೇವಸ್ಥಾನವೊಂದರ ಹಬ್ಬದ ಸಂದರ್ಭದಲ್ಲಿ ಆಹಾರ ಪದಾರ್ಥಗಳನ್ನು ಸೇವಿಸಿದ ಕನಿಷ್ಠ 90 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೈಗಾಂವ್‌ನಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಒಂದು ಔತಣವನ್ನು ಆಯೋಜಿಸಿ, ಶಿವನ ದೇವಾಲಯದ ಹೊರಗೆ ಭಕ್ತರಿಗೆ ಪ್ರಸಾದವನ್ನು ನೀಡಲಾಗಿತ್ತು. ಅವರಿಗೆ ತಿನ್ನಲು 'ಅಂಬಿಲ್' (ಗಂಜಿ, ಅಂಬಲಿ) ಮತ್ತು 'ಖೀರ್' (ಹಾಲಿನಿಂದ ಮಾಡಿದ ಸಿಹಿ ಖಾದ್ಯ) ತಿನ್ನಲು ನೀಡಲಾಗಿತ್ತು. ಆದರೆ ಅಂಬಲಿ ಸೇವಿಸಿದ ನಂತರ ಭಕ್ತರು ತಲೆಸುತ್ತು ಬಂದು ವಾಂತಿ ಮಾಡಿಕೊಳ್ಳಲು ಆರಂಭಿಸಿದರು'' ಎಂದು ತಿಳಿದು ಬಂದಿದೆ.
"ಆರಂಭದಲ್ಲಿ, ಅವರಲ್ಲಿ ಕೆಲವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಸಂಜೆಯ ಹೊತ್ತಿಗೆ ಆಹಾರ ವಿಷಪೂರಿತವಾದ ಬಗ್ಗೆ ಹೆಚ್ಚಿನ ದೂರುಗಳು ಬಂದವು. ತಡರಾತ್ರಿಯವರೆಗೆ ಒಟ್ಟು 90 ಜನರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅವರೆಲ್ಲರ ಸ್ಥಿತಿ ಸ್ಥಿರವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ : ಲಡ್ಡು ತಿಂದು 15 ಮಕ್ಕಳು ಅಸ್ವಸ್ಥ - FOOD POISONING