ನವದೆಹಲಿ: ಕತ್ತಲಾಗುತ್ತಿದ್ದಂತೆ ದೆಹಲಿ ಬಸ್ನ ಪ್ರಯಾಣವು ಅಸುರಕ್ಷತೆಯಿಂದ ಕೂಡಿರುತ್ತದೆ ಎಂದು ಶೇ 75ರಷ್ಟು ಮಹಿಳೆಯರು ತಿಳಿಸಿದ್ದಾರೆ. ಮಹಿಳೆಯರ ಸುರಕ್ಷತೆ ಕಾಯುವ ಉದ್ದೇಶದಿಂದಲೇ ಸರ್ಕಾರ ನಗರದಲ್ಲಿ ಪಾವತಿ ರಹಿತ ಬಸ್ ಪ್ರಯಾಣಕ್ಕಾಗಿ ಯೋಜನೆ ರೂಪಿಸಿದ ನಡುವೆಯೂ ಈ ಅಭಿಪ್ರಾಯ ಕೇಳಿ ಬಂದಿದೆ.
ರೈಡಿಂಗ್ ದಿ ಜಸ್ಟಿಸ್ ರೂಟ್ ವರದಿಯಲ್ಲಿ ಸರ್ಕಾರೇತರ ಸಂಘಟನೆಯಾದ ಗ್ರೀನ್‌ಪೀಸ್ ಈ ಸಂಬಂಧ ಸಮೀಕ್ಷೆ ನಡೆಸಿ, ರೈಡಿಂಗ್ ದಿ ಜಸ್ಟೀಸ್ ರೂಟ್ ಎಂಬ ವರದಿ ಹೊರತಂದಿದೆ. ಸಮೀಕ್ಷೆಯಲ್ಲಿ ಶೇ 75ರಷ್ಟು ಮಹಿಳೆಯರು ಪಿಂಕ್ ಟಿಕೆಟ್ ಯೋಜನೆಯಿಂದ ಗಣನೀಯ ಉಳಿತಾಯವಾಗುತ್ತಿದೆ ಎಂದಿದ್ದು, ಈ ಉಳಿತಾಯವಾದ ಹಣವೂ ತುರ್ತು ಪರಿಸ್ಥಿತಿಗಳು ಮತ್ತು ಆರೋಗ್ಯ ರಕ್ಷಣೆ ಸೇರಿದಂತೆ ಇತರ ತುರ್ತು ಸಂದರ್ಭದಲ್ಲಿ ಬಳಕೆ ಮಾಡುವುದಾಗಿ ತಿಳಿಸಿದ್ದಾರೆ.
ಜೊತೆಗೆ ಶೇ 25ರಷ್ಟು ಈ ಹಿಂದೆ ನಾವು ಬಸ್ ಸಂಚಾರಕ್ಕೆ ಮುಂದಾಗುತ್ತಿರಲಿಲ್ಲ. ಆದರೆ, ಇದೀಗ ನಾವು ಸಾರ್ವಜನಿಕ ಬಸ್ ಸೇವೆಯನ್ನು ಹೆಚ್ಚಾಗಿ ಬಳಕೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವೂ ಮಹಿಳೆಯರಿಗಾಗಿ ಸುರಕ್ಷಿತ ಹಾಗೂ ಪಾವತಿ ರಹಿತ ಪಿಂಕ್ ಟಿಕೆಟ್ ಯೋಜನೆಯನ್ನು 2019ರಲ್ಲಿ ಜಾರಿಗೆ ತಂದಿತು.
ಸಕಾಲಕ್ಕೆ ಬಸ್ ಇಲ್ಲದಿರುವುದು ಅಸುರಕ್ಷತೆಗೆ ಕಾರಣ: ಇದರ ಹೊರತಾಗಿ ಶೇ 77ರಷ್ಟು ಮಹಿಳೆಯರು ಕತ್ತಲಾದ ಮೇಲೆ ಮಂದ ಬೆಳಕು ಮತ್ತು ಬಸ್ ಸಕಾಲಕ್ಕೆ ಇಲ್ಲದಿರುವುದರಿಂದ ಈ ಸಮಯದಲ್ಲಿ ಪ್ರಯಾಣದ ಬಗ್ಗೆ ಅಸುರಕ್ಷತೆ ಹೊಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಜನದಟ್ಟಣೆಯ ಬಸ್ನಲ್ಲಿ ಮಹಿಳೆಯರು ಕಿರುಕುಳಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.
ಫ್ರೀ ಟಿಕೆಟ್ - ಸಾರ್ವಜನಿಕ ಸಾರಿಗೆ ಸೇವೆ ಸುಗಮ: ಪಿಂಕ್ ಟಿಕೆಟ್ ಯೋಜನೆಯಲ್ಲಿ ದೆಹಲಿಯಲ್ಲಿ ಮಹಿಳೆಯರು ಹಣ ನೀಡದೇ ಉಚಿತ ಬಸ್ ಪ್ರಯಾಣ ಮಾಡಬಹುದಾಗಿದೆ. ಈ ಯೋಜನೆಯು ದೆಹಲಿಯಲ್ಲಿ ಮಹಿಳೆಯರಿಗೆ ಸಾರ್ವಜನಿಕ ಸಾರಿಗೆ ಸೇವೆ ಸುಗಮಗೊಳಿಸಿದೆ ಎಂದು ಗ್ರೀನ್‌ಪೀಸ್ ಇಂಡಿಯಾ ಅಭಿಯೋಜನರು ಅಕಿಜ್ ಫಾರೂಕ್ ತಿಳಿಸಿದ್ದಾರೆ.
ಬೇಕಿದೆ ಹೆಚ್ಚಿನ ಸುರಕ್ಷತೆ: ಆದರೆ, ಇದು ನಿಜವಾಗಿಯೂ ರೂಪಾಂತರಗೊಳ್ಳಲು, ನಾವು ಮತ್ತಷ್ಟು ಸೇವೆ ಅನ್ನು ವಿಸ್ತರಿಸಬೇಕು, ಸುರಕ್ಷತೆಯನ್ನು ಹೆಚ್ಚಿಸಬೇಕು. ಸಾರ್ವಜನಿಕ ಸಾರಿಗೆಯನ್ನು ಎಲ್ಲರಿಗೂ ಪ್ರವೇಶಿಸುವಂತೆ ಮಾಡಲು ಉತ್ತಮ ಸಂಪರ್ಕಿತ ಸೇವೆಗಳನ್ನು ಖಚಿತಪಡಿಸಿಕೊಳ್ಳಬೇಕು. ಎಂದರು.
100 ಕೋಟಿ ಪಿಂಕ್ ಟಿಕೆಟ್: ಈ ಯೋಜನೆ 100 ಕೋಟಿ ಪಿಂಕ್ ಟಿಕೆಟ್ ನೀಡಿ ಮೈಲಿಗಲ್ಲು ನಿರ್ಮಿಸಿದೆ. ಈ ಯೋಜನೆ ಕೇವಲ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಬೆಂಬಲಿಸುವುದಿಲ್ಲ. ಇದು ಖಾಸಗಿ ವಾಹನದ ಬದಲಾಗಿ ಸಾರ್ವಜನಿಕ ವಾಹನ ಬಳಕೆ ಮಾಡುವ ಮೂಲಕ ಮಾಲಿನ್ಯ ತಡೆಗೆ ಉತ್ತೇಜಿಸುತ್ತದೆ.
ಗ್ರೀನ್‌ಪೀಸ್ ಇಂಡಿಯಾ ದೇಶಾದ್ಯಂತ ಸುರಕ್ಷಿತ ಮತ್ತು ಹೆಚ್ಚು ಸುಸ್ಥಿರ ನಗರಗಳನ್ನು ರಚಿಸಲು ಮೂಲಸೌಕರ್ಯ ಸುಧಾರಣೆಗಳ ಜೊತೆಗೆ ಮಹಿಳೆಯರು ಮತ್ತು ತೃತೀಯ ಲಿಂಗಿ ಜನರಿಗೆ ಪಾವತಿ ಮುಕ್ತ ಸಾರ್ವಜನಿಕ ಸಾರಿಗೆಯನ್ನು ರಾಷ್ಟ್ರವ್ಯಾಪಿ ಅಳವಡಿಸಿಕೊಳ್ಳಲು ಕರೆ ನೀಡಿದೆ.
ಇದನ್ನೂ ಓದಿ: ಭಾರತದ ಬಾಹ್ಯಾಕಾಶ ವಿಷನ್ 2047 ಕುರಿತ ಮುನ್ನೋಟ ಹಂಚಿಕೊಂಡ ಇಸ್ರೋ ಮುಖ್ಯಸ್ಥ ಡಾ.ಎಸ್.ಸೋಮನಾಥ್