ಪೂರ್ವ ಗೋದಾವರಿ (ಆಂಧ್ರಪ್ರದೇಶ): ಜಿಲ್ಲೆಯ ಅನಂತಪಲ್ಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ₹ 7 ಕೋಟಿ ನಗದು ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಲಾರಿಯೊಂದು ಮುಂದೆ ಹೋಗುತ್ತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಟಾಟಾ ಏಸ್ ವಾಹನ ಪಲ್ಟಿಯಾಗಿದ್ದು, ಅದರಲ್ಲಿದ್ದ ಹಣದ ಪೆಟ್ಟಿಗೆಗಳು ರಸ್ತೆಗೆ ಬಿದ್ದಿವೆ. ವಾಹನ ಚಾಲಕನನ್ನು ರಕ್ಷಿಸಲು ಹೋದ ಸ್ಥಳೀಯರು ಹಣದ ಮೂಟೆಗಳನ್ನು ನೋಡಿ ಬೆಚ್ಚಿಬಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅನಂತಪಲ್ಲಿಯಲ್ಲಿ ಟಾಟಾ ಏಸ್ ವಾಹನದಲ್ಲಿ ಸಾಗಿಸುತ್ತಿದ್ದ 7 ಕೋಟಿ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯವಾಡ ಕಡೆಯಿಂದ ವಿಶಾಖಕ್ಕೆ ಹೋಗುತ್ತಿದ್ದ ಟಾಟಾ ಏಸ್ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಲ್ಟಿಯಾದ ಟಾಟಾ ಏಸ್ ವಾಹನದಲ್ಲಿದ್ದ 7 ಬಾಕ್ಸ್‌ಗಳಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ರಾಸಾಯನಿಕ ಪುಡಿಯ ಚೀಲಗಳ ನಡುವೆ ಹಣವಿಟ್ಟು ಸಾಗಿಸುತ್ತಿದ್ದರು ಎಂಬ ಅನುಮಾನ ಪೊಲೀಸರು ವ್ಯಕ್ತಪಡಿಸಿದ್ದಾರೆ. ಪೊಲೀಸರು ಸಂಪೂರ್ಣ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ವಾಹನ ಹೈದರಾಬಾದ್‌ನಿಂದ ದ್ವಾರಪುಡಿಗೆ ಹೋಗುತ್ತಿರುವುದು ಪತ್ತೆಯಾಗಿದೆ. ಅಪಘಾತದಲ್ಲಿ ವ್ಯಾನ್ ಚಾಲಕ ವೀರಭದ್ರ ರಾವ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪೊಲೀಸರು ವಶಪಡಿಸಿಕೊಂಡ ಹಣವನ್ನು ವೀರವಳ್ಳಿ ಟೋಲ್ ಪ್ಲಾಜಾಕ್ಕೆ ಕೊಂಡೊಯ್ದರು. ವೀರವಳ್ಳಿ ಟೋಲ್ ಪ್ಲಾಜಾದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಸಹಾಯದಿಂದ ಎಣಿಕೆ ಯಂತ್ರದೊಂದಿಗೆ ನಗದು ಎಣಿಕೆ ಮಾಡಲಾಯಿತು. ಈ ಘಟನೆಯ ಸಂಪೂರ್ಣ ಮಾಹಿತಿ ಪಡೆಯಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎಂದು ಪೊಲೀಸರು ಹೇಳುತ್ತಾರೆ. 7 ರಟ್ಟಿನ ಬಾಕ್ಸ್ ಗಳಲ್ಲಿ ಒಟ್ಟು 7 ಕೋಟಿ ರೂಪಾಯಿ ಇದೆ ಎಂದು ಡಿಎಸ್ಪಿ ರಾಮರಾವ್ ತಿಳಿಸಿದ್ದಾರೆ. ಹೈದರಾಬಾದ್‌ನ ನಾಚರಮ್ ಕೆಮಿಕಲ್ ಇಂಡಸ್ಟ್ರಿಯಿಂದ ಮಂಡಪೇಟ್‌ನಲ್ಲಿರುವ ಮಾಧವಿ ಆಯಿಲ್ ಮಿಲ್‌ಗೆ ಹಣ ವರ್ಗಾವಣೆಯಾಗುತ್ತಿತ್ತು. ನಗದನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು.
ಓದಿ: ಕೊಡಗು: ಹತ್ಯೆಗೈದು ಬಾಲಕಿಯ ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಅರೆಸ್ಟ್ - Kodagu Girl murder case