ಚೆನ್ನೈ, ತಮಿಳುನಾಡು: ವಿಶ್ವವೇ ಕಾತರದಿಂದ ಕಾಯುತ್ತಿದ್ದ ಅಮೆರಿಕದ 47ನೇ ಅಧ್ಯಕ್ಷರ ಆಯ್ಕೆ ಚುನಾವಣೆಯ ಮತದಾನ ನವೆಂಬರ್ 5 ರಂದು ಅಂದರೆ ನಿನ್ನೆ ಮುಕ್ತಾಯಗೊಂಡಿದೆ. ಇದೀಗ ಫಲಿತಾಂಶ ಹೊರಬಿದ್ದಿದೆ. ರಿಪಬ್ಲಿಕನ್ ಪಕ್ಷದಿಂದ ಕಣಕ್ಕಿಳಿದಿರುವ ಟ್ರಂಪ್ ಹಾಗೂ ಡೆಮಾಕ್ರಟ್ ಪಕ್ಷದಿಂದ ಕಣಕ್ಕಿಳಿದಿದ್ದ ಕಮಲಾ ಹ್ಯಾರಿಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಪ್ರಾಥಮಿಕ ವರದಿಗಳ ಪ್ರಕಾರ ಮಾಜಿ ಅಧ್ಯಕ್ಷ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ನಿರಾಶೆ ಅನುಭವಿಸಿದ್ದಾರೆ.
ಈ ವರದಿಗಳು ಏನೇ ಇದ್ದರೂ, ಕಮಲಾ ಹ್ಯಾರಿಸ್ ಅವರ ಗೌರವಾರ್ಥವಾಗಿ ತಮಿಳುನಾಡಿನಲ್ಲಿ ವಿಶೇಷ ಇಡ್ಲಿ ತಯಾರು ಮಾಡಲಾಗಿತ್ತು. ತಮಿಳುನಾಡು ಪಾಕ ಕಲಾ ಕಾರ್ಮಿಕ ಅಭಿವೃದ್ಧಿ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಇಡ್ಲಿ ಇನಿಯವನ್ ನೇತೃತ್ವದಲ್ಲಿ ಚೆನ್ನೈನ ಕೊಡುಂಕಯ್ಯೂರಿನಲ್ಲಿ 50 ಕೆ.ಜಿ. ಕಮಲಾ ಹ್ಯಾರಿಸ್ ಅವರ ಭಾವಚಿತ್ರವನ್ನು ಪೆಪ್ಪರ್ ಜೆಲ್ ಬಳಸಿ ಚಿತ್ರಿಸಿ ಸಾರ್ವಜನಿಕರಿಗೆ ಪ್ರದರ್ಶಿಸಿದರು.
ಈ ಬಗ್ಗೆ ಇಡ್ಲಿ ಇನಿಯವನ್ ಮಾತನಾಡಿದ್ದು, '‘ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ, ಗೆಲ್ಲುತ್ತಾರೆ ಎಂಬ ಭರವಸೆಯ ಮೇರೆಗೆ 50 ಕೆಜಿ ತೂಕದ ಇಡ್ಲಿ ತಯಾರಿಸಿ ಕಮಲಾ ಹ್ಯಾರಿಸ್ ಅವರ ಚಿತ್ರವನ್ನು ರೂಪಿಸಿದ್ದೇವೆ. ಕಮಲಾ ಹ್ಯಾರಿಸ್ ಗೆದ್ದರೆ ಪಟಾಕಿ ಸಿಡಿಸಿ, ಸಿಹಿ ನೀಡಿ ಸಂಭ್ರಮಿಸಲು ಮುಂದಾಗಿದ್ದೆವು. ಆದರೆ, ಚುನಾವಣಾ ಫಲಿತಾಂಶ ನೋಡಿದರೆ ಹಿನ್ನಡೆಯಾಗುತ್ತಿದೆ. ಆದರೆ ಕಮಲಾ ಹ್ಯಾರಿಸ್ ಅವರಿಗಾಗಿ ಈ ಇಡ್ಲಿಯನ್ನು ವಿನ್ಯಾಸಗೊಳಿಸುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ನೀಡಿದ್ದಾರೆ.
ಇದನ್ನು ಓದಿ:ಅಮೆರಿಕಕ್ಕೆ 'ಸುವರ್ಣಯುಗ' ಮತ್ತೆ ಮರಳಿಸುವೆ: ಡೊನಾಲ್ಡ್ ಟ್ರಂಪ್ ವಾಗ್ದಾನ