ETV Bharat / bharat

ಸಿಲಿಂಡರ್ ಸ್ಫೋಟ; 5 ಸಾವು, ಮೂವರಿಗೆ ಗಾಯ - ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಸಿಲಿಂಡರ್ ಸ್ಪೋಟ ಸಂಭವಿಸಿ ಐವರು ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಬುಲಂದ್​ಶಹರ್​ ಜಿಲ್ಲೆಯ ಸಿಕಂದರಾಬಾದ್​ನಲ್ಲಿ ನಡೆದಿದೆ.

cylinder-blast
ಬುಲಂದ್​ಶಹರ್​ನಲ್ಲಿ ಸಿಲಿಂಡರ್ ಸ್ಫೋಟ (ANI)
author img

By PTI

Published : 2 hours ago

ಲಖನೌ/ಬುಲಂದ್‌ಶಹರ್ (ಯುಪಿ) : ಬುಲಂದ್‌ಶಹರ್ ಜಿಲ್ಲೆಯ ಸಿಕಂದರಾಬಾದ್ ಪ್ರದೇಶದಲ್ಲಿ ಸಿಲಿಂಡರ್​ ಸ್ಪೋಟ ಸಂಭವಿಸಿದ ನಂತರ ಮನೆ ಕುಸಿದು ಬಿದ್ದಿದ್ದು, ಐವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಬುಲಂದ್‌ಶಹರ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ಪ್ರಕಾಶ್ ಸಿಂಗ್ ಮಾತನಾಡಿ, ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಶಟರ್ ಕೆಲಸದಲ್ಲಿ ತೊಡಗಿದ್ದ ರಿಯಾಜುದ್ದೀನ್ ಎಂಬಾತನ ಮನೆಯಲ್ಲಿ ಸುಮಾರು 19 ಜನರು ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

"ಸಿಕಂದರಾಬಾದ್‌ನ ಆಶಾಪುರಿ ಕಾಲೋನಿಯಲ್ಲಿ ರಾತ್ರಿ 8.30 ರಿಂದ 9.00 ರ ನಡುವೆ ಸಿಲಿಂಡರ್ ಸ್ಫೋಟ ಸಂಭವಿಸಿ ಇಡೀ ಮನೆ ಕುಸಿದು ಬಿದ್ದಿದೆ. ಗಾಯಗೊಂಡ ಮೂವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ'' ಎಂದು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್​ ಮಹಾ ನಿರ್ದೇಶಕರು ಹೇಳಿದ್ದಿಷ್ಟು: ಮೀರತ್ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಧ್ರುವ ಕಾಂತ್ ಠಾಕೂರ್ ಮಾತನಾಡಿ, ''ಐದು ಜನರ ಸಾವಿನ ಬಗ್ಗೆ ಇದುವರೆಗೆ ಮಾಹಿತಿ ಬಂದಿದೆ ಮತ್ತು ಕೆಲವರು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ'' ಎಂದು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಐದು ಜನರ ಸಾವನ್ನು ಬುಲಂದ್‌ಶಹರ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಖಚಿತಪಡಿಸಿದ್ದು, 10 ಜನರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.

ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸಿಬ್ಬಂದಿ : ಸಿಲಿಂಡರ್ ಸ್ಫೋಟ ಸಂಭವಿಸಿದ್ದು ಹೇಗೆ? ಎಂಬ ಮಾಧ್ಯಮದವರ ಪ್ರಶ್ನೆಗೆ, ತನಿಖೆಯ ನಂತರ ಸ್ಪಷ್ಟಪಡಿಸಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್, ವೈದ್ಯಕೀಯ ಮತ್ತು ಸ್ಥಳೀಯ ಆಡಳಿತದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.

"ಮುಖ್ಯಮಂತ್ರಿ (ಯೋಗಿ ಆದಿತ್ಯನಾಥ್) ಘಟನೆಯ ಬಗ್ಗೆ ತಕ್ಷಣ ಗಮನಹರಿಸಿದ್ದಾರೆ. ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. ಗಾಯಾಳುಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶನ ನೀಡಿದ್ದಾರೆ'' ಎಂದು ಡಿಸಿ ಮಾಹಿತಿ ಒದಗಿಸಿದರು.

ರಕ್ಷಣಾ ತಂಡಗಳಿಂದ ಮುನ್ನೆಚ್ಚರಿಕೆ: ''ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅವಶೇಷಗಳಡಿಯಲ್ಲಿ ಯಾರೂ ಸಿಕ್ಕಿಹಾಕಿಕೊಂಡಿಲ್ಲ ಎಂದು ಬದುಕುಳಿದ ಕುಟುಂಬದ ಸದಸ್ಯರು ಹೇಳಿದ್ದರೂ, ರಕ್ಷಣಾ ತಂಡಗಳು ತಮ್ಮ ಕೆಲಸವನ್ನು ನಿರ್ವಹಿಸುವಾಗ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿವೆ'' ಎಂದು ಬುಲಂದ್‌ಶಹರ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ : ಜೋಧ್​ಪುರ ಸಿಲಿಂಡರ್​ ಸ್ಫೋಟ: 18 ಕ್ಕೇರಿದ ಸಾವಿನ ಸಂಖ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.