ETV Bharat / bharat

15 ದಿನದಲ್ಲಿ 4,500 ಫೋನ್‌ ಟ್ಯಾಪ್, ನೂರಾರು ದಾಖಲೆ ನಾಶ: ಹೈದರಾಬಾದ್ ಫೋನ್ ಕದ್ದಾಲಿಕೆ ಕೇಸ್​​ಗೆ ಬಿಗ್​ ಟ್ವಿಸ್ಟ್​​! - Hyderabad Phone Tapping Case

ಹೈದರಾಬಾದ್​​ ಫೋನ್​ ಕದ್ದಾಲಿಕೆ ಪ್ರಕರಣದಲ್ಲಿ ದೊಡ್ಡ ಅಂಶವೊಂದು ಹೊರಬಿದ್ದಿದೆ. 15 ದಿನದಲ್ಲಿ 4500 ಕ್ಕೂ ಅಧಿಕ ಪೋನ್​ಗಳನ್ನು ಕದ್ದಾಲಿಕೆ ಮಾಡಲಾಗಿತ್ತು ಎಂಬುದು ಗೊತ್ತಾಗಿದೆ.

ಹೈದರಾಬಾದ್ ಫೋನ್ ಕದ್ದಾಲಿಕೆ ಕೇಸ್
ಹೈದರಾಬಾದ್ ಫೋನ್ ಕದ್ದಾಲಿಕೆ ಕೇಸ್ (ETV Bharat)
author img

By ETV Bharat Karnataka Team

Published : Sep 23, 2024, 3:13 PM IST

ಹೈದರಾಬಾದ್: ಅಕ್ರಮವಾಗಿ ಫೋನ್​ ಕದ್ದಾಲಿಕೆ ಪ್ರಕರಣದಲ್ಲಿ ಆಘಾತಕಾರಿ ಅಂಶಗಳು ಹೊರಬಿದ್ದಿವೆ. ಕೇವಲ 15 ದಿನದಲ್ಲಿ ಏಕಕಾಲದಲ್ಲಿ 4500 ಫೋನ್​​ಗಳನ್ನು ಕದ್ದಾಲಿಕೆ ಮಾಡಲಾಗಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ಪ್ರಮುಖ ವ್ಯಕ್ತಿಗಳ ಫೋನ್ ಸಂಭಾಷಣೆಯುಳ್ಳ 340 ಜಿಬಿ ಡೇಟಾವನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸ್​​ ತನಿಖೆಯ ವರದಿ ತಿಳಿಸಿದೆ.

ಹಿಂದಿನ ಬಿಆರ್​ಎಸ್​ ಸರ್ಕಾರದ ಅವಧಿಯಲ್ಲಿ ಚುನಾವಣೆಗೂ ಮೊದಲು ಮತ್ತು ಚುನಾವಣೆಯ ವೇಳೆ ಗಣ್ಯರ ಫೋನ್​​ ಕದ್ದಾಲಿಸಿದ ಪ್ರಕರಣ ತನಿಖೆ ನಡೆಸುತ್ತಿರುವ ತನಿಖಾ ತಂಡ ಇಂಥದ್ದೊಂದು ಅಚ್ಚರಿಯ ಅಂಶವನ್ನು ಪತ್ತೆ ಮಾಡಿದೆ. ವಿಶೇಷ ಗುಪ್ತಚರ ವಿಭಾಗವು (ಎಸ್​​ಐಬಿ) ಪೊಲೀಸ್​ ಅಧಿಕಾರಿಗಳು, ಸಿಎಂ ರೇವಂತ್​ ರೆಡ್ಡಿ ಅವರು ಸೇರಿದಂತೆ ಪ್ರಮುಖರ ಫೋನ್​​ ಕರೆಗಳನ್ನು ಅಕ್ರಮವಾಗಿ ಟ್ಯಾಪಿಂಗ್​ ಮಾಡಲಾಗಿದೆ ಎಂದು ವರದಿಯಲ್ಲಿದೆ.

ಕರೆಗಳ ಮಾಹಿತಿ ನಾಶ: ನವೆಂಬರ್​​ 15 ರಿಂದ 30 ನೇ ತಾರೀಖಿನ 15 ದಿನಗಳ ಅವಧಿಯಲ್ಲಿ 4500 ಕ್ಕೂ ಅಧಿಕ ಫೋನ್​​ಗಳನ್ನು ಕದ್ದಾಲಿಸಲಾಗಿದೆ. ಅದರಲ್ಲಿ ನೂರಕ್ಕೂ ಅಧಿಕ ಕರೆಗಳ ಮಾಹಿತಿಯನ್ನು ನಾಶ ಮಾಡಲಾಗಿದೆ. ಇದು ಚುನಾವಣಾ ಅವಧಿಯಲ್ಲಿ ನಡೆದ ಅಕ್ರಮವಾಗಿದೆ. ಬಿಎಸ್​​ಎನ್​​ಎಲ್​, ವೊಡಾಫೋನ್​, ಜಿಯೋ ನೆಟ್​​ವರ್ಕ್​ಗಳ ಫೋನ್​​ಗಳನ್ನು ಟ್ಯಾಪ್​ ಮಾಡಲಾಗಿದೆ ಎಂದು ಪಬ್ಲಿಕ್​​ ಪ್ರಾಸಿಕ್ಯೂಟರ್​ ಕೋರ್ಟ್​ಗೆ ತಿಳಿಸಿದರು.

ಪ್ರಕರಣದ ನಾಲ್ಕನೇ ಆರೋಪಿ ಮೇಕಲ ತಿರುಪತಣ್ಣ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯ ವೇಳೆ ಈ ವಿಷಯ ಬಹಿರಂಗವಾಗಿದೆ. ನಾಟಕೀಯ ಬೆಳವಣಿಗೆಯಲ್ಲಿ, ಆರೋಪಿಗಳು ಏರ್‌ಟೆಲ್‌ನ ನೆಟ್‌ವರ್ಕ್‌ನಲ್ಲಿರುವ ನೂರಾರು ಫೋನ್‌ಗಳ ಟ್ಯಾಪಿಂಗ್ ಡೇಟಾವನ್ನು ನಾಶಪಡಿಸಿದ್ದಾರೆ. ರೇವಂತ್ ರೆಡ್ಡಿ ಅವರಂತಹ ಪ್ರಮುಖ ವ್ಯಕ್ತಿಗಳು ಸೇರಿದಂತೆ ವಿವಿಧ ರಾಜಕೀಯ ನಾಯಕರು ಮತ್ತು ಉದ್ಯಮಿಗಳ ಫೋನ್ ಸಂಭಾಷಣೆಗಳನ್ನು ಒಳಗೊಂಡಿರುವ 340 ಜಿಬಿ ಡೇಟಾವನ್ನು ಹೊರತೆಗೆಯಲಾದ ಮಾಹಿತಿಯನ್ನು ಪೊಲೀಸ್ ತನಿಖೆಗಳು ಬಹಿರಂಗಪಡಿಸಿವೆ.

ಶೀಘ್ರ ಪೂರಕ ಚಾರ್ಜ್‌ಶೀಟ್: ಹೈದರಾಬಾದ್ ಪೊಲೀಸರು ಈಗಾಗಲೇ ಪ್ರಕರಣದ ಕುರಿತು ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಪೂರಕ ಚಾರ್ಜ್​ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ವಿದೇಶಕ್ಕೆ ಪರಾರಿಯಾಗಿರುವ ಪ್ರಮುಖ ಆರೋಪಿಗಳಾದ ಪ್ರಭಾಕರ್ ರಾವ್ ಮತ್ತು ಶ್ರವಣ್ ರಾವ್ ಅವರನ್ನು ಅಲ್ಲಿಂದ ಕರೆತರುವ ಕೆಲಸ ನಡೆಯುತ್ತಿದೆ. ಆರೋಪಿಗಳನ್ನು ಗಡಿಪಾರು ಮಾಡಲು ಅನುಕೂಲವಾಗುವಂತೆ ಇಂಟರ್‌ಪೋಲ್‌ನಿಂದ ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಸಿಬಿಐ ಮನವಿ ಮಾಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿಯ ಬರ್ಬರ ಕೊಲೆ ಕೇಸ್: ಆರೋಪಿಯ ಸುಳಿವು ಲಭ್ಯ- ಕಮಿಷನರ್ - Bengaluru Woman Murder Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.