ETV Bharat / bharat

ರೋಗಿಯ ಕಿಡ್ನಿಯಲ್ಲಿದ್ದವು ಬರೋಬ್ಬರಿ 418 ಕಲ್ಲುಗಳು; ವೈದ್ಯಲೋಕಕ್ಕೆ ಅಚ್ಚರಿ! - kidney stones

ಸೋಮಾಜಿಗುಡಾದ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಅಂಡ್ ಯುರಾಲಜಿ (ಎಐಎನ್‌ಯು) ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರ ಕಿಡ್ನಿಯಲ್ಲಿದ್ದ 418 ಕಲ್ಲುಗಳನ್ನು ಹೊರ ತೆಗೆಯಲಾಗಿದೆ.

ರೋಗಿಯ ಕಿಡ್ನಿಯಲ್ಲಿದ್ದವು ಬರೋಬ್ಬರಿ 418 ಕಲ್ಲುಗಳು

author img

By ETV Bharat Karnataka Team

Published : Mar 14, 2024, 12:18 PM IST

ಹೈದರಾಬಾದ್: ಮೂತ್ರಪಿಂಡ ನೋವಿನಿಂದ ಆಸ್ಪತ್ರೆಗೆ ದಾಖಲಾದ ರೋಗಿಯ ಕಿಡ್ನಿಯಲ್ಲಿ ಭಾರೀ ಸಂಖ್ಯೆಯ ಕಲ್ಲುಗಳು ಕಂಡುಬಂದಿವೆ. 2 ಗಂಟೆಗಳ ಕಾಲ ವೈದ್ಯರು ಚಿಕಿತ್ಸೆ ನಡೆಸಿ ತೆಗೆದಿದ್ದು ಬರೋಬ್ಬರಿ 418 ಕಲ್ಲುಗಳನ್ನು. ಇದನ್ನು ಕಂಡು ವೈದ್ಯರೇ ದಂಗಾಗಿದ್ದಾರೆ. ಸದ್ಯ ವ್ಯಕ್ತಿ ಈಗ ಸುಧಾರಿಸಿಕೊಂಡಿದ್ದಾರೆ.

ಇಲ್ಲಿನ ಸೋಮಾಜಿಗುಡಾದ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಅಂಡ್ ಯುರಾಲಜಿ (ಎಐಎನ್‌ಯು) ಆಸ್ಪತ್ರೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. 60 ವರ್ಷದ ವ್ಯಕ್ತಿಯೊಬ್ಬರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆತನನ್ನು ವೈದ್ಯರು ತಪಾಸಣೆ ನಡೆಸಿದರು. ಈ ವೇಳೆ ಕಿಡ್ನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲ್ಲುಗಳು ಇರುವುದು ಕಂಡು ಬಂದಿದೆ.

ವೈದ್ಯರಾದ ಡಾ. ಕೆ.ಪೂರ್ಣಚಂದ್ರರೆಡ್ಡಿ, ಡಾ.ಗೋಪಾಲ್, ಮತ್ತು ಡಾ.ದಿನೇಶ್ ಅವರ ತಂಡ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದೆ. ಪರ್ಕ್ಯುಟೇನಿಯಸ್ ನೆಫ್ರೊಲಿಥೊಟೊಮಿ (PCNL) ವಿಧಾನದ ಮೂಲಕ ಚಿಕಿತ್ಸೆ ನಡೆಸಿದ್ದಾರೆ. ಹಿರಿಯ ವ್ಯಕ್ತಿಯ ಮೂತ್ರಪಿಂಡದಲ್ಲಿ ಬರೋಬ್ಬರಿ 418 ವಿವಿಧ ಪ್ರಮಾಣದ ಕಲ್ಲುಗಳನ್ನು ಹೊರತೆಗೆಯಲಾಗಿದೆ. ಸದ್ಯ ಮೂತ್ರಪಿಂಡದ ಕಾರ್ಯವು ಸುಧಾರಿಸಿದ್ದರಿಂದ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ತೀವ್ರ ನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲಾದಾಗ ವಿವಿಧ ಪರೀಕ್ಷೆಗಳಲ್ಲಿ ಅವರ ಮೂತ್ರಪಿಂಡದಲ್ಲಿ ಕಲ್ಲುಗಳು ಇರುವುದು ಕಂಡುಬಂತು. 2 ಗಂಟೆಗಳ ಕಾಲ ಪಿಸಿಎನ್​ಎಲ್​ ಚಿಕಿತ್ಸೆ ಮೂಲಕ ಕಲ್ಲುಗಳನ್ನು ಹೊರತೆಗೆಯಲಾಗಿದೆ. ವ್ಯಕ್ತಿ ಚೇತರಿಸಿಕೊಂಡಿದ್ದಾರೆ. ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಡಿಮೆ ಉಪ್ಪು ಮತ್ತು ಸಾಕಷ್ಟು ನೀರು ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಪಿಸಿಎನ್​ಎಲ್​ ಚಿಕಿತ್ಸೆಯು ಕಲ್ಲುಗಳನ್ನು ಛೇದಿಸದೇ ನ್ಯಾನೋ ಕ್ಯಾಮೆರಾ ಮತ್ತು ಲೇಸರ್ ಪ್ರೋಬ್‌ಗಳನ್ನು ಬಳಸಿ ಸಣ್ಣ ರಂಧ್ರಗಳ ಮೂಲಕ ಕಲ್ಲುಗಳನ್ನು ಹೊರತೆಗೆಯುವುದಾಗಿದೆ.

ಇದನ್ನೂ ಓದಿ: ಕಿಡ್ನಿ ದಾನ ಮಾಡಿ ಮಗಳ ಜೀವ ಉಳಿಸಿದ ತಾಯಿ; ಪುತ್ರಿಗೆ ಮರುಜನ್ಮ ನೀಡಿದ ಅಮ್ಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.